ಮುಲ್ಕಿ: ಪ್ರತಿಷ್ಠಿತ ಮುಲ್ಕಿ ವಿಜಯಾ ರೈತರ ಸೇವಾ ಸಹಕಾರಿ ಸಂಘದ 49ನೇ ವಾರ್ಷಿಕ ಮಹಾಸಭೆ ಹಾಗೂ 2024 – 25 ನೇ ಸಾಲಿನ ಆಡಳಿತ ವರದಿ ಕಾರ್ಯಕ್ರಮ ಭಾನುವಾರ ಬೆಳಿಗ್ಗೆ ಮುಲ್ಕಿ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ನಡೆಯಿತು
ಸಭೆ, ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ ವಹಿಸಿ ಮಾತನಾಡಿ ಸಂಘವು ಪ್ರಸಕ್ತ ಸಾಲಿನಲ್ಲಿ 142 ಕೋಟಿ 13 ಲಕ್ಷ ವ್ಯವಹಾರ ನಡೆಸಿದ್ದು ಸದಸ್ಯರಿಗೆ ಲಾಭಾಂಶದ, ಶೇ12 ಡಿವಿಡೆಂಟ್ ವಿತರಿಸಲಾಗಿದೆ, ನಿರ್ದೇಶಕರ, ಸದಸ್ಯರ ಹಾಗೂ ಗ್ರಾಹಕರ ಸಹಕಾರದಿಂದ ಸಂಘವು ಅಭಿವೃದ್ಧಿಗೊಂಡಿದ್ದು ಶೀಘ್ರದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು, ಮುಂದಿನ ದಿನಗಳಲ್ಲಿ ಶಿಕ್ಷಣದ ಜೊತೆಗೆ, ಶಿಕ್ಷಣೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿ ಸಾಧಕರನ್ನು ಗುರುತಿಸಿ ಗೌರವಿಸಲಾಗುವುದು ಎಂದರು
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಆಡಳಿತ ನಿರ್ದೇಶಕ ಸಂತೋಷ್ ಕುಮಾರ್ ಶೆಟ್ಟಿ, ನಿರ್ದೇಶಕರಾದ ಗಂಗಾಧರ ವಿ ಶೆಟ್ಟಿ , ಅಶೋಕ್ ಕುಮಾರ್ ಚಿತ್ರಾಪು, ನರಸಿಂಹ ಪೂಜಾರಿ, ದೇವಪ್ರಸಾದ್, ಮಮತಾ ಡಿ ಪೂಂಜ, ಪದ್ಮಿನಿ ವಿ ಶೆಟ್ಟಿ, ರಾಜೇಶ್ ಶೆಟ್ಟಿ, ಪ್ರಭಾಕರ ದೇವಾಡಿಗ, ರಾಮ ನಾಯ್ಕ್, ನಂಜುಂಡ ಆರ್ ಕೆ, ಮತ್ತಿತರರು ಉಪಸ್ಥಿತರಿದ್ದರು.
ಸಭೆಯಲ್ಲಿ ಪ್ರಗತಿಪರ ಹಿರಿಯ ಕೃಷಿಕರಾದ ಭುಜಂಗ ಆರ್ ಶೆಟ್ಟಿ,ಸದಾನಂದ ಆರ್ ಸನಿಲ್ ಚಿತ್ರಾಪು, ಗಿರಿಧರ ಕಾಮತ್ ಅತಿಕಾರಿಬೆಟ್ಟು,ದಿನಕರ ಕಾಂಚನ್ ಮಾನಂಪಾಡಿ,ನೀಲು ಪೂಜಾರ್ತಿ ಅತಿಕಾರಿಬೆಟ್ಟು ಹಾಗೂ ಮಾಜೀ ನಿರ್ದೇಶಕಿ ಪುಷ್ಪ ಮಡಿವಾಳ್ತಿ ರವರನ್ನು ಸನ್ಮಾನಿಸಲಾಯಿತು ಹಾಗೂ ಎಸ್ ಎಸ್ ಎಲ್ ಸಿ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ 25 ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಸಂಘದ ಸದಸ್ಯರಿಗೆ ಶೇಕಡ 12 ಡಿವಿಡೆಂಟ್ ವಿತರಿಸಲಾಯಿತು, ಸದಸ್ಯರ ಸಮಸ್ಯೆಗಳ ಬಗ್ಗೆ ಸಾಧು ಅಂಚನ್ ಮಟ್ಟು, ರಮೇಶ್ ಅಜಿಲ ಮತ್ತಿತರರು ಮಾತನಾಡಿದರು.
ಸಂಘದ ನಿರ್ದೇಶಕ ಗಂಗಾಧರ ಶೆಟ್ಟಿ ಸ್ವಾಗತಿಸಿದರು,ಶಾಖಾ ವ್ಯವಸ್ಥಾಪಕ ಚಂದ್ರಕಾಂತ ಶೆಟ್ಟಿ ಆಡಳಿತ ವರದಿ ಮಂಡಿಸಿದರು, ಅಶೋಕ್ ಚಿತ್ರಾಪು ಧನ್ಯವಾದ ಅರ್ಪಿಸಿದರು, ಮನೋಹರ ಕೋಟ್ಯಾನ್ ನಿರೂಪಿಸಿದರು.
ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಚಿತ್ತರಂಜನ್ ಶೆಟ್ಟಿ ಉಳೆಪಾಡಿ ರವರಿಗೆ ಮೌನ ಪ್ರಾರ್ಥನೆ ಮೂಲಕ ಶೃದ್ಧಾಂಜಲಿ ಸಲ್ಲಿಸಲಾಯಿತು.

