ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಅಷ್ಟಬಂಧ ಬ್ರಹ್ಮ ಕಲಶೋತ್ಸವ ದಲ್ಲಿ ನಿನಾದವಾದ ಮುಂಡಳ್ಳಿ ಭಾವಗಾನ

0
12

ಭಟ್ಕಳ : ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ ಮುಂಡಳ್ಳಿ ಇದರ ಅಷ್ಟಬಂಧ ಬ್ರಹ್ಮ ಕಲಶೋತ್ಸವದ ಮೊದಲ ದಿನವಾದ ರವಿವಾರ ಉಮೇಶ ಮುಂಡಳ್ಳಿ ಅವರ ನಿನಾದ ಕಲ್ಚರಲ್ ಅಕಾಡೆಮಿ ವತಿಯಿಂದ ಭಾವಗಾನ ಕಾರ್ಯಕ್ರಮ ನಡೆಯಿತು.

ಜಿಲ್ಲೆಯ ಜನಪ್ರಿಯ ಸುಗಮಸಂಗೀತ ಗಾಯಕ ಸ್ವರ ಸಂಯೋಜಕ ಉಮೇಶ ಮುಂಡಳ್ಳಿ ಅವರ ಸಾರಥ್ಯದಲ್ಲಿ ನಡೆದ ಭಾವಗಾನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಭಕ್ತಿಗೀತೆ ಭಾವಗೀತೆ ಜನಪದ ತತ್ವಪದ ದೇಶಭಕ್ತಿ ಗೀತೆ ವಚನಗಳು ಹೀಗೆ ಎಲ್ಲಾ ಪ್ರಕಾರದ ಹಾಡುಗಳನ್ನು ಒಳಗೊಂಡ ಭಾವಗಾನ ಪ್ರಸ್ತುತಿ ಸುಂದರವಾಗಿ ಮೂಡಿಬಂದಿತು.

ಸಹಗಾಯಕರಾಗಿ ಹೊನ್ನಾವರದ ಮಧುರಾ ನಾಯ್ಕ ಅಳ್ಳಂಕಿ, ಉತ್ಥಾನ ಮುಂಡಳ್ಳಿ ಇದ್ದರು. ಕೀಬೋರ್ಡ್ ನಲ್ಲಿ ವಿಘ್ನೇಶ ಗೌಡ ಹೊನ್ನಾವರ, ರಿದಂ ಪ್ಯಾಡ್ ನಲ್ಲಿ ಉಮೇಶ ಮೇಸ್ತ, ತಬಲದಲ್ಲಿ ಸುಬ್ರಮಣ್ಯ ಆಚಾರ್ಯ ಗುಣವಂತಿ ಸಹಕರಿಸಿದ್ದರು.

ಕಾರ್ಯಕ್ರಮದ ನಂತರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಬಿ.ಬೊಮ್ಮಾಯ ಹಾಗೂ ಭಾವಗಾನದ ಪ್ರಾಯೋಜಕರಾದ ಸುರೇಶ್ ಮೊಗೇರ ಹಾವಳಿಕಂಠ ಹಾಗೂ ಸರ್ವ ಸದಸ್ಯರು ಸೇರಿ ಉಮೇಶ ಮುಂಡಳ್ಳಿ ಅವರನ್ನು ಗೌರವಿಸಿ ಸನ್ಮಾನಿಸಿದರು.

LEAVE A REPLY

Please enter your comment!
Please enter your name here