ಮುಲ್ಕಿ: ಪ್ಲಾಸ್ಟಿಕ್ ನಿರ್ಮೂಲನೆ-ಘನ ತ್ಯಾಜ್ಯ ನಿರ್ವಹಣೆ ಜಾಗೃತಿ ಕಾರ್ಯಕ್ರಮ

0
8

ಮುಲ್ಕಿ: ನಗರ ಪಂಚಾಯತ್ ವತಿಯಿಂದ ಸ್ವಚ್ಛ ಭಾರತ್ ಮಿಷನ್2 (ನಗರ) ಯೋಜನೆಯ ಮಾಹಿತಿ ಶಿಕ್ಷಣ ಮತ್ತು ಸಂವಹನ ಘಟಕದಡಿ ಘನ ತ್ಯಾಜ್ಯ ನಿರ್ವಹಣೆ, ನೈರ್ಮಲ್ಯ, ಬಳಸಿದ ನೀರು ನಿರ್ವಹಣೆ ಕುರಿತು, ಪ್ರದರ್ಶನ ಬೀದಿ ನಾಟಕ, ಸಾರ್ವಜನಿಕ ಮೇಳ, ಜಾಗೃತಿ ಮೂಡಿಸುವ ಕಾರ್ಯಕ್ರಮ ಕಾರ್ನಾಡ್ ಹಾಗೂ ಮುಲ್ಕಿ ಬಸ್ ನಿಲ್ದಾಣದ ಬಳಿ ನಡೆಯಿತು.
ಕಾರ್ಯಕ್ರಮವನ್ನು ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್ ತಮಟೆ ಬಾರಿಸಿ ಉದ್ಘಾಟಿಸಿದರು. ನಗರ ಪಂಚಾಯತ್ ಮುಖ್ಯ ಅಧಿಕಾರಿ ಮಧುಕರ್ ಮಾತನಾಡಿ, ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುತ್ತಿದ್ದು , ಪ್ಲಾಸ್ಟಿಕ್ ತ್ಯಾಜ್ಯ ನಿರ್ಮೂಲನೆಗೆ ಸಹಕರಿಸಬೇಕು ಎಂದರು. ಸಾಹಸ್ ಎನ್‌ಜಿಒ ವಿಶಾಲ ಮಾತನಾಡಿ, ನಾಗರಿಕರು ಸಂತೆಗೆ, ಪೇಟೆಗೆ ಬರುವಾಗ ಪ್ಲಾಸ್ಟಿಕ್ ಚೀಲ ಬೇಡ ಬಟ್ಟೆ ಚೀಲ ತೆಗೆದುಕೊಂಡು ಬನ್ನಿ ಎಂದರು.
ಮುಲ್ಕಿ ನಗರ ಪಂಚಾಯತ್ ಸದಸ್ಯ ಪುತ್ತುಭಾವ, ದಯಾವತಿ ಅಂಚನ್, ಹಿರಿಯ ಆರೋಗ್ಯ ನಿರೀಕ್ಷಕಿ ಶಶಿರೇಖಾ, ಗ್ರೀನ್ ಇಂಪ್ಯಾಕ್ಟ್ ಫೌಂಡೇಶನ್ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ರಾಜೇಶ್ ಬೆಜ್ಜಂಗಳ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಮೌನೇಶ್ ವಿಶ್ವಕರ್ಮ ನೇತೃತ್ವದಲ್ಲಿ ಘನ ತ್ಯಾಜ್ಯ ನಿರ್ವಹಣೆ ಹಾಗೂ ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಬೀದಿ ನಾಟಕ ನಡೆಯಿತು

LEAVE A REPLY

Please enter your comment!
Please enter your name here