ಹೊಸ ಸದಸ್ಯರ ಸೇರ್ಪಡೆಗೊಳಿಸಿ ಲಯನ್ಸ್ ಕ್ಲಬ್ ಬಲಗೊಳಿಸಿ : ರಂಜನ್ ಕಲ್ಕೂರ್
ಮುನಿಯಾಲು : ಲಯನ್ಸ್ ಕ್ಲಬ್ ಗಳಿಗೆ ಹೊಸ ಸದಸ್ಯರ ಸೇರ್ಪಡೆ ಮಾಡುವ ಮೂಲಕ ಲಯನ್ಸ್ ಕ್ಲಬ್ ಗಳನ್ನು ಬಲಪಡಿಸುವ ಕಾರ್ಯ ಆಗಬೇಕಿದೆ, ಮುನಿಯಾಲು ಲಯನ್ಸ್ ಕ್ಲಬ್ ಗ್ರಾಮೀಣ ಪ್ರದೇಶದ ಮಾದರಿ ಕ್ಲಬ್. ಜನಸೇವೆಯೂ ಕೂಡ ಅತ್ಯಂತ ವಿಶಿಷ್ಠವಾಗಿದೆ ಎಂದು ಲಯನ್ಸ್ ಕ್ಲಬ್ ಚೀಫ್ ಕೋ ಆರ್ಡಿನೇಟರ್ ರಂಜನ್ ಕಲ್ಕೂರ್ ಹೇಳಿದರು.
ಅವರು ಮುನಿಯಾಲು ಮಾರಿಯಮ್ಮ ದೇವಸ್ಥಾನದಲ್ಲಿ ಮುನಿಯಾಲು ಲಯನ್ಸ್ ಕ್ಲಬ್ ಅಧ್ಯಕ್ಷ ಖಜಾನೆ ಸಂದೇಶ ಶೆಟ್ಟಿ ಮತ್ತವರ ತಂಡಕ್ಕೆ ಪದಗ್ರಹಣ ನೆರವೇರಿಸಿ ಮಾತನಾಡಿದರು. ನಾವು ಕಷ್ಟಪಟ್ಟು ದುಡಿದು ನ್ಯಾಯಯುತವಾಗಿ ಹಣ ಸಂಪಾದನೆ ಮಾಡುವುದು ಕೂಡ ಸಮಾಜಸೇವೆ, ಆ ಮೂಲಕ ಸುಖ ಶಾಂತಿ ನೆಮ್ಮದಿಯಿಂದ ಬದುಕಲು ಸಾಧ್ಯವಿದೆ ಎಂದು ರಂಜನ್ ಕಲ್ಕೂರ್ ಹೇಳಿದರು.
ಮುನಿಯಾಲು ಲಯನ್ಸ್ ಕ್ಲಬ್ ನಿರ್ಗಮನ ಅಧ್ಯಕ್ಷ ಟಿ. ಭುಜಂಗ ಶೆಟ್ಟಿ ಮಾತನಾಡಿ ಸೇವಾವಧಿಯಲ್ಲಿ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಮುನಿಯಾಲು ಲಯನ್ಸ್ ಕ್ಲಬ್ ಅಧ್ಯಕ್ಷ ಖಜಾನೆ ಸಂದೇಶ ಶೆಟ್ಟಿ ಮಾತನಾಡಿ ಜನರ ಸೇವೆ ಮಾಡಲು ಮುನಿಯಾಲು ಲಯನ್ಸ್ ಕ್ಲಬ್ ಅತ್ಯುತ್ತಮ ಅವಕಾಶ ನೀಡಿದೆ. ಎಲ್ಲರ ಮಾರ್ಗದರ್ಶನದಲ್ಲಿ ಸಮಾಜಮುಖಿ ಕಾರ್ಯವನ್ನು ನಡೆಸುವುದಾಗಿ ತಿಳಿಸಿದರು. ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಗುರುಪ್ರಸಾದ ಶೆಟ್ಟಿ, ವಲಯಾಧ್ಯಕ್ಷ ಸುರೇಶ ಶೆಟ್ಟಿ ಮಾತನಾಡಿದರು. ಪ್ರತಿಭಾನ್ವಿತ ವಿದ್ಯಾರ್ಥಿ ಅಂಕಿತಾ ಪ್ರಭು ಅವರಿಗೆ ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು. ವೈದ್ಯಕೀಯ ನೆರವು ನೀಡಲಾಯಿತು. ಲಯನ್ಸ್ ಕ್ಲಬ್ ಸರ್ವ ಸದಸ್ಯರನ್ನು ಭುಜಂಗ ಶೆಟ್ಟಿ ಗೌರವಿಸಿದರು. ಮುನಿಯಾಲು ಲಯನ್ಸ್ ಕ್ಲಬ್ ಕಾರ್ಯದರ್ಶಿ ಮುನಿಯಾಲು ಗೋಪಿನಾಥ ಭಟ್ ಕೋಶಾಧಿಕಾರಿ ಅಶೋಕ ಶೆಟ್ಟಿ ಪಡುಕುಡೂರು, ಲಿಯೋ ಕ್ಲಬ್ ಅಧ್ಯಕ್ಷ ಹೇಮಂತ್ ಭಟ್, ವಿವಿಧ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು. ಶಂಕರ ಶೆಟ್ಟಿ ಮುನಿಯಾಲು ಪರಿಚಯಿಸಿ ನಿರೂಪಿಸಿದರು. ಗೋಪಿನಾಥ ಭಟ್ ವಂದಿಸಿದರು.