ಮುಕ್ಕ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ: ಸೈಬರ್ ಸೆಕ್ಯುರಿಟಿ ಪರಿಕರಗಳು-ತಂತ್ರಗಳು ಕಾರ್ಯಾಗಾರ

0
53

ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಸೈಬರ್ ಸೆಕ್ಯೂರಿಟಿ ಆಂಡ್ ಸೈಬರ್ ಫೊರೆನ್ಸಿಕ್ಸ್ ವಿಭಾಗ ಮತ್ತು ಎಂ.ಸಿ.ಎ. ವಿಭಾಗದ ವತಿಯಿಂದ ಐಇಇಇ (ಇನ್ಸ್ಟಿಟ್ಯೂಟ್ ಆಫ್ ಇಲೆಕ್ಟ್ರಿಕಲ್ ಆಂಡ್ ಇಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್) ಸಹಭಾಗಿತ್ವದಲ್ಲಿ “ಸೈಬರ್ ಸೆಕ್ಯುರಿಟಿ ಪರಿಕರಗಳು ಮತ್ತು ತಂತ್ರಗಳು” ವಿಷಯದ ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ಆಯೋಜಿಸಲಾಯಿತು. ಪ್ರಸಿದ್ಧ ಸೈಬರ್ ಸೆಕ್ಯೂರಿಟಿ ತಂತ್ರಜ್ಞರು ಹಾಗೂ ಬೆಂಗಳೂರಿನ ಟ್ರೆಸ್ಲೇ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಯದು ಕೃಷ್ಣ ರವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಎರಡು ದಿನಗಳ ತರಬೇತಿ ಅವಧಿಯಲ್ಲಿ, ಸಂಪನ್ಮೂಲ ವ್ಯಕ್ತಿಗಳಾದ ಯದು ಕೃಷ್ಣ ರವರು ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಏಜೆಂಟ್‌ಗಳೊಂದಿಗೆ ಸೈಬರ್ ರಕ್ಷಣೆ, ಆಟೋಮೊಬೈಲ್ ಹ್ಯಾಕಿಂಗ್ ಮತ್ತು ಭದ್ರತೆ, ವಿಂಡೋಸ್ ತನಿಖೆಗಳು, ಮಾಲ್‌ವೇರ್ ವಿಶ್ಲೇಷಣೆ, ಆಕ್ರಮಣಕಾರಿ ಭದ್ರತೆ, ಭದ್ರತಾ ಪರೀಕ್ಷೆಯ ಪ್ರಕಾರಗಳು ಮತ್ತು ಉಲ್ಲಂಘನೆ ದಾಳಿ ಸಿಮ್ಯುಲೇಶನ್ ಸೇರಿದಂತೆ ಆಧುನಿಕ ಕೈಗಾರಿಕಾ ಮಟ್ಟದ ವಿಷಯಗಳನ್ನು ಕುರಿತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಎನ್. ಹೆಗಡೆ ಯವರು ಪ್ರಾಸ್ತಾವಿಕ ಭಾಷಣ ಮಾಡಿದರು. ಶ್ರೀನಿವಾಸ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕರಾದ ಡಾ. ಪ್ರವೀಣ್ ಬಿ.ಎಂ, ಸೈಬರ್ ಸೆಕ್ಯುರಿಟಿ ಮತ್ತು ಸೈಬರ್ ಫೋರೆನ್ಸಿಕ್ಸ್ ವಿಭಾಗದ ಮುಖ್ಯಸ್ಥರಾದ ಪ್ರೊ. ಗೌರವ್ ಪ್ರಸಾದ್, ಎಂ.ಸಿ.ಎ. ವಿಭಾಗದ ಮುಖ್ಯಸ್ಥರಾದ ಪ್ರೊ. ರಮೀಸಾ ಕೆ, ಕಾರ್ಯಕ್ರಮದ ಸಂಯೋಜಕರು ಹಾಗೂ ಐಇಇಇ ಸಮನ್ವಯಕಾರರಾದ ಪ್ರೊ. ವೈಶಾಕ್ ಆರ್., ಕಾರ್ಯಕ್ರಮದ ಸಹ-ಸಂಯೋಜಕರಾದ ಪ್ರೊ. ರುಕ್ಸಾನಾ ಬಾನು, ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಮತ್ತು ವಿದ್ಯಾರ್ಥಿಗಳು ಉದ್ಘಾಟನಾ ಸಮಾರಂಭದಲ್ಲಿ ಹಾಗೂ ಎರಡು ದಿನಗಳ ಅವಧಿಯ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದರು. ಇವಾನ್ ಆಂಟೊ ಕಾರ್ಯಕ್ರಮವನ್ನು ನಿರೂಪಿಸಿದರು. 

LEAVE A REPLY

Please enter your comment!
Please enter your name here