ಮುಲ್ಕಿ: ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಕಿಲ್ಪಾಡಿ ಶ್ರೀ ಕುಮಾರಮಂಗಲ ದೇವಸ್ಥಾನದಲ್ಲಿ ಕಿರು ಷಷ್ಠಿ ಮಹೋತ್ಸವ ಡಿ26 ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ವೇದಮೂರ್ತಿ ವಾದಿರಾಜ ಉಪಾಧ್ಯಾಯ, ಮನೋಹರ ತಂತ್ರಿ , ಡಾ. ಶ್ರೀವತ್ಸ ಉಪಾಧ್ಯಾಯ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ಬೆಳಿಗ್ಗೆ 9 ರಿಂದ ಸಾರ್ವಜನಿಕ ಆಶ್ಲೇಷ ಬಲಿ ಸೇವೆ,ಮಧ್ಯಾಹ್ನ 12:30ಕ್ಕೆ ಮಹಾ ಪೂಜೆ, ಶ್ರೀ ನಾಗದೇವರಿಗೆ ಪಂಚಾಮೃತ ಅಭಿಷೇಕ, ಪ್ರಸಾದ ವಿತರಣೆ ಮಹಾ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭ ಅಚ್ಯುತ ರಾವ್ ಪಾವಂಜೆ, ಕ್ಷೇತ್ರದ ಅನುವಂಶಿಕ ಆಡಳಿತ ಮೊತ್ತೇಸರ ಕೆ. ಚಂದ್ರಶೇಖರ ಮಯ್ಯ, ಲಕ್ಷ್ಮಿಕಾಂತ ರಾವ್ ಹೊನ್ನಯ್ಯ ಕಾಟಿಪಳ್ಳ ಕುಮಾರಸ್ವಾಮಿ ಯುವಕ ಮಂಡಲದ ಅಧ್ಯಕ್ಷ ಗೋಪಿನಾಥ ಪಡಂಗ,ಯುವತಿ ಮಂಡಲದ ಅಧ್ಯಕ್ಷೆ ಮಮತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.


