ಮುಲ್ಕಿ: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಭಾರಿ ಗಾತ್ರದ ಮರ-ಮೂವರು ಪವಾಡ ಸದೃಶ ಪಾರು

0
294

ಮುಲ್ಕಿ: ನಗರ ಪಂಚಾಯತ್ ವ್ಯಾಪ್ತಿಯ ಪಳ್ಳಿಗುಡ್ಡೆ ಚಡಾವು ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಭಾರೀ ಗಾತ್ರದ ಮರ ಬಿದ್ದು ಹಾನಿಯಾಗಿದ್ದು ಕಾರಿನಲ್ಲಿದ್ದ ಚಾಲಕ ಸಹಿತ ಮೂವರು ಪವಾಡ ಸದೃಶ ಪಾರಾಗಿದ್ದಾರೆ
ಸುರತ್ಕಲ್ ನಿಂದ ಮುಲ್ಕಿ ವೆಂಕಟರಮಣ ದೇವಸ್ಥಾನಕ್ಕೆ ಹೋಗುತ್ತಿದ್ದ ಕಾರು ಪಳ್ಳಿಗುಡ್ಡೆ ಚಡಾವು ಬಳಿ ತಲುಪುತ್ತಿದ್ದಂತೆ ಏಕಾಏಕಿ ಮರ ಕಾರಿನ ಮೇಲೆ ಬಿದ್ದಿದೆ.

ಈ ಸಂದರ್ಭ ಕಾರಿನಲ್ಲಿದ್ದ ಸುರತ್ಕಲ್ ನಿವಾಸಿಗಳಾದ ಚಾಲಕ ಶಶಿಧರ ಪ್ರಭು, ಪ್ರಯಾಣಿಕರಾದ ವೀಣಾ ಶೆಣೈ ಕೀರ್ತನ (ದೀಪಾಲಿ) ರವರು ಪವಾಡ ಸದೃಶ ಪಾರಾಗಿದ್ದಾರೆ. ಮರ ಬಿದ್ದ ರಭಸಕ್ಕೆ ಕಾರಿನ ಮೇಲ್ಭಾಗ ಸಂಪೂರ್ಣ ಜಖಂ ಗೊಂಡಿದೆ ಘಟನೆಯಿಂದ ರಸ್ತೆಯಲ್ಲಿ ವಾಹನ ಸಂಚಾರ ವ್ಯತ್ಯಯ ಉಂಟಾಗಿದ್ದು ಕೂಡಲೇ
ಮುಲ್ಕಿ ನಗರ ಪಂಚಾಯತ್ ಸದಸ್ಯ ಬಾಲಚಂದ್ರ ಕಾಮತ್, ಕಾರು ಚಾಲಕ ಮಾಲಕ ಸಂಘದ ಮಾಜೀ ಅಧ್ಯಕ್ಷ ಚಂದ್ರಶೇಖರ್,ಮುಲ್ಕಿ ಪೊಲೀಸರು ಹಾಗೂ ನಗರ ಪಂಚಾಯತ್ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿ ವಾಹನ ಸಂಚಾರ ಸುಗಮಗೊಳಿಸಿದ್ದು ಜಖಂಗೊಂಡ ಕಾರನ್ನು ಸ್ಥಳದಿಂದ ತೆರವುಗೊಳಿಸಲಾಗಿದೆ
ಈ ಭಾಗದಲ್ಲಿ ಅನೇಕ ಅಪಾಯಕಾರಿ ಮರಗಳಿದ್ದು ಮಳೆಗಾಲದಲ್ಲಿ ಅಪಾಯ ಸಂಭವಿಸುವ ಮೊದಲೇ ಮರಗಳನ್ನು ತೆರವುಗೊಳಿಸಬೇಕು ಎಂದು ಸ್ಥಳೀಯರಾದ ಸಂದೀಪ್ ಶಿಮಂತೂರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here