ಮುಳಿಹಿತ್ಲು : ಫೆ.13-16ರವರೆಗೆ 167ನೇ ವರ್ಷದ ಕಲ್ಲುರ್ಟಿ-ಕಲ್ಕುಡ ದೈವಗಳ ಕೋಲ

0
4

ಶ್ರೀ ಗುರು ತಿಲಕನಾಥ ಸ್ವಾಮಿ ಕ್ಷೇತ್ರ ಕಲ್ಲುರ್ಟಿ-ಕಲ್ಕುಡ ದೈವಸ್ಥಾನ ಮುಳಿಹಿತ್ತು, 167ನೇ ವರ್ಷದ ಕಲ್ಲುರ್ಟಿ-ಕಲ್ಕುಡ ದೈವಗಳ ಕೋಲ ಫೆ.13-16ರವರೆಗೆ ವಾರ್ಷಿಕ ಮಹೋತ್ಸವ, ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ ಗುರುಪೂಜೆ, ಭಜನೆ, ನಾಗದರ್ಶನ, ಕಲ್ಲುರ್ಟಿ ಕಲ್ಕುಡ ದೈವಗಳ ಕೋಲ ಅಗ್ನಿಕೊರತಿ – ಗುಳಿಗೆ ಕೋಲ ಹಾಗೂ ಕೆಂಡಸೇವೆ ಮತ್ತು ಮಂತ್ರದೇವತೆ ಕೋಲ ಜರುಗಲಿದೆ.

ಕಾರ್ಯಕ್ರಮಗಳು

ದಿನಾಂಕ 13-02-2026ರಂದು ಬೆಳಿಗ್ಗೆ ಗಂಟೆ 8.00ಕ್ಕೆ ಗಣಹೋಮ, 10.00ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, 12.00ಕ್ಕೆ ಶ್ರೀ ಗುರುತಿಲಕನಾಥ ಸ್ವಾಮಿಯವರಿಗೆ ಪಂಚಾಮೃತಾಭಿಷೇಕ, ಗುರುಪೂಜೆ, ಮಧ್ಯಾಹ್ನ ಗಂಟೆ 1.00 ಕ್ಕೆ ಅನ್ನ ಪ್ರಸಾದ ವಿತರಣೆ , ಸಂಜೆ ಗಂಟೆ 6-30 ರಿಂದ ಭಜನೆ, ರಾತ್ರಿ ಗಂಟೆ 8.30ಕ್ಕೆ ಮಹಾಪೂಜೆ ನಂತರ ಅನ್ನ ಪ್ರಸಾದ ವಿತರಣೆ ನಡೆಯಲಿದೆ.

ದಿನಾಂಕ 14-02-2026ರಂದು ಬೆಳಿಗ್ಗೆ ಗಂಟೆ 10.00 ಕ್ಕೆ ಮುಡಿಪು ಶುದ್ದೀಕರಣ, ಬೆಳಿಗ್ಗೆ ಗಂಟೆ 10.30 ಕ್ಕೆ ಶ್ರೀ ನಾಗದೇವರಿಗೆ ತನು-ತಂಬಿಲ, ಪ್ರಸನ್ನ ಪೂಜೆ, ಬೆಳಿಗ್ಗೆ ಗಂಟೆ 11.00ಕ್ಕೆ ನಾಗದರ್ಶನ ಮಧ್ಯಾಹ್ನ ಗಂಟೆ 1.00 ಕ್ಕೆ ಅನ್ನಪ್ರಸಾದ ವಿತರಣೆ, ರಾತ್ರಿ ಗಂಟೆ 7.00 ಕ್ಕೆ ಭಂಡಾರ ಹೊರಡುವುದು, ರಾತ್ರಿ ಗಂಟೆ 9.00 ಕ್ಕೆ ಅನ್ನಪ್ರಸಾದ ವಿತರಣೆ, ರಾತ್ರಿ 11-30ಕ್ಕೆ 167ನೇ ವರ್ಷದ ಕಲ್ಲುರ್ಟಿ-ಕಲ್ಲುಡ ದೈವದ ಕೋಲ ನಡೆಯಲಿರುವುದು.

ದಿನಾಂಕ 16-02-2026ರಂದು ಸಂಜೆ ಗಂಟೆ 4.00ಕ್ಕೆ ಭಂಡಾರ ಹೊರಡುವುದು, ರಾತ್ರಿ ಗಂಟೆ 8.30ಕ್ಕೆ ಅನ್ನಪ್ರಸಾದ ವಿತರಣೆ, ರಾತ್ರಿ ಗಂಟೆ 9.00ಕ್ಕೆ ಅಗ್ನಿಕೊರತಿ-ಗುಳಿಗ ದೈವಗಳ ಕೋಲ ಮತ್ತು ಕೆಂಡಸೇವೆ ನಂತರ ಮಂತ್ರದೇವತೆ ಕೋಲ ನಡೆಯಲಿದೆ.

ದಿನಾಂಕ 22-02-2026ನೇ ಆದಿತ್ಯವಾರದಂದು ರಾತ್ರಿ ಗಂಟೆ 8.30 ಕ್ಕೆ ಕಲ್ಲುರ್ಟಿ-ಕಲ್ಕುಡ, ಅಗ್ನಿಕೊರತಿ, ಮಂತ್ರದೇವತೆ ದೈವಗಳಿಗೆ ಶುದ್ಧದ ಅಗೆಲು ಮತ್ತು ಭಕ್ತರ ಅಗೆಲು ಸೇವೆ ಜರುಗಲಿದೆ.

LEAVE A REPLY

Please enter your comment!
Please enter your name here