ಮುಲ್ಕಿ: ಹೊಸ ಅಂಗಣ ತಿಂಗಳ ಬೆಳಕು ಕಾರ್ಯಕ್ರಮ

0
41

ಮುಲ್ಕಿ:ಧಾರ್ಮಿಕ ಕ್ಷೇತ್ರಗಳ ಅಭಿವೃದ್ದಿಯಲ್ಲಿ ಅರ್ಚಕರ ಪಾತ್ರ ಮಹತ್ತರದಾಗಿದ್ದು ದೇವರ ಮತ್ತು ಭಕ್ತರ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸುವ ತೆರೆ ಮರೆಯ ಅರ್ಚಕರನ್ನು ಗುರುತಿಸಿ ಗೌರವಿಸುವ ಕಾರ್ಯ ಅಭಿನಂದನೀಯ ಎಂದು ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಅಪ್ಪು ಯಾನೆ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಮುಲ್ಕಿ ಪುನರೂರು ಟೂರಿಸ್ಟ್ ಹೋಮ್ ನ ಸಭಾಂಗಣದಲ್ಲಿ ನಡೆದ ಹೊಸ ಅಂಗಣ ತಿಂಗಳ ಬೆಳಕು ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ ಮಾಜೀ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ವಹಿಸಿ ಮಾತನಾಡಿ ಯಾವುದೇ ಫಲಾಪೇಕ್ಷೆಯಿಲ್ಲದೆ ಸೇವೆ ಸಲ್ಲಿಸುತ್ತಿರುವ ಅರ್ಚಕರು ಸಮಾಜದ ಆಸ್ತಿಯಾಗಿದ್ದು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ್‌ ಕೋಟ್ಯಾನ್‌,ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಅಡಳಿತ ಸಮಿತಿ ಅಧ್ಯಕ್ಷ ವಾಮನ್‌ ಇಡ್ಯಾ,ಬಿರುವೆರ್‌ ಕುಡ್ಲ ಮುಲ್ಕಿ ಘಟಕದ ಅಧ್ಯಕ್ಷ ಉಮೇಶ್‌ ಮಾನಂಪಾಡಿ,ಕಥಾ ಬಿಂದುವಿನ ಪಿ ವಿ ಪ್ರದೀಪ್‌ ಕುಮಾರ್‌, ಲ .ಪುಷ್ಪರಾಜ್‌ ಚೌಟ ಬಂಟರ ಸಂಘದ ಅಧ್ಯಕ್ಷ ಅಶೋಕ್‌ ಕುಮಾರ್‌ ಶೆಟ್ಟಿ,,ಶ್ರೀ ಕೇಶಾವನಂದ ಗುರೂಜಿ,ಹೊಸ ಅಂಗಣದ ಹರೀಶ್ಚಂದ್ರ ಪಿ ಸಾಲ್ಯಾನ್‌ ಉದ್ಯಮಿ ಜೋನ್‌ ಕ್ವಾಡ್ರಸ್‌, ವಾಸು ಪೂಜಾರಿ ಚಿತ್ರಾಪು,ಹಬೀಬುಲ್ಲಾ, ದಿನೇಶ್ ಶೆಟ್ಟಿ , ವೈ ಎನ್ ಸಾಲ್ಯಾನ್, ಜಯಪಾಲ ಶೆಟ್ಟಿ,ರವಿಚಂದ್ರ ಹರೀಶ್ಚಂದ್ರ ಪಿ ಸಾಲ್ಯಾನ್‌ ಸ್ವಾಗತಿಸಿದರು,ದಿನೇಶ್‌ ಶೆಟ್ಟಿ ವಂದಿಸಿದರು, ವೈ ಎನ್‌ ಸಾಲ್ಯಾನ್‌ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಪ್ರಧಾನ ಅರ್ಚಕ ಅಪ್ಪು ಯಾನೆ ಶ್ರೀನಿವಾಸ ಪೂಜಾರಿಯವರನ್ನು ಗೌರವಿಸಲಾಯಿತು.

LEAVE A REPLY

Please enter your comment!
Please enter your name here