ಮುನಿಯಾಲು : ಮಾತಿಬೆಟ್ಟು ನಾರಾಯಣಗುರು ನಗರದಲ್ಲಿ ಮುನಿಯಾಲು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಯಶೋದ ಸುಂದರ್ ಟಿ ಕುಂದರ್ ಕೊಡುಗೆಯಾಗಿ ನೀಡಿ ನಿರ್ಮಿಸಿದ ಬಸ್ ನಿಲ್ದಾಣವನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು. ಯಶೋದ ಸುಂದರ್ ಟಿ ಕುಂದರ್ ಬಸ್ ನಿಲ್ದಾಣ ಉದ್ಘಾಟಿಸಿದರು.ಉಡುಪಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಪತ್ರಕರ್ತ ಅಲೆವೂರು ದಿನೇಶ್ ಕಿಣಿ, ಮುನಿಯಾಲು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಟಿ. ಮಂಜುನಾಥ್ ಕಾಡುಹೊಳೆ, ಸ್ಥಾಪಕಾಧ್ಯಕ್ಷ ಸುಂದರ್ ಟಿ ಕುಂದರ್, ಪದಾಧಿಕಾರಿಗಳಾದ ಜ್ಯೋತಿ ಹರೀಶ್, ಹರೀಶ್ ಪೂಜಾರಿ, ಸಂಜೀವ ಪೂಜಾರಿ ಕಂಟೇಬೆಟ್ಟು, ಸುರೇಂದ್ರ ಬೋಂಟ್ರ, ಪ್ರಮೀಳ ಹರೀಶ್, ಸತೀಶ ಪೂಜಾರಿ ಎಳ್ಳಾರೆ ಸಹಿತ ಪ್ರಮುಖರು ಭಾಗವಹಿಸಿದ್ದರು.