ಮುಲ್ಕಿ:ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಜೀರ್ಣೋದ್ದಾರ ಹಾಗೂ ಅಷ್ಟ ಬಂಧ ಬ್ರಹ್ಮಕಲಕೋತ್ಸವದ ಪೂರ್ವಭಾವಿಯಾಗಿ ಬಾಲಾಲಯದಲ್ಲಿ ಶ್ರೀದೇವರ ಪ್ರತಿಷ್ಠೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಕ್ಷೇತ್ರದ ತಂತ್ರಿಗಳಾದ ಕಳತ್ತೂರು ಕರುಣಾಕರ ತಂತ್ರಿ ಹಾಗೂ ಅರ್ಚಕ ಶಶಾಂಕ್ ಮುಚ್ಚಿಂತಾಯ ನೇತೃತ್ವದಲ್ಲಿ ನಡೆಯಿತು.
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಸೋಮವಾರ ಬೆಳಿಗ್ಗೆ ವಿಶೇಷ ಪ್ರಾರ್ಥನೆ, ಪಂಚಗವ್ಯ,ಪುಣ್ಯಾಹ, ಶ್ರೀ ವಿಶ್ವನಾಥ ದೇವರು ಮತ್ತು ಗಣಪತಿ ದೇವರಿಗೆ ಅನುಜ್ಞಾ ಕಲಶಾಭಿಷೇಕ, ಮಹಾಪೂಜೆ, ಸಂಹಾರ, ತತ್ವ ಕಲಶ ಪ್ರತಿಷ್ಠೆ, ಸಂಹಾರ ತತ್ವ ಹೋಮ, ಬ್ರಾಹ್ಮಣರಿಂದ ಅನುಜ್ಞಾ ವಿಧಿ, ತತ್ವ ಕಲಶಾಭಿಷೇಕ, ಶ್ರೀ ದೇವರ ಸಂಕೋಚ ವಿಧಿ, ಬಾಲಾಲಯದಲ್ಲಿ ಶ್ರೀ ದೇವರ ಪ್ರತಿಷ್ಠೆ ನಡೆಯಿತು.
ಈ ಸಂದರ್ಭ ಕಟೀಲು ಕ್ಷೇತ್ರದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ರಾಮಮೂರ್ತಿ ರಾವ್,ದೇವಸ್ಥಾನದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್ , ಭುವನಾಭಿರಾಮ ಉಡುಪ, ಪೃಥ್ವಿರಾಜ ಆಚಾರ್ಯ ಕಿನ್ನಿಗೋಳಿ, ಪುನರೂರು ವಿಪ್ರ ಸಂಪದದ ಅಧ್ಯಕ್ಷ ಸುಧಾಕರ್ ರಾವ್, ಪಟೇಲ್ ವಿಶ್ವನಾಥ ರಾವ್, ಗೋಪಿನಾಥ ರಾವ್, ದೇವಪ್ರಸಾದ್ ಪುನರೂರು ಜೀರ್ಣೋದ್ದಾರ ಸಮಿತಿಯ ಪುರಂದರ ಶೆಟ್ಟಿಗಾರ್, ರವಿ ಶೆಟ್ಟಿ ಪುನರೂರುಗುತ್ತು ಮತ್ತಿತರರು ಉಪಸ್ಥಿತರಿದ್ದರು
Home Uncategorized ಮುಲ್ಕಿ:ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ತತ್ವ ಕಲಶಾಭಿಷೇಕ,ಬಾಲಾಲಯದಲ್ಲಿ ಶ್ರೀ ದೇವರ ಪ್ರತಿಷ್ಠೆ