ಮುಲ್ಕಿ : ಅಡ್ಡಾದಿಡ್ಡಿ ಚಲಾಯಿಸಿದ ಚಾಲಕ -ಸ್ಕೂಟರ್ ಗೆ ಡಿಕ್ಕಿ ಹೊಡೆದು ಓಮ್ನಿ ಪಲ್ಟಿ; ಮಹಿಳೆ ಪವಾಡ ಸದೃಶ ಪಾರು

0
104

ಮುಲ್ಕಿ: ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಕಿಲ್ಪಾಡಿ ಗ್ರಾಮ ಪಂಚಾಯತ್ ಕಚೇರಿಯ ಕೂಗಳತೆಯ ದೂರದಲ್ಲಿ ಕೆಎಸ್ ರಾವ್ ನಗರಕ್ಕೆ ಹೋಗುವ ಜಂಕ್ಷನ್ ಬಳಿ ಮಾರುತಿ ಓಮ್ನಿ ಕಾರೊಂದು ಅದರ ಚಾಲಕನ ನಿರ್ಲಕ್ಷ ಚಾಲನೆಯಿಂದ ಜಂಕ್ಷನ್ ಬಳಿ ನಿಂತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು. ಸ್ಕೂಟರ್ ಸಮೀಪ ನಿಂತಿದ್ದ ಸವಾರೆ ಯುವತಿ ಹಾಗೂ ಓಮ್ನಿ ಚಾಲಕ ಪವಾಡ ಸದೃಶ ಪಾರಾಗಿದ್ದಾರೆ.

ಮುಲ್ಕಿ ಸಮೀಪದ ಅಂಗರಗುಡ್ಡೆ ನಿವಾಸಿ ವಿನಿತ ಎಂಬವರು ತಮ್ಮ ಸ್ಕೂಟರ್ ನಲ್ಲಿ ಕಿಲ್ಪಾಡಿ ಪಂಚಾಯತ್ ಸಮೀಪ ಕೆಎಸ್ ರಾವ್ ನಗರಕ್ಕೆ ಹೋಗುವ ಜಂಕ್ಷನ್ ಬಳಿ ಸ್ಕೂಟರ್ ನಿಲ್ಲಿಸಿ ಸಮೀಪದಲ್ಲಿ ಮಾರಾಟಗಾರರಿಂದ ಮೀನು ತೆಗೆದುಕೊಳ್ಳುವ ಬಗ್ಗೆ ತಮ್ಮ ಮನೆಯವರ ಬಳಿ ಮೊಬೈಲ್ನಲ್ಲಿ ಮಾತನಾಡುತ್ತಿರುವಾಗ ಕಿನ್ನಿಗೋಳಿ ಕಡೆಯಿಂದ ಅಡ್ಡಾಡಿಡ್ಡಿಯಾಗಿ ಓಮ್ನಿ ಚಲಾಯಿಸಿಕೊಂಡು ಬಂದ ಶಿರ್ವ ಮಂಚಕಲ್ಲು ನಿವಾಸಿ ಫಯಾಜ್(19) ಎಂಬ ಯುವಕನೊಬ್ಬ ನಿಲ್ಲಿಸಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದು, ಮಾರುದ್ದ ಎಳೆದುಕೊಂಡು ಹೋಗಿ ನಿಯಂತ್ರಣ ತಪ್ಪಿ ಓಮ್ನಿ ಪಲ್ಟಿಯಾಗಿದೆ ಕೂಡಲೇ ಸ್ಥಳಿಯರು ದಾವಿಸಿ ಓಮ್ನಿ ಚಾಲಕನನ್ನು ರಕ್ಷಿಸಿದ್ದಾರೆ.
ಅಪಘಾತದ ರಭಸಕ್ಕೆ ಸ್ಕೂಟರ್ ಗೆ ಹಾನಿಯಾಗಿದ್ದು. ಸವಾರೆ ಅಪಾಯದಿಂದ ಪಾರಾಗಿದ್ದಾರೆ. ಅಪಘಾತದಿಂದ ಕೆಲ ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತ ಉಂಟಾಗಿದ್ದು ಸ್ಥಳಕ್ಕೆ ಮಂಗಳೂರು ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಓಮ್ನಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಓಮ್ನಿ ವಾಹನದಲ್ಲಿ ಮೂರು ಕ್ಯಾನ್ ಪೆಟ್ರೋಲ್ ಹಾಗೂ ಮರ ತುಂಡರಿಸುವ ಮೆಶಿನ್ ಪತ್ತೆಯಾಗಿದೆ. ಆರೋಪಿ ಓಮ್ನಿ ಚಾಲಕ ಫಯಾಜ್ ಕಿನ್ನಿಗೋಳಿಯಿಂದ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿಕೊಂಡು ಬರುತ್ತಿದ್ದ ಎಂದು ಪ್ರತ್ಯಕ್ಷ ದರ್ಶಿ ವಾಹನ ಸವಾರರು ತಿಳಿಸಿದ್ದಾರೆ .
ಕಿಲ್ಪಾಡಿ ಪಂಚಾಯತ್ ಬಳಿಯಿಂದ ಕೆ ಎಸ್ ರಾವ್ ನಗರಕ್ಕೆ ಹೋಗುವ ಅಪಾಯಕಾರಿ ಜಂಕ್ಷನ್ ಬಳಿ ಮೀನು ಮಾರಾಟ ನಡೆಯುತ್ತಿದ್ದು ಅಪಘಾತಕ್ಕೆ ಕೂಡ ಕಾರಣವಾಗಿದೆ ಎಂದು , ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಈ ಭಾಗದಲ್ಲಿ ಮೀನು ಮಾರಾಟ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ .

LEAVE A REPLY

Please enter your comment!
Please enter your name here