ಮುಕ್ಕ: ಜೀವದ ಹಂಗು ತೊರೆದು ಸಮುದ್ರದ ಅಲೆಗಳಿಗೆ ಎದೆಯೊಡ್ಡಿ ಮೀನುಗಾರಿಕಾ ವೃತ್ತಿಯನ್ನು ನಿರ್ವಹಿಸುತ್ತಿರುವ ಮೀನುಗಾರ ಬಾಂಧವರಿಗೆ ಸದಾ ಶ್ರೇಯಸ್ಸನ್ನು ಬಯಸಬೇಕು.ಅವರಿಗೆ ಯಾವುದೇ ರೀತಿಯಲ್ಲಿ ವಿಪತ್ತುಗಳು ಬಾರದಿರಲಿ ಎಂದು ಮುಕ್ಕ ಮಿತ್ರಪಟ್ಣ ಮೊಗವೀರ ಸಂಘದ ಗಂಗಾಧರ ಗುರಿಕಾರರು ಹೇಳಿದರು.
ಅವರು ಮುಕ್ಕ ಮಿತ್ರಪಟ್ಣ ಮೊಗವೀರ ಸಂಘದ ಆಶ್ರಯದಲ್ಲಿ ಮತ್ಸ್ಯ ಸಂಪತಿಗಾಗಿ ಮಿತ್ರಪಟ್ಣದ ಸಮುದ್ರ ಕಿನಾರೆಯಲ್ಲಿ ಸಮುದ್ರ ಪೂಜೆ ನೆರವೇರಿಸಿ ವಿಶೇಷವಾಗಿ ಪ್ರಾರ್ಥಿಸಿದರು.
ಮೊಗವೀರ ಬಾಂಧವರು ಶ್ರೀರಾಮ ಭಜನಾ ಮಂದಿರದಿಂದ ಭಜನಾ ಸಂರ್ಕೀತನೆಯೊಂದಿಗೆ ಮೆರವಣಿಗೆಯಲ್ಲಿ ತೆರಳಿ ಗಂಗಾದೇವಿಗೆ ಕ್ಷೀರಾ,ಹೂವು,ತೆಂಗಿನಕಾಯಿ, ಫಲವಸ್ತುಗಳನ್ನು ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮಿತ್ರಪಟ್ಣ ಮೊಗವೀರ ಸಂಘದ ಅಧ್ಯಕ್ಷ ಸುರೇಶ್ ಕಕೇ೯ರ, ಪ್ರಧಾನ ಕಾರ್ಯದರ್ಶಿ ರಾಜೇಶ್ ಆರ್, ಕೋಶಾಧಿಕಾರಿ ಯಶ್ ರಾಜ್ ಕರ್ಕೇರ, ಅರ್ಚಕರಾದ ಕಿಶೋರ್ ಕುಮಾರ್, ಧನುಷ್ ಬಂಗೇರ, ಗಂಗಾಧರ ಗುರಿಕಾರ,ದಿನಕರ ಎಮ್, ಶ್ರೀರಾಮ ಮಂದಿರದ ಅಧ್ಯಕ್ಷ ಪ್ರದೀಪ್ ಕುಂದರ್,ವಿಜಯ ಪುತ್ರನ್,ಪುಷ್ಪರಾಜ್ ಕರ್ಕೇರ,ಪುರಂದರ ಬಂಗೇರ,ಯಜ್ಞೇಶ್ ಕರ್ಕೇರ, ಸುನೀಲ್ ಸಾಲ್ಯಾನ್, ಲೋಕೇಶ್ ಸಾಲ್ಯಾನ್, ಲೋಕೇಶ್ ಬಂಗೇರ,ಲಕ್ಷ್ಮಣ್ ಪುತ್ರನ್, ರಾಜ್ ಕುಮಾರ್ ಕಕೇ೯ರ,ವಸಂತ್ ಸುವಣ೯,ರಾಜೇಶ್ ಸುವಣ೯, ಮನೋಜ್ ಕರ್ಕೇರ,ಕಿಶೋರ್ ಪುತ್ರನ್,ಪ್ರಶಾಂತ್ ಸುವರ್ಣ,ಚಂದ್ರಶೇಖರ ಪುತ್ರನ್, ಸಂದೀಪ್ ಬಂಗೇರ,ಪ್ರಥಮ್ ಸುವಣ, ನವೀನ್ ಸುವರ್ಣ,ಉದಯ ಸುವರ್ಣ,ಪ್ರವೀಣ್ ಕುಂದರ್,ಮಹಿಳಾ ಸಂಘದ ಅಧ್ಯಕ್ಷೆ ಕವಿತಾ ಶರತ್, ಅಹಲ್ಯಾ ಕಾಂಚನ್,ವಸಂತಿ.ಎಸ್ ಕೋಟ್ಯಾನ್, ಗೀತಾರಾಜ್ ಕುಮಾರ್,ಜಲಜಾ ಸಾಲ್ಯಾನ್,ವನಜ ಪಿ.ಕಕೇರ,ಪದ್ಮಾವತಿ ಕೆ.ಕರ್ಕೇರ,ವೇದವತಿ ಬಂಗೇರ ಮುಂತಾದವರು ಉಪಸ್ಥಿತರಿದ್ದರು.