ಮುಲ್ಕಿ:ಬಪ್ಪನಾಡು ದೇವಳದ ಬಸವ ಕೃಷ್ಣ ತೀವ್ರ ಅಸ್ವಸ್ಥ: ಆಸ್ಪತ್ರೆಗೆ ದಾಖಲು

0
351

ಮುಲ್ಕಿ:ತೀರಾ ಸಾಧು ಸ್ವಭಾವದ ಎಲ್ಲರ ಅಚ್ಚುಮೆಚ್ಚಿನ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದ ಬಸವ ಕೃಷ್ಣ(18) ತೀವ್ರ ಅಸ್ವಸ್ಥಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಸರಕಾರಿ ಪಶು ಅಸ್ಪತ್ರೆಗೆ ದಾಖಲಿಸಲಾಗಿದೆ.
ಶ್ರೀ ದೇವಳದ ಜಾತ್ರಾ ಮಹೋತ್ಸವ ಸಹಿತ ಬಲಿ ಉತ್ಸವಗಳಲ್ಲಿ ಭಾಗಿಯಾಗುತ್ತಾ ಸುದೃಢ ಶರೀರದ ಕೃಷ್ಣ ಕಳೆದ 8 ದಿನಗಳಿಂದ ಆಹಾರ ಸೇವಿಸದೆ, ಮಲಮೂತ್ರ ವಿಸರ್ಜಿಸದೆ ಇದ್ದ ಕಾರಣ ಸ್ಥಳೀಯ ಪಶು ವೈದ್ಯರಾದ ಡಾ.ಪ್ರಸನ್ನರವರಿಂದ ಚಿಕಿತ್ಸೆ ಪಡೆದಿದ್ದ. ವಾರ ಕಳೆದರೂ ಸಮಸ್ಯೆ ಪರಿಹಾರವಾಗದ ಕಾರಣ ವೈದ್ಯರ ಸಲಹೆಯಂತೆ ಕೃಷ್ಣನನ್ನು ಮಂಗಳೂರು ಪಶು ಅಸ್ಪತ್ರೆಗೆ ದಾಖಲಿಸಲಾಗಿತ್ತು.
ಅಲ್ಲಿ ವೈದ್ಯರು ಪರಿಶೀಲಿಸಿದ ಬಳಿ ಕೃತಕ ಪೈಪ್ ಅಳವಡಿಸಿ ಮಲಮೂತ್ರವನ್ನು ಹೊರತೆಗೆಯಲಾಗಿದೆ. ಕನಿಷ್ಟ 8 ಬಕೆಟ್‌ನಷ್ಟು ಮೂತ್ರವನ್ನು ತೆಗೆದ ಬಳಿಕ ಕೃಷ್ಣ ಆಹಾರ ಸೇವಿಸಲು ಆರಂಭಿಸಿದ್ದು, ಶೀಘ್ರ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿದ್ದಾರೆ.
ಡಾ.ಜಿ.ಕೆ.ಭಟ್ ಮತ್ತು ಡಾ.ಮೃದುಳಾ ಚಿಕಿತ್ಸೆ ಮುಂದುವರಿಸಿದ್ದಾರೆ. 18 ವರ್ಷ ಪ್ರಾಯದ ಕೃಷ್ಣನನ್ನು 12ವರ್ಷಗಳ ಹಿಂದೆ ಶ್ರೀ ದೇವಳಕ್ಕೆ ಭಕ್ತರೊಬ್ಬರು ದಾನವಾಗಿ ನೀಡಿದ್ದರು.

LEAVE A REPLY

Please enter your comment!
Please enter your name here