ಮುನಿಯಾಲಿನಲ್ಲಿ ಆರಂಭಗೊಂಡ ಮಕ್ಕಳ ಬೇಸಿಗೆ ಶಿಬಿರ “ರಜಾ ಮಜಾ” ವನ್ನು ವರಂಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ ಅಮೀನ್ ಉದ್ಘಾಟಿಸಿದರು.
ಮುನಿಯಾಲು : ರಾಪಿಡ್ ಇನ್ಸಿಟ್ಯೂಟ್ ಅಬಾಕಸ್ ಮುನಿಯಾಲು ವತಿಯಿಂದ ವರಂಗ ಗ್ರಾಮ ಪಂಚಾಯಿತಿ ಹಾಗೂ ಲಯನ್ಸ್ ಕ್ಲಬ್ ಮುನಿಯಾಲು ಸಹಕಾರದಲ್ಲಿ ಮುನಿಯಾಲು ನಡೆಯುವ ೧೫ ದಿನಗಳ ಮಕ್ಕಳ ಬೇಸಿಗೆ ಶಿಬಿರ “ರಜಾ ಮಜಾ” ಇತ್ತೀಚೆಗೆ ಆರಂಭಗೊಂಡಿತು. ವರಂಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ ಅಮೀನ್ ಉದ್ಘಾಟಿಸಿದರು. ವರಂಗ ಗ್ರಾಮ ಪಂಚಾಯಿತಿ ಸಂಜೀವಿನಿ ಘಟಕದ ಸುಜಾತ, ರಾಪಿಡ್ ಇನ್ಸಿಟ್ಯೂಟ್ ಅಬಾಕಸ್ ಮುನಿಯಾಲು ಆಡಳಿತ ನಿರ್ದಶಕಿ ಸುನೀತಾ ಹೆಬ್ಬಾರ್ ಉಪಸ್ಥಿತರಿದ್ದರು.