ಮುಲ್ಕಿ : ರಥದ ಅವಘಡದ ಹಿನ್ನಲೆ – ಬಪ್ಪನಾಡು ದೇವಸ್ಥಾನದಲ್ಲಿ ಪ್ರಾಯಶ್ಚಿತ್ತ ಹೋಮ – ಹವನಗಳಿಗೆ ಚಾಲನೆ

0
15

ಮುಲ್ಕಿ : ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಕಳೆದ ಜಾತ್ರಾ ಮಹೋತ್ಸವದಲ್ಲಿ ನಡೆದ ರಥದ ಅವಘಡದ ಹಿನ್ನಲೆಯಲ್ಲಿ ದೇವಸ್ಥಾನದಲ್ಲಿ ನಡೆದ ಅಷ್ಟಮಂಗಳ ಪ್ರಶ್ನೆಯ ಚಿಂತನ ಪೂರ್ವಕವಾಗಿ, ಸರ್ವದುರಿತ ನಿವಾರಣೆ ಹಾಗೂ ಮುಂದಿನ ಸಾನಿಧ್ಯ ಅಭಿವೃದ್ಧಿ ಕಾರ್ಯಗಳ ಮುನ್ನುಡಿಯಾಗಿ ಕ್ಷೇತ್ರದಲ್ಲಿ ವಿವಿಧ ಪರಿಹಾರ ಹಾಗೂ ಪ್ರಾಯಶ್ಚಿತ್ತ ಹೋಮ-ಕವನಗಳಿಗೆ ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ,ಪವಿತ್ರ ಪಾಣಿ ಅತ್ತೂರು ಬೈಲು ವೆಂಕಟರಾಜ ಉಡುಪ,, ಅರ್ಚಕರಾದ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್, ಹಾಗೂ ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ವಿಶೇಷ ಪ್ರಾರ್ಥನೆ ಯೊಂದಿಗೆ ದೇವಸ್ಥಾನದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.

ಈ ಸಂದರ್ಭ ವಿದ್ವಾನ್ ಪಂಜ ಭಾಸ್ಕರ ಭಟ್, ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ, ಕೃಷ್ಣರಾಜ ಎನ್ ಭಟ್,ಅಚ್ಯುತ ಭಟ್, ಪ್ರಸಾದ್ ಭಟ್,ಅಭಿವೃದ್ಧಿ ಸಮಿತಿಯ ಅತುಲ್ ಕುಡ್ವ, ಶರತ್ ನರ್ಸಪ್ಪ ಸಾಲ್ಯಾನ್,ಸುನಿಲ್ ಆಳ್ವ,ಪುರಂದರ ಶೆಟ್ಟಿಗಾರ್, ಸಂಜೀವ ದೇವಾಡಿಗ, ಉದಯಕುಮಾರ್ ಶೆಟ್ಟಿ ಅಧಿಧನ್, ಶರತ್ ಕಾರ್ನಾಡ್, ನಾಗೇಶ್ ಬಪ್ಪನಾಡು, ಅಕೌಂಟೆಂಟ್ ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.

ಧಾರ್ಮಿಕ ಕಾರ್ಯಕ್ರಮದಲ್ಲಿ ಪುಣ್ಯಾಹ ವಾಚನ, ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಸರ್ಪಸೂಕ್ತ ಹೋಮ, ಆಶ್ಲೇಷಾ ಬಲಿ, ವಟು ಆರಾಧನೆ, ಸಂಜೆ :ದುರ್ಗಾನಮಸ್ಕಾರ, ದುರಿತಹರ ಮಂತ್ರ ಹೋಮ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

ಮಾ. 17ರವರೆಗೆ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

LEAVE A REPLY

Please enter your comment!
Please enter your name here