ಮುಲ್ಕಿ: ವಿದ್ಯಾರ್ಥಿಗಳು ತರಬೇತಿ ಶಿಬಿರಗಳ ಮೂಲಕ ಸಾಧಕರಾಗಿ – ಭಾನುಮತಿ ಶೆಟ್ಟಿ ಕಕ್ವಗುತ್ತು

0
5

ಮುಲ್ಕಿ: ವಿಜಯ ಕಾಲೇಜಿನ ಅಂತರಂಗ ಗುಣಮಟ್ಟ ಖಾತೆ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಬ್ಯಾಂಕ್ ಪರೀಕ್ಷೆ ಮತ್ತು ಉದ್ಯೋಗ ಯೋಜನೆ ತರಬೇತಿ ಕಾರ್ಯಕ್ರಮ ನಡೆಯಿತು
ಉದ್ಘಾಟನೆಯನ್ನು ವಿಜಯ ಕಾಲೇಜಿನ ಹಳೆ ವಿದ್ಯಾರ್ಥಿನಿ ಭಾನುಮತಿ ಶೆಟ್ಟಿ ಕಕ್ವಗುತ್ತು ನೆರವೇರಿಸಿ ಮಾತನಾಡಿ ತರಬೇತಿ ಶಿಬಿರಗಳು ವಿದ್ಯಾರ್ಥಿಗಳ ಭವಿಷ್ಯದ ಜೀವನದ ಭದ್ರ ಬುನಾದಿಯಾಗಿದ್ದು ಸಾಧಕರಾಗಿ ಎಂದು ಕಿವಿ ಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಕೆನರಾ ಬ್ಯಾಂಕ್ ಪ್ರಬಂಧಕ ಅನಿಲ್ ಮೋರೆ, ಕರ್ನಾಟಕ ಬ್ಯಾಂಕ್ ಪ್ರಬಂಧಕ ವಿಟ್ಠಲ ವಾಗ್ಲೆ ರವರು ಬ್ಯಾಂಕ್ ಪರೀಕ್ಷೆಗಳಿಗೆ ತಯಾರಿಗಳ ಬಗೆಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಾ ಕಾಲೇಜಿನ ಪ್ರಾಚಾರ್ಯ ಪ್ರೊ. ವೆಂಕಟೇಶ್ ಭಟ್ ವಹಿಸಿ ವಿದ್ಯಾರ್ಥಿಗಳನ್ನು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ಸಾಹ ತೋರುವಂತೆ ಪ್ರೆರೇಪಿಸಿದರು.
ವಿಜಯ ಪದವಿ ಕಾಲೇಜಿನ ಪ್ರಾಂಶುಪಾಲ ಅರುಣ್ ಕುಮಾರ್ ಬಿ, ಐಕ್ಯುಎಸಿ ಸಹ ಸಂಯೋಜಕ ದೇವದಾಸ ಕೆ, ವಿದ್ಯಾರ್ಥಿಕ್ಷೇಮ ಪಾಲನಾಧಿಕಾರಿ ಡಾ. ಶೈಲಜಾ ವೈ.ವಿ, ಪ್ಲೇಸ್ಮೆಂಟ್ ನಿರ್ವಹಣಾಧಿಕಾರಿ ಜ್ಯೋತಿ ಶಂಕರ್ ಸಾಲ್ಯಾನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here