ಮುಲ್ಕಿ ಸ.ಪ.ಪೂ.ಕಾಲೇಜು; ಇಂಟರಾಕ್ಟ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

0
149

ಮುಲ್ಕಿ : ಸರಕಾರಿ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗಗಳ ಇಂಟರಾಕ್ಟ್ ಕ್ಲಬ್ ನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಮುಲ್ಕಿ ರೋಟರ್ ಕ್ಲಬ್ ನ ಅಧ್ಯಕ್ಷರಾದ ರೋ. ಜೇಮ್ಸ್ ಪೀಟರ್ ಡಿಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ವರ್ಷದಲ್ಲಿ ಈ ಕಾಲೇಜು ಹಾಗೂ ಪ್ರೌಢಶಾಲೆಯ ಇಂಟರಾಕ್ಟ್ ಕ್ಲಬ್ ಗಳು ಉತ್ತಮವಾದ ಕೆಲಸಗಳನ್ನು ಮಾಡಿದ್ದು, ಕ್ರೀಯಾಶೀಲವಾಗಿತ್ತು ಎಂದರು. ಈ ಸಂಸ್ಥೆಯು ಉತ್ತಮವಾದ ಫಲಿತಾಂಶ ದಾಖಲಿಸುತ್ತಿರುವುದು ಶ್ಲಾಘನೀಯ ಕೆಲಸ ಎಂದು ಹೇಳಿದರು. ಮುಲ್ಕಿ ಇಂಟರಾಕ್ಟ್ ಅಧ್ಯಕ್ಷರಾದ ಜಿನರಾಜ ಸಾಲಿಯಾನ್ ಅವರು ವಿದ್ಯಾರ್ಥಿ ಇಂಟರಾಕ್ಟಿನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ನಡೆಸಿಕೊಟ್ಟರು.

ಕಾಲೇಜಿನ ಇಂಟರಾಕ್ಟ್ ಕ್ಲಬ್ ನ ಅಧ್ಯಕ್ಷರಾಗಿ ಗಗನ್ ಹಾಗೂ ಕಾರ್ಯದರ್ಶಿಯಾಗಿ ಶ್ವೇತಾ, ಪ್ರೌಢಶಾಲೆಯ ಅಧ್ಯಕ್ಷರಾಗಿ ತನುಷ ಹಾಗೂ ಕಾರ್ಯದರ್ಶಿಯಾಗಿ ವಿಲಾಸ್ ಅವರಿಗೆ ಪದಗ್ರಹಣ ನಡೆಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ, ಪ್ರಾಂಶುಪಾಲರಾದ ವಾಸುದೇವ ಬೆಳ್ಳೆ, ಸಂಯೋಜಕರಾದ ದೀಪ್ತಿ, ಪ್ರೇಮ ಉಪಸ್ಥಿತರಿದ್ದರು. ಪ್ರೌಢಶಾಲೆಯ ಹಿರಿಯ ಸಹಶಿಕ್ಷಕಿ ಜಯಲಕ್ಷೀ ನಾಯಕ್ ವಂದಿಸಿದರು. ಶಿಯಾ ಪ್ರಥಮ ವಿಜ್ಞಾನ ವಿಭಾಗ ನಿರೂಪಿಸಿದರು

LEAVE A REPLY

Please enter your comment!
Please enter your name here