ಮುಂಬಯಿ, ಜ.27 : ಕರ್ನಾಟಕ ಕರಾವಳಿಯ ಮೂಡುಬಿದಿರೆ ಪಡ್ಯಾರಬೆಟ್ಟು ಇಲ್ಲಿನ ಪೆರಿಂಜೆ ಅಲ್ಲಿನ ಥೋಮಸ್ ಐರೊಸ್ ತಾವ್ರೋ ಇವರ ಸುಪುತ್ರ, ಅವಿವಾಹಿತ ಜೋಸೆಫ್ ಪಿಯೂಸ್ ತಾವ್ರೋ (61.) ಕಳೆದ ಶನಿವಾರ ತಡರಾತ್ರಿ ಅಂಧೇರಿ ಪೂರ್ವದ ಜೆ.ಬಿ ನಗರ್ ಇಲ್ಲಿನ ಖಾಸಾಗಿ ಹೊಟೇಲ್‌ವೊಂದರಲ್ಲಿ ತೀವ್ರ ಹೃದಯಾಘಾತಕ್ಕೊಳಗಾಗಿ ಮೃತರಾಗಿದ್ದಾರೆ.
ಈ ಹಿಂದೆ ದೆಹಲಿಯಲ್ಲಿನ ರಾಷ್ಟ್ರಪತಿ ಭವನದಲ್ಲಿ ಅಧಿಕಾರಿಯಾಗಿದ್ದು, ಬಳಿಕ ಸ್ವವೃತ್ತಿ ನಡೆಸುತ್ತಿದು ಜೋಸೇಫ್ ಆಗಾಧ ಅರಿವು, ಅನುಭವಸ್ಥರಾಗಿದ್ದು ರಾಷ್ಟ್ರದ ಬಹಳ ಪ್ರಮುಖ ವ್ಯಕ್ತಿಗಳ ಸಂಪರ್ಕ ಹೊಂದಿ ದೇಶದಾದ್ಯಂತದ ವರಿಷ್ಠರು, ರಾಜಕಾರಣಿಗಳು, ಉನ್ನತಾಧಿಕಾರಿಗಳ ಸ್ನೇಹತ್ವವುಳ್ಳವರಾಗಿದ್ದು ಪರೋಪಕಾರಿ ಆಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ.
ಪ್ರಾಥಮಿಕ ವಿದ್ಯಾಭಾಸವನ್ನು ಬೆಳ್ತಂಗಡಿ ಪೆರಿಂಜೆ ಪದ್ದಂಡಡ್ಕ ಪೂರೈಸಿ ಸುಮಾರು ಹದಿನಾರನೇ ವಯಸ್ಸಿನಲ್ಲಿ ಮುಂಬಯಿ ಸೇರಿ ದುಡಿದು ಬಳಿಕ ಹೈದರಾಬಾದ್, ಡೆಲ್ಲಿಯಲ್ಲಿ ಸೇವಾ ನಿರತರಾಗಿದ್ದು ಕಳೆದ ಸುಮಾರು ನಾಲ್ಕುವರೆ ದಶಕಗಳಿಂದ ಕುಟುಂಬಸ್ಥರಿಂದ ದೂರವಿದ್ದರು ಎನ್ನಲಾಗಿದೆ. ಜೋಸೆಫ್ ನಿಧನದ ಬಗ್ಗೆ ತಿಳಿದ ಮುಂಬಯಿ ಬಿಜೆಪಿ ದಕ್ಷಿಣ ಭಾರತೀಯ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯ್ ಎಸ್.ಶೆಟ್ಟಿ ಪಣಕಜೆ ಅವರು ಜೋಸೆಫ್ ಸ್ವಪರಿವಾರದ ಪರಿಚಯ ಗೊತ್ತುಪಡಿಸಿ, ತವರೂರಿನಿಂದ ಮೃತರ ಸೋದರ ಪುತ್ರರಾದ ಜೋನ್ ತಾವ್ರೋ ಮತ್ತು ಅವಿಲ್ ತಾವ್ರೋ ಅವರನ್ನು ಮುಂಬಯಿಗೆ ಬರಮಾಡಿಸಿದ್ದರು.
ನಂತರ ಅಂಧೇರಿ ಪಶ್ಚಿಮದ ಆರ್.ಎನ್ ಕೂಪರ್ ಮುನ್ಸಿಪಾಲ್ ಜನರಲ್ ಹಾಸ್ಪಿಟಲ್‌ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ತವರೂರಲ್ಲೇ ಅಂತ್ಯಕ್ರಿಯೆ ನಡೆಸುವರೇ ಪಾಥಿವ ಶರೀರವನ್ನು ಅಂಬ್ಯುಲೆನ್ಸ್ ಮೂಲಕ ತವರೂರಿಗೆ ರವಾನಿಸುವಲ್ಲಿ ವಿಜಯ್ ಶೆಟ್ಟಿ ಶ್ರಮಿಸಿದ್ದರು. ಮೂಡಬಿದ್ರೆ ಕಲ್ಲಬೆಟ್ಟು ಅಲ್ಲಿನ ಗಂಟಲ್‌ಕಟ್ಟೆ ಸಹಾಯ ಮಾತೆಯ ಇಗರ್ಜಿಯಲ್ಲಿ ಜ.೨೮ನೇ ಬುಧವಾರ ಬೆಳಿಗ್ಗೆ ಸಾರ್ವಜನಿಕ ದರ್ಶನದ ಬಳಿಕ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿದೆ.

