ಕವನಗಳ ಪ್ರಕಾರಗಳಿಗೆ ಅನುಗುಣವಾಗಿ ಬರೆಯುವುದನ್ನು ರೂಢಿಸಿಕೊಳ್ಳುವುದು ಮುಖ್ಯ : ಗೋಪಾಲಕೃಷ್ಣ ಭಟ್ ಮನವಳಿಕೆ
ಪ್ರಗೀತ ಕೃತಿ ಬಿಡುಗಡೆ : ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ :50 ಕ್ಕೂ ಅಧಿಕ ಮಂದಿಯಿಂದ ಕವನ ವಾಚನ
ಬೆಳ್ಳಾರೆ, ಫೆ.15 : ಕವನಗಳಲ್ಲಿ ಹಲವಾರು ಪ್ರಕಾರಗಳಿದ್ದು ಮುಖ್ಯವಾಗಿ ಯುವ ಕವಿಗಳು ಅವುಗಳ ನಿಯಮಕ್ಕನುಗುಣವಾಗಿ ಬರೆಯುವುದನ್ನು ರೂಢಿಸಿಕೊಳ್ಳುವುದು ಮುಖ್ಯ ಎಂದು ವಾಹಿನಿ ಕಲಾ ಸಂಘ ಸುಳ್ಯ ಘಟಕದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಮನವಳಿಕೆ ಹೇಳಿದರು.

ಮುಕ್ಕೂರು ನೇಸರ ಯುವಕ ಮಂಡಲ, ನೇಸರ ಯುವತಿ ಮಂಡಲ ಆಶ್ರಯದಲ್ಲಿ ಪುತ್ತೂರು ಚಿಗುರೆಲೆ ಸಾಹಿತ್ಯ ಬಳಗದ ಸಹಕಾರದೊಂದಿಗೆ ನೇಸರ ದಶಪ್ರಣತಿ ಪ್ರಯುಕ್ತ ಫೆ. 15 ರಂದು ಮುಕ್ಕೂರು ಶಾಲಾ ಸಭಾಂಗಣದಲ್ಲಿ ನಡೆದ ಅಂತರ್ ಜಿಲ್ಲಾಮಟ್ಟದ ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕವಿಭಾವ ಅಕ್ಷರರೂಪಕ್ಕೆ ಇಳಿದಾಗ ಅದುವೇ ಕವನದ ಹುಟ್ಟು. ಸಾಮಾನ್ಯವಾಗಿ ಪ್ರಚಲಿತ ವಿದ್ಯಮಾನಗಳು ಹಲವಾರು ಕವನಗಳ ಹುಟ್ಟಿಗೆ ಕಾರಣವಾಗುತ್ತದೆ. ಮೌಲ್ಯಯುತ ಸಾಹಿತ್ಯ ರಚನೆ ಓದುಗರಿಗೆ ಹತ್ತಿರವಾಗುತ್ತದೆ. ಒಬ್ಬ ಕವಿ ಬರೆದುದು ಹೆಚ್ಚು ಜನರನ್ನು ತಲುಪಿ ಅವರಿಂದ ಉತ್ತಮ ಪ್ರತಿಕ್ರಿಯೆ ಬಂದಾಗ ಅದುವೇ ಪ್ರಶಸ್ತಿಎಂದ ಅವರು ಇತ್ತೀಚೆಗೆ ಜಾಲತಾಣ ಅತಿ ಹೆಚ್ಚು ಬಳಕೆಗೆ ಬಂದಾಗ ಸಾಹಿತ್ಯ ಕ್ಷೇತ್ರದಲ್ಲಿ ಬರೆಯುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿರುವುದು ಸಂತೋಷದ ವಿಚಾರ ಎಂದರು.
ಸುಳ್ಯ ಚುಟುಕು ಪರಿಷತ್ ಅಧ್ಯಕ್ಷೆ ಅಶ್ವಿನಿ ಕೋಡಿಬೈಲು ಮಾತನಾಡಿ, ಕವನ ಅನ್ನುವುದು ಕಟ್ಟುವ ಕ್ರಿಯೆ ಅಲ್ಲ, ಹುಟ್ಟುವ ಕ್ರಿಯೆ. ಕವನಗಳು ಹೃದಯದಲ್ಲಿ ಹುಟ್ಟಿ ಮೆದುಳಿನಲ್ಲಿ ಕೊನೆಗೊಳ್ಳುತ್ತದೆ. ಹಾಗಾಗಿ ಭಾವನೆಗಳ ಉಗಮ ಹೃದಯಲ್ಲಿ ಆಗುತ್ತದೆ. ನಂತರ ಅದಕ್ಕೆ ನಮ್ಮ ಜಾನದ ಪರಿಧಿಯಲ್ಲಿಅಕ್ಷರ ರೂಪ ನೀಡಲು ಪ್ರಾರಂಭಿಸುತ್ತೇವೆ ಎಂದ ಅವರು ಕವನಗಳು ಯೋಗದದಂತೆ. ನಮ್ಮ ಭಾವನೆಗಳನ್ನು ಸಮತೋಲನೆಕ್ಕೆ ತರುವ ಶಕ್ತಿ ಹೊಂದಿದೆ. ಹಾಗಾಗಿ ಧ್ಯಾನಸ್ಥ ಸ್ಥಿತಿಯಲ್ಲಿ ಕವನ ಹುಟ್ಟಬೇಕು ಎಂದು ಅವರು ವಿಶ್ಲೇಷಿಸಿದರು.
ಬೆಳ್ಳಾರೆ ಪೊಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು ಅವರು ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಕವಿತೆಗಳು ನಮ್ಮ ಭಾವನೆಯ ಪ್ರತಿರೂಪ. ಅದು ವ್ಯಕ್ತಿಯಿಂದ ವ್ಯಕ್ತಿಯಲ್ಲಿ ಬೇರೆ ರೀತಿಯಲ್ಲಿ ವ್ಯಕ್ತವಾಗಬಹುದು. ಸಾಹಿತ್ಯ ಕೃತಿಗಳ ಅಧ್ಯಯನದಿಂದ ಬೌದ್ಧಿಕ ವಿಕಸನ ಜತೆಗೆ ಬದುಕಿನ ಸತ್ಯ ಅರಿವಾಗುತ್ತದೆ. ಹಾಗಾಗಿ ಚೊಕ್ಕಾಡಿ, ಕಾರಂತರ ಸ್ಪರ್ಶ ಇರುವ ಈ ಕರಾವಳಿ ನೆಲೆ ನನ್ನಿಷ್ಟದ ನೆಲ ಎಂದ ಅವರು, ಮುಕ್ಕೂರು ನೇಸರ ಯುವಕ ಮಂಡಲದ ಸಾಮಾಜಿಕ ಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸಿದ್ದೇನೆ. ಪ್ರತಿಯೊಂದು ಊರಲ್ಲಿಯೂ ಇಂತಹ ಸಂಘಟನೆ ಇರಬೇಕು. ಊರಿನ ಬಾಂಧವ್ಯ ವೃದ್ಧಿಗೆ ಪೂರಕ ಎಂದರು.

ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ, ಸಾಹಿತ್ಯ ಪರಿಷತ್ತು ಮಾಡಬೇಕಾದ ಕಾರ್ಯವನ್ನು ನೇಸರ ಯುವಕ ಮಂಡಲ ಮಾಡಿರುವುದು ಶ್ಲಾಘನೀಯ ಸಂಗತಿ. ಯುವಕ ಮಂಡಲ ಚಿಂತೆನ ಅರ್ಥಪೂರ್ಣ. ಅದರ ಜತೆಗೆ ಸಮಯ ಪರಿಪಾಲನೆಗೆ ಹಮ್ಮಿಕೊಂಡಿರುವ ಸ್ಪರ್ಧೆಯು ನೇಸರ ಸಂಸ್ಥೆಯ ಹೊಸತನಕ್ಕೆ ಹಿಡಿದ ಕೈಗನ್ನಡಿ ಎಂದ ಅವರು, ಭವಿಷ್ಯದಲ್ಲಿ ನೇಸರ ಸಂಸ್ಥೆಯು ಸ್ಮರ್ಧಾತ್ಮಕ ಪರೀಕ್ಷೆಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಕಾರ್ಯ ನಡೆಸಬೇಕು. ಇದಕ್ಕೆ ನಮ್ಮ ಸಹಕಾರವೂ ಇದೆ ಎಂದರು.
ನೇಸರ ದಶಪ್ರಣತಿ ಸಮಿತಿ ಅಧ್ಯಕ್ಷ ಡಾ| ನರಸಿಂಹ ಶರ್ಮ ಕಾನಾವು ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ 60 ಕ್ಕೂ ಅಧಿಕ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡಿರುವ ನೇಸರ ಈ ಬಾರಿ ಕವಿಗೋಷ್ಟಿಯಂತಹ ಸಾಹಿತ್ಯ ಆಧಾರಿತ ಕಾರ್ಯಕ್ರಮ ಆಯೋಜಿಸಿದೆ. ಅಂತರ್ ಜಿಲ್ಲೆಯಿಂದ ಹಲವಾರು ಕವಿಗಳು ನಮ್ಮ ಊರಿಗೆ ಆಗಮಿಸಿ ಕವನ ವಾಚಿಸುತ್ತಿರುವುದು ಖುಷಿಯ ಸಂಗತಿ. ಹಲವು ಕ್ಷೇತ್ರಗಳ ಪ್ರತಿಭೆಗೆ ಅವಕಾಶ ನೀಡುತ್ತಿರುವ ನೇಸರ ಸಂಸ್ಥೆ ಇನ್ನಷ್ಟು ಹೊಸತನದ ಮೂಲಕ ಸಮಾಜದ ಮುಂದೆ ತನ್ನ ಪ್ರಭೆಯನ್ನು ಬೀರಲಿದೆ ಎಂದರು.
ನೇಸರ ಯುವಕ ಮಂಡಲದ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಸಣ್ಣ ಊರಿನಲ್ಲಿ ಹತ್ತಾರು ಊರಿನ ಜನರನ್ನು ಸೇರಿಸಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ಇದಕ್ಕೆ ಅಭೂತಪೂರ್ವ ಬೆಂಬಲ ದೊರೆತಿದೆ. ಕಳೆದ ಹತ್ತು ವರ್ಷದಲ್ಲಿ ಆಯೋಜನೆಗೊಂಡ ಎಲ್ಲ ಕಾರ್ಯಕ್ರಮಗಳು ಯಶಸ್ಸಿನ ಫಲಿತಾಂಶ ನೀಡಿದೆ. ಅಂತರ್ ಜಿಲ್ಲಾ ಕವಿಗೋಷ್ಟಿಯು ಒಂದು ಮಾದರಿ ಕಾರ್ಯಕ್ರಮವಾಗಿ ಮೂಡಿಬರಲು ಸಹಕರಿಸಿದ ಎಲ್ಲ ಕವಿಗಳಿಗೆ, ಊರವರಿಗೆ ಚಿರಖುಣಿ ಎಂದರು.
ನೇಸರ ದಶಪ್ರಣತಿ ಸಮಿತಿ ಸಂಚಾಲಕ ಕುಂಬ್ರ ದಯಾಕರ ಆಳ್ವ ಮಾತನಾಡಿ, ಇದು ನಮ್ಮ ಪಾಲಿಗೆ ಒಂದು ಹೊಸ ಕಾರ್ಯಕ್ರಮ. ಕವಿಗೋಷ್ಟಿಯ ಮೂಲಕ ಸಾಹಿತ್ಯ ಲೋಕ ನಮಗೂ ವಿಶಿಷ್ಟ ಅನುಭವ ನೀಡಿತ್ತು. ಸಮಾಜಕ್ಕೆ ಧನಾತ್ಮಕ ಸಂದೇಶ ನೀಡುವ ಇಂತಹ ಕಾರ್ಯಕ್ರಮವನ್ನು ನೇಸರ ಸಂಸ್ಥೆ ನಡೆಸಿರುವುದು ಶ್ಲಾಘನೀಯ ಸಂಗತಿ ಎಂದರು.
ಪುತ್ತೂರು ಚಿಗುರೆಲೆ ಸಾಹಿತ್ಯ ಬಳಗದ ಸಂಯೋಜಕ ನಾರಾಯಣ ಕುಂಬ್ರ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ವಿವಿಧ ಭಾಗದ ಕವಿಗಳನ್ನು ಸೇರಿಸಿ ಕವನ ವಾಚಿಸುವ ಅವಕಾಶ ಜತೆಗೆ ಎಲ್ಲರೂ ಒಂದೆಡೆ ಬೆರೆಯುವ ಸುಂದರ ಕ್ಷಣ ನಮ್ಮದಾಗಿದೆ. ಇದಕ್ಕೆ ಸಹಕರಿಸಿದ ಎಲ್ಲರೂ ಅಭಿನಂದನಾರ್ಹರು ಎಂದರು.
ಪ್ರಗೀತ ಕೃತಿ ಬಿಡುಗಡೆ
ಪುತ್ತೂರು ವಿವೇಕಾನಂದ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿ ಅನನ್ಯ ಎಚ್ ಸುಬ್ರಹ್ಮಣ್ಯ ಅವರ ಎರಡನೇ ಕೃತಿ ಪ್ರಗೀತ ಅನ್ನು ಬೆಳ್ಳಾರೆ ಠಾಣಾ ಉಪ ನಿರೀಕ್ಷಕ ಈರಯ್ಯ ದೂಂತೂರು ಬಿಡುಗಡೆಗೊಳಿಸಿದರು. ಅನನ್ಯ ಎಚ್ ಅವರು ಕೃತಿಯ ಕುರಿತು ಅನುಭವ ಹಂಚಿಕೊಂಡರು. ಕೃತಿಕಾರೆ ಅನನ್ಯ ಅವರ ಕುರಿತು ನೇಸರ ಯುವತಿ ಮಂಡಲದ ಸದಸ್ಯೆ ಆದ್ಯಾ ಕೊಂಡೆಪ್ಪಾಡಿ ಪರಿಚಯ ವಾಚಿಸಿದರು.
ವಿಜೇತರಿಗೆ ಬಹುಮಾನ
ಕವಿಗೋಷ್ಟಿ ಪ್ರಯುಕ್ತ ಹಮ್ಮಿಕೊಂಡಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಪವಿತ್ರಾ ಎಂ ಬೆಳ್ಳಿಪ್ಪಾಡಿ, ಮಲ್ಲಿಕಾ ಜೆ ರೈ ಪುತ್ತೂರು, ಅರ್ಚನಾ ಕಜೆಕಾರು, ಅಕ್ಷತಾ ನಾಗನಕಜೆ ಹಾಗೂ ಕವಿಗೋಷ್ಟಿ ಸ್ಥಳಕ್ಕೆ ಎಲ್ಲರಿಗಿಂತ ಮೊದಲು ಆಗಮಿಸುವ ಸ್ಪರ್ಧೆಯಲ್ಲಿ ಆಯ್ಕೆಯಾದ ಬಿ.ಎಂ ಆಕಾಶ್ ಉಳ್ಳಾಲ, ಶಿಲ್ಪ ಕೆ.ಎನ್ ಪೇರಾಲು, ಮಿತ ಆಳ್ವ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು ಉಪಸ್ಥಿತರಿದ್ದರು. ನೇಸರ ಯುವತಿ ಮಂಡಲದ ಅಧ್ಯಕ್ಷೆ ಬೃಂದಾ ಪೂಜಾರಿ ಮುಕ್ಕೂರು ವಂದಿಸಿದರು. ಕೋಶಾಧಿಕಾರಿ ಯಕ್ಷಿತಾ ಚಾಮುಂಡಿಮೂಲೆ ನಿರೂಪಿಸಿದರು. ನೇಸರ ದಶಪ್ರಣತಿ ಸಮಿತಿಯ ಉಪಾಧ್ಯಕ್ಷರಾದ ನರಸಿಂಹ ತೇಜಸ್ವಿ ಕಾನಾವು, ದಾಮೋದರ ಗೌಡ ಕಂಡಿಪ್ಪಾಡಿ, ಉಮೇಶ್ ಕೆಎಂಬಿ, ಸದಸ್ಯರಾದ ಮೋಹನ ಬೈಪಡಿತ್ತಾಯ, ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಜೈನುದ್ದೀನ್ ತೋಟದಮೂಲೆ, ಜಯಂತ ಕೊಡಂಗೆ, ಗುಲಾಬಿ ಬೊಮ್ಮೆಮಾರು ಮೊದಲಾದವರು ಉಪಸ್ಥಿತರಿದ್ದರು.
ರಂಜಿಸಿದ ಪ್ರಥಮ ದಶ ಪ್ರಣತಿ ಅಂತರ್ಜಿಲ್ಲಾ ಕವಿಗೋಷ್ಠಿ
ವಾಹಿನಿ ಕಲಾ ಸಂಘ ಸುಳ್ಯ ಘಟಕದ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್ ಮನವಳಿಕೆ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಶೇಖರ ಎಂ ದೇಲಂಪಾಡಿ, ನಾರಾಯಣ ಕುಂಬ್ರ, ಅನ್ನಪೂರ್ಣ ಎನ್ ಕುತ್ತಾಜೆ
ಸತ್ಯಲತಾ ಸಿದ್ದಮೂಲೆ, ಅಕ್ಷತಾ ನಾಗನಕಜೆ, ಪವಿತ್ರ ಎಂ ಬೆಳ್ಳಿಪ್ಪಾಡಿ,ಅನನ್ಯ ಎಚ್ ಸುಬ್ರಹ್ಮಣ್ಯ, ಬಿ.ಎಂ.ಆಕಾಶ್ ಕಾರ್ಕಳ, ರಾಧಿಕಾಗಿರೀಶ್ ಮಯ್ಯ ಬಿ. ಸಿ. ರೋಡ್,ಪವಿತ್ರ ದಿನೇಶ್, ಅರ್ಚನಾ ಕಜೆಕಾರು,ರವಿ ಪಾಂಬಾರು, ಶ್ರೀಪೂರ್ಣ ಗಬ್ಲಡ್ಕ,ಡಾ.ಶ್ರೀಲತಾ ಪದ್ಯಾಣ ಸುಂದರ ಸಾರ್ಯ,ಸೌಜನ್ಯ ಬಿ. ಎಂ.ಕೆಯ್ಯೂರು,ಮಾಲತಿ ಶಿವರಾಮ ಭಟ್,ಮಲ್ಲಿಕಾ ಜೆ ರೈ ಪುತ್ತೂರು,ಹರ್ಷಿತಾ ಹರೀಶ್ ಕುಲಾಲ್,ಸಮೃದ್ಧಿ ಹರೀಶ್ ನಾಯಕ್ ಕಾಸರಗೋಡು,ಭಾಸ್ಕರ ವರ್ಕಾಡಿ,ಶಿಲ್ಪ ಕೆ.ಎನ್,ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ,ಮಿತ ಆಳ್ವ,ಜೀವನ್ ಕೊಂಡೆಪ್ಪಾಡಿ,ಸತೀಶ್ ಬಿಳಿಯೂರು,ದೇವಿಕಾ ಪಡುಮಲೆ,ನಮಿತಾ ಮಣಿ ಪಡ್ನೂರು,ಗೀತಾ ಕೊಂಕೋಡಿ
ಮೋಹಿತಾ ಹೊಸ್ಮಠ,ರಮ್ಯ ರಘುಪತಿ,ಹರೀಶ್ ಕುಮಾರ್ ಮೆಲ್ಕಾರು,ತೇಜಸ್ವಿತ್ ಅಡ್ಯತಕಂಡ,ಪುಣ್ಯಶ್ರೀ ಕುಂಡಡ್ಕ,ಚಂದ್ರಾವತಿ ರೈ ಪಾಲ್ತಾಡಿ,ಅಬ್ದುಲ್ ಶಮೀರ್ ಎಂ. ಎಚ್,ಅಶ್ವಿಜ ಶ್ರೀಧರ್ ಬೆಳ್ತಂಗಡಿ,ಸಹನಾ ಕಾಂತಬೈಲು,ಸುರೇಶ್ ಓಡಬಾಯಿ,ಜೀವಪರಿ ಸುರತ್ಕಲ್,ಭೂಮಿತಾ ಬಾಳೆಹಿತ್ಲು,ಬಿಂದ್ಯಾ ಕುದ್ಪಾಜೆ, ಅಪೂರ್ವ ಚೇತನ್, ರಶ್ಮಿತಾ ಸುರೇಶ್ ಜೋಗಿಬೆಟ್ಟು, ತಶ್ವಿ ಜೋಗಿಬೆಟ್ಟು, ಗಿರೀಶ್ ಪೆರಿಯಡ್ಕ,ಸುರೇಶ್ ಕುಮಾರ್ ಚಾರ್ವಾಕ ಪಾಲ್ತಿಲ,ಜಿಲ್ಲೆಯ ಬೇರೆ ಬೇರೆ ಕಡೆಯಿಂದ ಸುಮಾರು 50ಕವಿಗಳು ಭಾಗವಹಿಸಿದ್ದರು.
ವಿವಿಧ ವಿಭಾಗದಲ್ಲಿ ನೇಸರ ಯುವತಿ ಮಂಡಲದ ಮನ್ವಿ ಬೀರುಸಾಗು, ಸಿಂಚನಾ ಬೀರುಸಾಗು, ಚೈತನ್ಯ ಕಾನಾವು, ಶಶಿಪ್ರಭಾ ಚೆನ್ನಾವರ, ರೇಣುಕಾ ಕಾನಾವು, ಪೂರ್ಣಿಮಾ ಕುಂಡಡ್ಕ, ಕಾವ್ಯ ಕಾನಾವು ಹಾಗೂ ಯುವಕ ಮಂಡಲದ ಸದಸ್ಯರಾದ ರಾಮಚಂದ್ರ ಚೆನ್ನಾವರ, ರವಿ ಕುಂಡಡ್ಕ, ಪ್ರವೀಣ್ ಬೋಳಕುಮೇರು, ಶ್ರೀಧರ ಕೊಂಡೆಪ್ಪಾಡಿ, ಜೀವನ್ ಕೊಂಡೆಪ್ಪಾಡಿ, ಉಮೇಶ್ ನಳೀಲು, ತೇಜಸ್ವಿತ್ ಅಡ್ಯತಕಂಡ, ರಕ್ಷಿತ್ ಗೌಡ ಕಾನಾವು, ರವೀಂದ್ರ ಅನವುಗುಂಡಿ, ವಸಂತ ಕುಂಡಡ್ಕ, ಭಾಸ್ಕರ ಕುಂಡಡ್ಕ ಸಹಕರಿಸಿದರು.

