ಮುಲ್ಕಿ: ಯುವ ವಾಹಿನಿ ಘಟಕ, ಲಯನ್ಸ್ , ಲಿಯೋ ಕ್ಲಬ್ ಮತ್ತು ನವದುರ್ಗ ಯುವಕ ವೃಂದ ಕೋಟೆಕೇರಿ ಜಂಟಿ ಆಶ್ರಯದಲ್ಲಿ ಗುರುವಾರ ಬೆಳಿಗ್ಗೆ ಮುಲ್ಕಿ ಬಸ್ ನಿಲ್ದಾಣದ ಬಳಿ ಆಟಿಯ (ಆಷಾಢ)ಕಷಾಯ ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ಹರ್ಷರಾಜ ಶೆಟ್ಟಿ ಮಾತನಾಡಿ ಹಿಂದಿನ ಕಾಲದ ಆಚರಣೆಗಳು ಮೂಢನಂಬಿಕೆಯಲ್ಲ ಮೂಲನಂಬಿಕೆಯಾಗಿದ್ದು ಆರೋಗ್ಯಕ್ಕೆ ಪೂರಕ ಎಂದರು
ಲಯನ್ಸ್ ವಲಯ್ಯಾಧ್ಯಕ್ಷ ರಾಲ್ಫಿ ಡಿಕೋಸ್ಟ, ಕಾರ್ಯದರ್ಶಿ ಶೀತಲ್ ಸುಶೀಲ್, ಕೋಶಾಧಿಕಾರಿ ಸುಶೀಲ್ ಕುಮಾರ್, ಯುವ ವಾಹಿನಿ ಅಧ್ಯಕ್ಷ ವಿನಯಕುಮಾರ್ ಮಟ್ಟು, ನವದುರ್ಗ ಯುವಕ ವೃಂದದ ಉಪಾಧ್ಯಕ್ಷ ರಾಮಚಂದ್ರ ಕೋಟ್ಯಾನ್, ವಿವಿಧ ಸಂಸ್ಥೆಯ ಪದಾಧಿಕಾರಿಗಳಾದ ಭಾನುಮತಿ ಶೆಟ್ಟಿ ಕಕ್ವಗುತ್ತು, ಉದಯ ಅಮೀನ್ ಮಟ್ಟು, ರಿತೇಶ್ ಅಂಚನ್, ಸತೀಶ್ ಕಿಲ್ಪಾಡಿ, ಕಿಶೋರ್ ಶೆಟ್ಟಿ ಬಪ್ಪನಾಡು,, ಲತೀಶ್ ಕಾರ್ನಾಡ್, ಉದಯಕುಮಾರ್ ಶೆಟ್ಟಿ, ಕಾರ್ನಾಡ್ ಬೈ ಪಾಸ್ ಮತ್ತಿತರರು ಉಪಸ್ಥಿತರಿದ್ದರು ಬಳಿಕ ಆಟಿಯ (ಆಷಾಢ)ಕಷಾಯ ವಿತರಿಸಲಾಯಿತು.