ಮುಂಡ್ಕೂರು : ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಚ್ಚೇರಿಪೇಟೆ ಮುಂಡ್ಕೂರು ಕಡಂದಲೆ ಲಯನ್ಸ್ ಕ್ಲಬ್ ಹಾಗೂ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ , ಸಚ್ಚೇರಿಪೇಟೆ ಇವರ ಜಂಟಿ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 6ನೇ ವರ್ಷದ ಸಾರ್ವಜನಿಕ ಮುದ್ದು ಕೃಷ್ಣ ವೇಷ ಸ್ಪರ್ಧೆಯನ್ನು 16/08/2025 ಶನಿವಾರದಂದು ಲಯನ್ಸ್ ಶಾಲಾ ಸಭಾಂಗಣ ಸಚ್ಚೇರಿಪೇಟೆಯಲ್ಲಿ ಹಮ್ಮಿಕೊಳ್ಳಲಾಯಿತು .
ಕಾರ್ಯಕ್ರಮದ ಉದ್ಘಾಟನೆಯನ್ನು ಮು.ಕಡಂದಲೆ. ಲಯನ್ಸ್ .ಕ್ಲಬ್ ನ ಪೂರ್ವಾಧ್ಯಕ್ಷರಾದ ಪೇರೂರು ಲ.ಕೃಷ್ಣ ಶೆಟ್ಟಿ ಯವರು ನೆರವೇರಿಸಿದರು. ಸಂಸ್ಥೆಯ ಸಂಚಾಲಕರಾದ ಲಯನ್ಸ್ ಸತ್ಯ ಶಂಕರ್ ಶೆಟ್ಟಿಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಲಯನ್ಸ್ ಕ್ಲಬ್ ಬಪ್ಷನಾಡು Inspire ನ ವತಿಯಿಂದ ಶಾಲೆಗೆ ಗಣಕಯಂತ್ರವನ್ನು ಕೊಡುಗೆಯಾಗಿ ನೀಡಿದರು. ವೇದಿಕೆಯಲ್ಲಿ 317D ಲಯನ್ಸ್ ಜಿಲ್ಲಾ Chairman Ln MJF ಜಗದೀಶ್ ಚಂದ್ರ ಡಿ.ಕೆ, ಲಯನ್ ಅನಿಲ್ ಕುಮಾರ್, ಲಯನ್ ವೆಂಕಟೇಶ್ ಹೆಬ್ಬಾರ್, ಮು.ಕ.ಲ.ಕ್ಲಬ್ ನ ಅಧ್ಯಕ್ಷರಾದ ಲ.ಯಶವಂತ ಆಚಾರ್ಯ, ಸಂಸ್ಥೆಯ ಮುಖ್ಯ ಶಿಕ್ಷಕರಾದ ಗೌರವ್ ಆರ್ ಕೆ ಮೊದಲಾದವರು ಉಪಸ್ಥಿತರಿದ್ದರು.
ಸುಮಾರು 95 ಕ್ಕೂ ಅಧಿಕ ಸ್ಷರ್ಧಾಳುಗಳು ಸ್ಪರ್ಧೆಯಲ್ಲಿ ಸ್ಷರ್ಧಿಸಿರುತ್ತಾರೆ. ತೀರ್ಪುಗಾರರಾಗಿ ಲ.ವಿ ಕೆ ರಾವ್, ಸುಧಾಕರ್ ಕುಲಾಲ್,ಪವನ ಕಾಮತ್, ಡಾ.ವಿಶ್ವಲತಾ ಸತೀಶ್ ಸಹಕರಿಸಿದರು.
ಸ್ಪರ್ಧೆಯನ್ನು 6 ವಿಭಾಗಗಳಲ್ಲಿ ನಡೆಸಲಾಯಿತು. 0 ಯಿಂದ 1 ವರ್ಷದ ಒಳಗಿನ ಮಕ್ಕಳಿಗೆ ಪುಟಾಣಿ ಕೃಷ್ಣ , 1 ರಿಂದ 2 ವರ್ಷದ ಒಳಗಿನ ಮಕ್ಕಳಿಗೆ ಪುಟಾಣಿ ಕೃಷ್ಣ , 2 ರಿಂದ 4 ವರ್ಷದ ಒಳಗಿನ ಮಕ್ಕಳಿಗೆ ಮುದ್ದು ಕೃಷ್ಣ , 4 ರಿಂದ 6 ವರ್ಷದ ಒಳಗಿನ ಮಕ್ಕಳಿಗೆ ಬೆಣ್ಣೆ ಕೃಷ್ಣ , 6 ರಿಂದ 8 ವರ್ಷದ ಒಳಗಿನ ಮಕ್ಕಳಿಗೆ ಬಾಲಕೃಷ್ಣ ,ಯಶೋಧೆ ಕೃಷ್ಣ ( 1 ರಿಂದ 6 ವರ್ಷದೊಳಗಿನ ) ಮಗು ಮತ್ತು ತಾಯಿ .
- ಪ್ರತಿ ವಿಭಾಗಕ್ಕೆ ಪ್ರಥಮ,ದ್ವಿತೀಯ , ತೃತೀಯ ಬಹುಮಾನ ನೀಡಲಾಯಿತು.
- ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಶಂಸಾ ಪತ್ರ ನೀಡಲಾಯಿತು.
ಕಾರ್ಯಕ್ರಮದ ವೀಡಿಯೋವನ್ನು ತುಳುನಾಡ ವಾರ್ತೆ ಚಾನಲ್ ಜಗದೀಶ್ ಪೂಜಾರಿ ಮತ್ತು ತಂಡದವರು ಮಾಡಿರುತ್ತಾರೆ.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಕೆ.ಪಿ.ಸುಚರಿತ ಶೆಟ್ಟಿ, ಪ್ರಸಾದ್ ಶೆಟ್ಟಿ ಮುಂಬಯಿ,ಮುಂಡ್ಕೂರು ಕಡಂದಲೆ ಕ್ಲಬ್ ನ ಪೂರ್ವಾಧ್ಯಕ್ಷರುಗಳಾದ ಲ.ಆನಂದ್ ಆಚಾರ್ಯ, ಲ .ವಿಕಾಸ್ ಶೆಟ್ಟಿ, ಲ. ಸತೀಶ್ ಪ್ರಭು, ಲ.ಶ್ರೀಕಾಂತ್ ಕಾಮತ್, ಕಾರ್ಯದರ್ಶಿ ಲ.ಸುರೇಶ್ ಶೆಟ್ಟಿ ಲ.ಅಶೋಕ್ ಶೆಟ್ಟಿ,ಸದಸ್ಯರು,ಅಂಗನವಾಡಿ ಕಾರ್ಯಕರ್ತರು, ಶಿಕ್ಷಕ ರಕ್ಷಕ ಸಂಘದ ಸದಸ್ಯರು ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಜಯಲಕ್ಷ್ಮಿ ಶೆಟ್ಟಿಗಾರ್ ಸ್ವಾಗತಿಸಿ, ಸುಶೀಲಾ ನಿರೂಪಿಸಿ ,ಜ್ಯೋತಿ ವಂದನಾರ್ಪಣೆ ಗೈದರು.

