ಮುಲ್ಕಿ : ರಾಷ್ಟ್ರಗೀತೆ ‘ಜನ ಗಣ ಮನ’ ಕುರಿತಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೀಡಿರುವ ವಿವಾದಾತ್ಮಕ ಹೇಳಿಕೆ ರಾಷ್ಟ್ರದ ಜನತೆಗೆ ಅವಮಾನ ಮಾಡಿದಂತಾಗಿದೆ ಎಂದು ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರ ಕನ್ನಡ ಹೊನ್ನಾವರದಲ್ಲಿ ನಡೆದ ಏಕತಾ ಸಮಾವೇಶದಲ್ಲಿ ಮಾತನಾಡಿದ ಕಾಗೇರಿ ಅವರು “ನಮ್ಮ ಪೂರ್ವಜರು ಬ್ರಿಟಿಷ್ ಅಧಿಕಾರಿಗಳ ಸ್ವಾಗತಕ್ಕಾಗಿ ‘ಜನ ಗಣ ಮನ’ ವನ್ನು, ಹಾಗೂ ರಾಷ್ಟ್ರಗೀತೆಯಾಗಿ ‘ವಂದೇ ಮಾತರಂ’ ಅನ್ನು ರಚಿಸಿದ್ದರು” ಎಂಬ ವಿವಾದಾತ್ಮಕ ಹೇಳಿಕೆ.
ನೀಡಿರುವುದು ರಾಷ್ಟ್ರಭಾವನೆಗೆ ಧಕ್ಕೆ ತಂದಂತಾಗಿದೆ ಎಂದು ಮೋಹನ್ ಕೋಟ್ಯಾನ್ ಆರೋಪಿಸಿದರು.
ಬಿಜೆಪಿ ನಾಯಕರು ಕಳೆದ ಕೆಲ ವರ್ಷಗಳಿಂದ ಸಂವಿಧಾನ ವಿರೋಧಿ ಹಾಗೂ ದೇಶದ ಜನತೆಗೆ ಅವಮಾನ ಮಾಡುವ ಹೇಳಿಕೆಗಳನ್ನು ನೀಡುತ್ತಾ ಬರುತ್ತಿದ್ದು, ಇದೀಗ ರಾಷ್ಟ್ರಗೀತೆ ಯನ್ನೇ ಪ್ರಶ್ನಿಸುವ ಮಟ್ಟಕ್ಕೆ ಇಳಿದಿದ್ದಾರೆ. ಇದು ಬಿಜೆಪಿಯ ಅಸಂಸ್ಕೃತ ರಾಜಕೀಯದ ಸ್ಪಷ್ಟ ನಿದರ್ಶನವಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಈ ಹೇಳಿಕೆಯಿಂದ ದೇಶದ ಗೌರವ ಹಾಳಾಗಿದೆ. ಸಂಸದ ಸ್ಥಾನದಲ್ಲಿ ಮುಂದುವರಿಯುವ ನೈತಿಕ ಹಕ್ಕನ್ನು ಕಳೆದು ಕೊಂಡಿರುವ ವಿಶ್ವೇಶ್ವರ ಕಾಗೇರಿ ರವರನ್ನು ರಾಷ್ಟ್ರಪತಿಗಳು ಕೂಡಲೇ ಸಂಸದ ಸ್ಥಾನದಿಂದ ವ ಜಾ ಮಾಡಬೇಕು. ಇಲ್ಲವಾದರೆ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಉಗ್ರ ಹೋರಾಟಕ್ಕೆ ಇಳಿಯುತ್ತದೆ ಎಂದು ಎಚ್ಚರಿಕೆ ನೀಡಿದರು.

