ಮುಲ್ಕಿ:ಬಪ್ಪನಾಡು ಜಾತ್ರಾ ಮಹೋತ್ಸವ ಭವ್ಯ ಮೆರವಣಿಗೆಯಲ್ಲಿ ಹೊರೆ ಕಾಣಿಕೆ ಸಮರ್ಪಣೆ

0
22

ಮುಲ್ಕಿ: ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವ ಎ.1ರಿಂದ 8ರವರೆಗೆ ನಡೆಯಲಿದ್ದು ಪೂರ್ವಭಾವಿಯಾಗಿ ಮುಲ್ಕಿ
ಕಾರು ,ಕಾರು ಚಾಲಕರ ಹಾಗೂ ಮಾಲಕರ ಸಂಘ, ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ, ಹಿಂದೂ ಯುವ ಸೇನೆ ಮತ್ತು ಒಂಭತ್ತು ಮಾಗಣೆಯ ಭಕ್ತರ ವತಿಯಿಂದ ಸೀಮೆ ಒಂಭತ್ತು ಮಾಗಣೆಯ ಭಕ್ತರ 5ನೇ ವರ್ಷದ ಹೊರೆ ಕಾಣಿಕೆ ಸಮರ್ಪಣೆಯು ಮಂಗಳವಾರ ನಡೆಯಿತು.
ದೇವಸ್ಥಾನದ ಅರ್ಚಕ ಗೋಪಾಲಕೃಷ್ಣ ಭಟ್ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು, ಕಾರು ಹಾಗೂ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷರುಗಳಾದ ರಾಜೇಶ್ ಕೆರೆಕಾಡು, ದೇವರಾಜ ಕೊಲಕಾಡಿ, ಉದಯಕುಮಾರ್ ಶೆಟ್ಟಿ ಅಧಿಧನ್, ಕೋಲ್ನಾಡು ಕೊರಗಜ್ಜ ಕ್ಷೇತ್ರದ ಅಧ್ಯಕ್ಷ ಶೇಖರ್ ಸಾಲ್ಯಾನ್, ರಂಜನ್ ಬಿ ಶೆಟ್ಟಿ ಕಿಲ್ಪಾಡಿ ಭಂಡಸಾಲೆ ಶಶೀoದ್ರ ಸಾಲ್ಯಾನ್, ಶೀನ ಪೂಜಾರಿ ಪಡುಬಿದ್ರೆ, ಕಿಶೋರ್ ಶೆಟ್ಟಿ ಬಪ್ಪನಾಡು, ಲತಾ ಶೇಖರ್, ಶಿವರಾಮ್ ಜಿ ಅಮೀನ್, ಉದಯಕುಮಾರ್ ಶೆಟ್ಟಿ ಕಾರ್ನಾಡ್ ಬೈಪಾಸ್, ಗಿರೀಶ್ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.
ಹೊರ ಕಾಣಿಕೆಯ ಭವ್ಯ ಮೆರವಣಿಗೆಯು ಮುಲ್ಕಿ ಶಾರದಾ ಮಂಟಪದಿಂದ ಹೊರಟು ಬಪ್ಪನಾಡು ದೇವಸ್ಥಾನಕ್ಕೆ ಸಮರ್ಪಿಸಲಾಯಿತು.
ದಿನೇಶ್ ಕೋಲ್ನಾಡು ನಿರೂಪಿಸಿದರು.

LEAVE A REPLY

Please enter your comment!
Please enter your name here