ಮುಲ್ಕಿ : ಮುಲ್ಕಿ ಸುಂದರಾಂ ಶೆಟ್ಟಿ ಕಾಲೇಜ್ ಶಿರ್ವ ಇದರ ರಾಷ್ಟ್ರೀಯ ಸೇವ ಯೋಜನೆ ವಾರ್ಷಿಕ ಶಿಬಿರವು ಬೆಳ್ಮಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜರಗುತ್ತಿದ್ದು ಭಾನುವಾರ ಬೆಳಿಗ್ಗೆ ಹಸ್ತ ಕೌಶಲ್ಯ ತರಬೇತಿ ಕಾರ್ಯಕ್ರಮ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ವತಿಯಿಂದ ಜರಗಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಯೋಜನೆ ಯೋಜನಾಧಿಕಾರಿಗಳಾದ ಹೇಮಲತಾ ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಸಂಧ್ಯಾ ಎಸ್ ಎನ್ ವೃತ್ತಿ ಶಿಕ್ಷಕರು ಕರ್ನಾಟಕ ಪಬ್ಲಿಕ್ ಸ್ಕೂಲ್ ಎನ್ಎಸ್ಎಸ್ ಶಿಬಿರಾರ್ಥಿಗಳಿಗೆ ಅನೇಕ ಹಸ್ತ ಕೌಶಲ್ಯ ತರಬೇತಿಯನ್ನು ನೀಡಿದರು ವಿಶೇಷವಾಗಿ ಹಳೆಯ ಸೀರೆಗಳಿಂದ ಮನೆಯ ಡೋರ್ ಮ್ಯಾಟ್ ಗಳನ್ನು ತಯಾರಿಸುವ ಬಗ್ಗೆ ತರಬೇತಿ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಂತ್ಯ 11ರ ಪ್ರಾಂತ್ಯರಾದ ಅಧ್ಯಕ್ಷರಾದ ಲಯನ್ ವೆಂಕಟೇಶ ಹೆಬ್ಬಾರ್ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಲಯನ್ಸ್ ಕ್ಲಬ್ ಎರಡೂ ಸೇವೆಗೆ ಮುಡಿಪಾಗಿಟ್ಟ ಸಂಸ್ಥೆ ಲಯನ್ಸ್ ಕ್ಲಬ್ ವಿಸರ್ವ್ ಎಂಬ ದ್ಯೆಯವಾಕ್ಯದೊಂದಿಗೆ ದೀನ ದಲಿತರ ಸೇವೆ ಆರೋಗ್ಯಶಿಬಿರಗಳನ್ನು ಜರಗಿಸಿ ಬಡವರ ಕಣ್ಣೀರು ಓರೆಸುವ ಕಾರ್ಯ ನಿರ್ವಹಿಸುತ್ತಿದ್ದು ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ತಮ್ಮ ಗಳಿಕೆಯ ಒಂದು ಭಾಗವನ್ನು ಸ್ವಯಂ ಪ್ರೇರಿತರಾಗಿ ಅಥವಾ ಸಂಘ-ಸಂಸ್ಥೆಗಳ ಮುಖಾಂತರ ಸಮಾಜ ಕ್ಕೆ ನೀಡಿ ಪುನೀತರಾಗಬೇಕೆಂದು ಕರೆ ನೀಡಿದರು ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಪ್ ಫಯರ್ ನ ಕಾರ್ಯದರ್ಶಿ ಪ್ರತಿಭಾ ಹೆಬ್ಬಾರ್ ಶ್ರೇಯಸ್, ಸೌಮ್ಯ ಶೆಟ್ಟಿ, ದೇವಿಕ ಮೊದಲಾದವರು ಉಪಸ್ಥಿತರಿದ್ದರು.