ಮುಲ್ಕಿ ಪೊಲೀಸ್ ಠಾಣೆ ಮನೆ ಮನೆಗೆ ಭೇಟಿ ಕಾರ್ಯಕ್ರಮ

0
18

ಹಳೆಯಂಗಡಿ: ಜು18. ಸಾರ್ವಜನಿಕರ ಸಮಸ್ಯೆ, ದೂರು ಆಲಿಸಲು ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಯೇ ಮನೆಬಾಗಿಲಿಗೆ ಬರುವಂಥ ವಿನೂತನ ಪರಿಕಲ್ಪನೆಯಾದ ‘ಮನೆ ಮನೆಗೆ ಭೇಟಿ’ ಕಾರ್ಯಕ್ರಮಕ್ಕೆ ಈ ದಿನ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ಬಿ.ಯಸ್’ ರವರ ಮುಂದಾಳತ್ವದಲ್ಲಿ ಈ ದಿನ ಚಾಲನೆ ನೀಡಲಾಯಿತು.

ಮುಲ್ಕಿ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಹಳೆಯಂಗಡಿ ಗ್ರಾಮ ವ್ಯಾಪ್ತಿಯ ಹಳೆಯಂಗಡಿ ಮತ್ತು ಪಾವಂಜೆ ಪ್ರದೇಶದ ಬೀಟ್ ಸಿಬ್ಬಂದಿಗಳು, ಹಳೆಯಂಗಡಿಯ ಗ್ರಾಮ ಪ್ರದೇಶಗಳಿಗೆ ತೆರಳಿ ಸೈಬರ್ ಅಪರಾಧ, ಮಾದಕ ವಸ್ತು, ಪೋಕ್ಸೋ ಕಾಯ್ದೆ, ಮನೆ ಕಳ್ಳತನ, ಸರ ಕಳ್ಳತನ, ರಸ್ತೆ ಸಂಚಾರ ನಿಯಮ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಅರಿವು ಮೂಡಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಮುಲ್ಕಿ ಪೊಲೀಸ್ ಠಾಣೆಯ ಬೀಟ್ ಸಿಬ್ಬಂದಿಗಳಾದ ಮಹೇಶ್ ಪಾಟೀಲ್ ಮಧುಕರ ಹಾಗೂ ಇತರರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here