ಮುಲ್ಕಿ: ಮಳೆಗೆ ಅವೈಜ್ಞಾನಿಕ ಪೈಪ್ ಲೈನ್ ಕಾಮಗಾರಿ-ಮನೆಯ ಮೇಲೆ ಬಿದ್ದ ಮರ ಭಾರೀ ಹಾನಿ

0
361

ಮುಲ್ಕಿ:ಭಾರೀ ಮಳೆಯ ನಡುವೆಯೂ ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಕಿಲ್ಪಾಡಿ ಬಳಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿದ್ದು ಪರಿಸರ ಕೆಸರುಮಯವಾಗಿ ಹಾಗೂ ಅನೇಕ ಮರಗಳು ಧರೆಗೆ ಉರುಳಿದೆ.


ರಾಜ್ಯ ಹೆದ್ದಾರಿಯ ಕುಬೆವೂರು ರೈಲ್ವೇ ಮೇಲ್ಸೇತುವೆ ಬಳಿ ಅಮೃತ್ ಪೈಪ್ ಲೈನ್ ಕಾಮಗಾರಿಗೆ ತೋಡಿದ ಹೊಂಡದಿಂದ ಬಾರಿ ಗಾತ್ರದ ಮರ ಬೇರು ಸಮೇತ ಮನೆಯ ಮೇಲೆ ಬಿದ್ದು ಭಾರೀ ನಷ್ಟ ಸಂಭವಿಸಿದೆ
ಕಾಮಗಾರಿಯ ಅವಾಂತರದಿಂದ ಈ ಪರಿಸರದಲ್ಲಿ ಸುಮಾರು 15 ರಿಂದ 20 ಮರಗಳು ಹಾಗೂ ವಿದ್ಯುತ್ ಕಂಬಗಳು ಅಪಾಯದ ಸ್ಥಿತಿಯಲ್ಲಿವೆ ಸ್ಥಳಕ್ಕೆ ಮೆಸ್ಕಾಂ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ
ಮಳೆಗೆ ಪೈಪ್ ಲೈನ್ ಕಾಮಗಾರಿ ನಡೆಸುವುದನ್ನು ಕೂಡಲೇ ನಿಲ್ಲಿಸಬೇಕು ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
ಭಾರೀ ಮಳೆಗೆ ಕಾರ್ನಾಡ್ ಕೆಎಸ್ ರಾವ್ ನಗರ ರಸ್ತೆಯಲ್ಲಿ ಬೃಹದಾಕಾರದ ಮರ ವಿದ್ಯುತ್ ತಂತಿ ಹಾಗೂ ರಸ್ತೆಗೆ ಬಿದ್ದು ಸಂಚಾರಕ್ಕೆ ತೀವ್ರ ತೊಂದರೆಯಾಯಿತು. ಕೂಡಲೇ ಮುಲ್ಕಿ ನ ಪಂ ಮುಖ್ಯಾಧಿಕಾರಿ ಮಧುಕರ್ ನೇತೃತ್ವದಲ್ಲಿ ಸಿಬ್ಬಂದಿಗಳ ಮೂಲಕ ಮರವನ್ನು ತೆರವುಗೊಳಿಸಲಾಯಿತು.
ಭಾರೀ ಮಳೆ ಗಾಳಿಗೆ ಕಿನ್ನಿಗೋಳಿ ಸಮೀಪದ ಏಳಿoಜೆ ಗ್ರಾಮದ ಸುಮತಿ ಎಂಬವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಮುಲ್ಕಿ ನ. ಪಂ ವ್ಯಾಪ್ತಿಯ ಕೆಂಪುಗುಡ್ಡೆ ಮಾಧವ ಪೂಜಾರಿ ಅವರ ಕೃಷಿಗೆ ಗದ್ದೆಯಲ್ಲಿ ಹಾಕಿದ ಭತ್ತದ ಬೀಜ ನೆರೆಯಲ್ಲಿ ಕೊಚ್ಚಿ ಹೋಗಿದೆ.
ಉಳಿದಂತೆ ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗಿದ್ದು ಅಲ್ಪಸ್ವಲ್ಪ ಹಾನಿ ಸಂಭವಿಸಿದೆ

LEAVE A REPLY

Please enter your comment!
Please enter your name here