ಮುಲ್ಕಿ “ಅಪ್ಪೆ ಬೇರ್ ದ ತುಳುನಾಡ್” ವಿಚಾರಗೋಷ್ಠಿಯ ಮನವಿ ಪತ್ರ ಬಿಡುಗಡೆ

0
4

ಮುಲ್ಕಿ: ತುಳುನಾಡಿನ ಭಾಷೆ, ಸಂಸ್ಕೃತಿ ಮತ್ತು ಮಾತೃಮೂಲ ಪರಂಪರೆಯ ಪುನರುಜ್ಜೀವನದ ಉದ್ದೇಶದಿಂದ ಮೇ 24ರಂದು ನಡೆಯಲಿರುವ “ಅಪ್ಪೆ ಬೇರ್ ದ ತುಳುನಾಡ್ – ರಾಷ್ಟ್ರೀಯ ತುಳು ವಿಚಾರಗೋಷ್ಠಿ” ಕಾರ್ಯಕ್ರಮದ ಪೂರ್ವಭಾವಿಯಾಗಿ ಮನವಿ ಪತ್ರ ಬಿಡುಗಡೆ ಕಾರ್ಯಕ್ರಮ ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆಯಿತು.


ಅರ್ಚಕ ಪ್ರಸಾದ್ ಭಟ್ ಪೂಜೆ ಸಲ್ಲಿಸಿ, ದೇವಿಯ ಅನುಗ್ರಹಕ್ಕಾಗಿ ಪ್ರಾರ್ಥನೆ ನೆರವೇರಿಸಿದರು.
ಮನವಿ ಪತ್ರವನ್ನು ಬಪ್ಪನಾಡು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ ಬಿಡುಗಡೆ ಮಾಡಿ ಮಾತನಾಡಿ ತುಳು ಭಾಷೆ, ಸಂಸ್ಕೃತಿ ಹಾಗೂ ಮಾತೃಮೂಲ ಪರಂಪರೆಯನ್ನು ಉಳಿಸುವುದು ಅತ್ಯಂತ ಅಗತ್ಯವಾಗಿದ್ದು, ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಜಾಗೃತಿ ಮೂಡಿಸಲು ಸಹಾಯಕವಾಗುತ್ತವೆ ಎಂದರು.
ಅವರು ಮಾತನಾಡಿ “ಅಪ್ಪೆ ಬೇರ್ ದ ತುಳುನಾಡ್” ಪರಿಕಲ್ಪನೆಯ ಮೂಲಕ ತುಳುನಾಡಿನ ಮಾತೃಮೂಲ ಸಂಸ್ಕೃತಿ, ತಾಯಿ ಮೂಲದ ತತ್ವ ಹಾಗೂ ಸಂಸ್ಕೃತಿಯ ಮೂಲಗಳನ್ನು ಪುನರುಜ್ಜೀವನಗೊಳಿಸುವ ಅಗತ್ಯತೆ ಇದೆ ಎಂದರು.
ಸಭೆಯಲ್ಲಿ ತುಳುವಲ್ಡ್ ಫೌಂಡೇಶನ್ ನಿರ್ದೇಶಕ ಡಾ. ರಾಜೇಶ್ ಆಳ್ವ,, ಮುಲ್ಕಿ ತಾಲೂಕು ತುಳುವ ಮಹಾಸಭೆಯ ಪ್ರಧಾನ ಸಂಚಾಲಕಿ ಭಾನುಮತಿ ಶೆಟ್ಟಿ, ಕಕ್ವಗುತ್ತು , ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಅಪ್ಪೆ ಬೇರು ತುಳುನಾಡು ಸಂಘಟನೆಯ ಪ್ರಧಾನ ಸಂಚಾಲಕ ಸುನಿಲ್ ಆಳ್ವ, ಮಂಗಳೂರು ತುಳುವ ಮಹಾಸಭೆ ಸಂಚಾಲಕ ಅರವಿಂದ ಬೆಲ್ಚಡ,ತುಳುವರ್ಡ್ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ವಸಂತ ರೈ ಕುತ್ತೆತೂರು ಹರಿಪ್ರಸಾದ್ ರೈ ಜಿ.ಕೆ. ಬಪ್ಪನಾಡು ಇನ್ಸ್ಪೆಯರ್,,ಲಯನ್ಸ್ ಕ್ಲಬ್
ಸ್ಥಾಪಕ ಅಧ್ಯಕ್ಷ ವೆಂಕಟೇಶ ಹೆಬ್ಬಾರ್, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ಸಾಯಿನಾಥ್, ಲಸುಜಿತ್ ಸಾಲ್ಯಾನ್, ಉದಯ ಶೆಟ್ಟಿ ಕಾರ್ನಾಡ್ ಬೈಪಾಸ್ ಪುರಂದರ ಶೆಟ್ಟಿ, ರೊ.ಹಬೀಬುಲ್ಲ, ಪ್ರಶಾಂತ್ ಶೆಟ್ಟಿ, ವಕೀಲ ರವೀಶ್ ಕಾಮತ್ ಕಕ್ವ,ಮುಲ್ಕಿ ಬಿಲ್ಲವ ಸಂಘ ಮಹಿಳಾ ಮಂಡಳಿ ಗೌರವಾಧ್ಯಕ್ಷರು ಸರೋಜಿನಿ ಸುವರ್ಣ, ಹಿಂದೂ ಯುವಸೇನೆ ಮಹಿಳಾ ಘಟಕದ ಅಧ್ಯಕ್ಷೆ ಲತಾ ಶೇಖರ್, ಭಾರತಿ ರೈ, ಲ ಶೀತಲ್ ಸುಶೀಲ್, ಮಮತ ಶೆಟ್ಟಿ ಮಜಲಗುತ್ತು,ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here