ಕುಬೆವೂರು ಸುಣ್ಣದ ಬೊಟ್ಟು ಕೂಡು ಕುಟುಂಬದ ಸಹಯೋಗದಲ್ಲಿ ಆಟಿದ ಗುಟ್ಟು ಕಾರ್ಯಕ್ರಮ
ಮುಲ್ಕಿ: ಸಮೀಪದ ಕುಬೆವೂರು ಸುಣ್ಣದ ಬೊಟ್ಟು ಕೂಡು ಕುಟುಂಬದ ಸಹಯೋಗದಲ್ಲಿ ಸುಣ್ಣದ ಬೊಟ್ಟು ಪಂಜುರ್ಲಿ ದೈವಸ್ಥಾನದ ಅಂಗಣದಲ್ಲಿ ಆಟಿದ ಗುಟ್ಟು ಕಾರ್ಯಕ್ರಮ ನಡೆಯಿತು.
ಕಿಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿಕಾಸ್ ಶೆಟ್ಟಿ ಕಾರ್ಯಕ್ರಮ ವನ್ನು ಮರದ ಸೇಮೆಯ ಮುಟ್ಟುವಿನಲ್ಲಿ ಶ್ಯಾವಿಗೆ ಮಾಡುವ ಮೂಲಕ ಅತಿಥಿಗಳೊಂದಿಗೆ ವಿಶಿಷ್ಟ ರೀತಿಯಲ್ಲಿ ಉದ್ಘಾಟಿಸಿ ಯುವ ಪೀಳಿಗೆಗೆ ಹಿಂದಿನ ಕಾಲದ ಆಟಿಯ ಆಚರಣೆಗಳು ಹಾಗೂ ತುಳುನಾಡಿನ ಪದ್ಧತಿಗಳ ಬಗ್ಗೆ ತಿಳುವಳಿಕೆ ಅಗತ್ಯವಿದೆ ಎಂದರು
ಮುಖ್ಯ ಅತಿಥಿ ಗಳಾಗಿ ಜಾನಪದ ವಿದ್ವಾಂಸ ಸುರೇಶ್ ಕೊಲೆಕಾಡಿ ತುಳುನಾಡ್ ನಾಡಿನ ಕಟ್ಟು ಕಟ್ಲೆ ಗಳು ಆಟಿ ತಿಂಗಳ ಆಚರಣೆಗಳ ವೈಜ್ಞಾನಿಕ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಜಾರಂದಾಯ ದೈವಸ್ಥಾನದ ಅರ್ಚಕರಾದ ಶೇಖರ ಪೂಜಾರಿ,ಮಹಿಳಾ ಸಂಘಟಕಿ ಅಮನಿ ಆಚಾರ್ಯ , ಹಿರಿಯರಾದ ಲೀಲಾ ಮಜಲಕೋಡಿ ಹಾಗೂ ಮಹಾಬಲ ಶೆಟ್ಟಿ ರವರನ್ನು ಗೌರವಿಸಲಾಯಿತು.
ಬಡ ಕುಟುಂಬದ 5 ಜನರಿಗೆ 10 ಕೆ ಜಿ ಅಕ್ಕಿ ವಿತರಿಸಲಾಯಿತು.
ವೇದಿಕೆಯಲ್ಲಿ ದೈವಸ್ಥಾನದ ಅರ್ಚಕರಾದ ದಯಾನಂದ ಗೇರುಕಟ್ಟೆ ದೈವಸ್ಥಾನದ ಮುಖ್ಯಸ್ಥರಾದ ಕಾಂತಪ್ಪ ಪೂಜಾರಿ, ಜಯಕುಮಾರ್ ಕುಬೆವೂರು,
ಶೋಭಾ,ಸೌಮ್ಯ, ನವಿತ ಹಾಗೂ ವೇದಾ ಜಯಕುಮಾರ್ ,ಲತಾ, ಅನಿಷ ತನುಶ್ರೀ ,,ನೂತನ ಕುಮಾರ್ , ಗ್ರಾಮೀಣ ಆಟದ ಸ್ಪರ್ಧೆಗಳ ಬಹುಮಾನ ವಿತರಣೆ ಹಾಗೂ
ಮನೆ ಮನೆಯಲ್ಲಿ ತಯಾರಿಸಿದ ಆಟಿಯ ಖಾದ್ಯ ಗಳ ವಿಶೇಷ ಭೋಜನವನ್ನು ಸುಮಾರು 250ಕೂ ಹೆಚ್ಚು ಮಂದಿ ಸವಿದರು.