ಮೂಲ್ಕಿ ಸುರಭಿ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಸಂಸ್ಥೆಯಿಂದ ಅಂಗನವಾಡಿ ಮಕ್ಕಳಿಗೆ ಕ್ರೀಡಾ ಸಮಾಗ್ರಿ ಮತ್ತು ಕುರ್ಚಿಗಳ ಕೊಡುಗೆ

0
116

ಮೂಲ್ಕಿ ಇಲ್ಲಿನ ನಗರ ಪಂಚಾಯತಿ ವ್ಯಾಪ್ತಿಯ ಸಮುದಾಯ ಭವನದ ಪಕ್ಕದಲ್ಲಿರುವ ಅಂಗನವಾಡಿಯ ಮಕ್ಕಳಿಗೆ ಕ್ರೀಡಾ ಸಮಾಗ್ರಿ ಮತ್ತು ಕುರ್ಚಿಗಳನ್ನು ಸುರಭಿ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಸಂಸ್ಥೆಯ ಜೋನ್‌ ಕ್ವಾಡ್ರಸ್‌ ಉದಾರವಾಗಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮೂಲ್ಕಿ ನಗರ ಪಂಚಾಯತಿಯ ನಿವೃತ್ತ ಮುಖ್ಯಾಧಿಕಾರಿ ಹರಿಶ್ಚಂದ್ರ ಸಾಲಿಯಾನ್‌ರವರು ಮಾತನಾಡಿ ಸುರಭಿ ಸಂಸ್ಥೆಯವರು ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಧನ ಸಹಾಯ ಹಾಗೂ ಸಮವಸ್ತ್ರಗಳನ್ನು ಮೂಲ್ಕಿ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವು ನೀಡುತ್ತಾ ಬರುತ್ತಿದ್ದಾರೆ. ಮುಂದೆ ಈ ಸಂಸ್ಥೆಯಿಂದ ಟ್ರಸ್ಟ್ ಒಂದನ್ನು ಸ್ಥಾಪಿಸಿ ಪ್ರತಿ ವರ್ಷವು ನಿರಂತರವಾಗಿ ಶಾಲಾ ವಿದ್ಯಾರ್ಥಿಗಳಿಗೆ ಧನಸಹಾಯ ಹಾಗೂ ಸಮವಸ್ತ್ರ ಮತ್ತು ಆನಾರೋಗ್ಯ ಪೀಡಿತರಿಗೆ ಧನ ಸಹಾಯ ಕೊಡುವಂತಹ ಯೋಜನೆಯನ್ನು ಮಾಡಲು ಉದ್ದೇಶಿಸಿದ್ದಾರೆ. ಇವರ ಸಂಸ್ಥೆ ಮೂಲ್ಕಿಯಲ್ಲಿ ಆದರ್ಶ ಸಂಸ್ಥೆಯಾಗಿ ಜನರಿಂದ ಮೆಚ್ಚುಗೆ ಗಳಿಸಲೆಂದು ಹೇಳಿದರು.


ಸುರಭಿ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್‌ನ ಮಾಲಕ ಜೋನ್‌ ಕ್ವಾಡ್ರಸ್‌ರವರು ಮಾತನಾಡಿ ತಾನು ಮಕ್ಕಳ ಭವಿಷ್ಯತಿಗಾಗಿ ಜಾತಿ ಮತ ನೋಡದೆ ತನ್ನಿಂದ ಅದಷ್ಟು ಸಹಾಯ ಮಾಡುತ್ತಾ ಬಂದಿದ್ದೇನೆ ಮುಂದೆಯು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದಕ್ಕಾಗಿ ಸುರಭಿ ಇಲೆಕ್ಟ್ರಾ ನಿಕ್ಸ್ ಮತ್ತು ಫರ್ನಿಚರ್‌ ಟ್ರಸ್ಟ್ ಒಂದನ್ನು ಸ್ಥಾಪಿಸಿ ಅದರ ಮುಖಾಂತರ ಸಹಾಯವನ್ನು ನೀಡುವ ಉದ್ದೇಶ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಇನೋರ್ವ ಮುಖ್ಯ ಅತಿಥಿಯಾದ ಮೂಲ್ಕಿ ನಗರ ಪಂಚಾಯತಿಯ ಸದಸ್ಯ ಪುತ್ತು ಬಾವ, ಅಂಗನವಾಡಿ ಸಹಾಯಕರು, ಅಂಗನವಾಡಿ ಮೇಲ್ಪಿಚಾರಕರು ಭಾರತಿ, ಅಂಗನವಾಡಿಯ ಮಕ್ಕಳ ಸಂಘದ ಅಧ್ಯಕ್ಷೆ ಶೈಲಶ್ರಿಯವರು ಹಾಜರಿದ್ದರು. ಅಂಗನವಾಡಿಯ ಸಹಾಯಕರು ಮಂಜುಳರವರು ಕೊನೆಯಲ್ಲಿ ವಂದಾನಾರ್ಪಣೆ ಮಾಡಿದರು.

LEAVE A REPLY

Please enter your comment!
Please enter your name here