ಮುಂಡ್ಕೂರು: ಕಜೆ ಶ್ರೀ ಮಹಮ್ಮಾಯೀ ದೇವಸ್ಥಾನ(ಕುಕ್ಕುಡಡಿ ಮಾರಿಗುಡಿ) ಇಲ್ಲಿ ಮಾರ್ಚ್ 10 ರ ಮಂಗಳವಾರ ಕ್ಷೇತ್ರದಲ್ಲಿ ಮಹಾಚಂಡಿಕಾಯಾಗ ಮತ್ತು ಮಾರ್ಚ್ 11 ರ ಬುಧವಾರ ಮಾರಿಪೂಜೆಯು ಜರಗಲಿರುವುದು.
ಮಾರ್ಚ್ 10, ಬೆಳಿಗ್ಗೆ 8.30ರಿಂದ ನಾಗದರ್ಶನ, ಬೆಳಿಗ್ಗೆ 9.15ರಿಂದ : ಮಹಾಚಂಡಿಕಾ ಯಾಗ ಜರಗಲಿದೆ. (ಸೇವಾಕರ್ತರು : ಎಡ್ವಕೇಟ್ ಅಕ್ಷತಾ ಪ್ರಭು ಮತ್ತು ಏಕನಾಥ ಪ್ರಭು, ಮುಂಡೂರು)ಮಧ್ಯಾಹ್ನ 12.00ರಿಂದ ಪೂರ್ಣಾಹುತಿ, ಮಹಾಪೂಜೆ, ದೇವಿದರ್ಶನ ಹಾಗೂಮಧ್ಯಾಹ್ನ 1.00ರಿಂದ ಅನ್ನ ಸಂತರ್ಪಣೆ ನೆರವೇರಲಿದೆ. ಅಂದು ಮಧ್ಯಾಹ್ನ 2.30ಕ್ಕೆಗುಳಿಗ ಪಂಜುರ್ಲಿ ದೈವಗಳ ಭಂಡಾರ ಇಳಿಯುವುದು.ಸಂಜೆ 4.00ಕ್ಕೆ ಸಚ್ಚೇರಿಪೇಟೆಗೆ ಶ್ರೀ ಮಹಾಮ್ಮಾಯೀ ಅಮ್ಮನವರ ಮೆರವಣಿಗೆ, ರಾತ್ರಿ 8.45ಕ್ಕೆ ಸಚ್ಚೇರಿಪೇಟೆಯಿಂದ ಶ್ರೀ ಕ್ಷೇತ್ರಕ್ಕೆ ನಿರ್ಗಮಿಸಲಿರುವುದು. ರಾತ್ರಿ 9.45 ಕ್ಕೆ ಬಿಂಬ ಪ್ರತಿಷ್ಠೆ, ದೇವಿದರ್ಶನ, ಬಲಿ ಹಾಗೂ ಗುಳಿಗ-ಪಂಜುರ್ಲಿ ನೇಮೋತ್ಸವ ನಡೆಯಲಿದೆ. ಮಾರ್ಚ್ 11ರಂದು ಮಾರಿಪೂಜೆ. ಮಧ್ಯಾಹ್ನ 12.00ಕ್ಕೆ ದೇವಿದರ್ಶನ, ಪ್ರಸಾದ ವಿತರಣೆ ನಡೆಯಲಿದೆ.
ಆ ಪ್ರಯುಕ್ತ ಭಕ್ತಾಭಿಮಾನಿಗಳು ಈ ಮಹತ್ಕಾರ್ಯದಲ್ಲಿ ಭಾಗವಹಿಸಿ, ಶ್ರೀ ದೇವಿಯ ಪ್ರಸಾದವನ್ನು ಸ್ವೀಕರಿಸಿ, ಶ್ರೀ ಮಹಾಮ್ಮಾಯೀ ಅಮ್ಮನವರ ಪರಮಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಶ್ರೀ ಅನಂತಕೃಷ್ಣ ಆಚಾರ್ಯ ಪ್ರಧಾನ ಅರ್ಚಕರು, ಕಜೆ ಆರು ಮನೆಯವರ ಪರವಾಗಿ ಎಂ.ಜಿ. ಕರ್ಕೇರ-ಗೌರವ ಅಧ್ಯಕ್ಷರು, ಕಜೆ ಹೊಸಮನೆ ಸುಂದರ ಸಪಳಿಗ- ಅಧ್ಯಕ್ಷರು,ಹೆಗ್ಗಡೆ ಕಜೆ ಚೆನ್ನಪ್ಪ ಸಪಳಿಗ -ಉಪಾಧ್ಯಕ್ಷರು, ಕಜೆ ಪಡುಬೈಲು ಸುರೇಂದ್ರ ಸಾಲ್ಯಾನ್-ಪ್ರಧಾನ ಕಾರ್ಯದರ್ಶಿ, ಕಜೆ ಮಂಗ್ಲಿಮಾರ್ ನಾರಾಯಣ ಸಪಳಿಗೆ – ಜೊತೆ ಕಾರ್ಯದರ್ಶಿ, ಕಜೆ ಆಚೆಮನೆ ಉದಯ ಕುಮಾರ್-ಕೋಶಾಧಿಕಾರಿ, ಕಜೆ ಮನೆ ಭುಜಂಗ ಮೂಲ್ಯ – ಜೊತೆ ಕೋಶಾಧಿಕಾರಿ ಮತ್ತು ಸದಸ್ಯರುಗಳಾದ ಕಜೆ ಪಡುಬೈಲು ಜಯ ಸಾಲ್ಯಾನ್, ಕಜೆ ಹೊಸಮನೆ ಶೇಖರ ಮೆಂಡನ್, ಕಜೆ ಮನೆ ಸುರೇಶ್ ವಾಸು ಮೂಲ್ಯ, ಕಜೆ ಆಚೆಮನೆ ಸಂಜೀವ ಶೇರಿಗಾರ್, ಕಜೆ ಮಂಗ್ಲಿಮಾರ್ ದಯಾನಂದ ಸಪಳಿಗ, ಹೆಗ್ಗಡೆ ಕಜೆ ಸುಚಿತ್ ಕುಮಾರ್ ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಮೊಬೈಲ್: 90088 00947, 99808 98245

