ಅ.26ರಂದು ಚಿತೇಶ್‌ ಸಂಗೀತ ಬಳಗ ಸುಳ್ಯ ಇದರ ಆಶ್ರಯದಲ್ಲಿ ಸಂಗೀತ ಸ್ಪರ್ಧೆ(ಕರೋಕೆ)

0
28


ಸುಳ್ಯ: ಚಿತೇಶ್‌ ಸಂಗೀತ ಬಳಗ ಸುಳ್ಯ ಇದರ ಆಶ್ರಯದಲ್ಲಿ ಸಂಗೀತ ಸ್ಪರ್ಧೆ(ಕರೋಕೆ)ಯ ಸೀಸನ್‌ 4 ರ ಕಾರ್ಯಕ್ರಮವು ಅಕ್ಟೋಬರ್‌ 26 ರಂದು ಬೆಳಿಗ್ಗೆ 9 ಗಂಟೆಯಿಂದ ಎ.ಪಿ.ಎಂ.ಸಿ ಸಭಾಂಗಣದಲ್ಲಿ ಜರುಗಲಿದೆ.
ಸಾವಿತ್ರಿ ದೊಡ್ಡಮನೆ ಅಧ್ಯಕ್ಷರು ಸಮಗ್ರ ಸಂಜೀವಿನಿ ಒಕ್ಕೂಟ ಐವರ್ನಾಡು ಇವರು ಕಾರ್ಯಕ್ರಮ ಉದ್ಘಾಟಿಸಲಿರುವರು. ಸುಜಾತ ಪವಿತ್ರ ಮಜಲು ಸದಸ್ಯರು ಗ್ರಾಮ ಪಂಚಾಯತ್‌ ಐವರ್ನಾಡು ಅಧ್ಯಕ್ಷತೆ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ನವೀನ್‌ ಚಾತುಬಾಯಿ, ಮುತ್ತು ಕೃಷಿಕರು ಐವರ್ನಾಡು, ಸಿ.ಟಿ ಮಂಜುನಾಥ ಗುರು ಸ್ವಾಮಿಗಳು ಹರಳಹಳ್ಳಿ ದಾವಣಗೆರೆ, ಶಶಿರಾಜ ಬಿ. ದೈಹಿಕ ಶಿಕ್ಷಣ ಶಿಕ್ಷಕರು ಡಾ| ಬಿ. ಆರ್‌ ಅಂಬೆಡ್ಕರ್‌ ವಸತಿ ಶಾಲೆ ಗುರುಪುರ ಮಂಗಳೂರು, ಪೂರ್ಣಿಮಾ ಪೆರ್ಲಂಪಾಡಿ, ಕೊಳ್ತಿಗೆ ವಲಯದ ಪೆರ್ಲಪಾಡಿ ಅಂಗನವಾಡಿ ಕೇಂದ್ರ ಇವರು ಉಪಸ್ಥಿತರಿರಲಿರುವರು.
ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಈ ಸಮಾರಂಭದ ಅಧ್ಯಕ್ಷತೆಯನ್ನು ಭೀಮರಾವ್‌ ಕೋಡಿಹಾಳ ಬೆಂಗಳೂರು, ಅಧ್ಯಕ್ಷರು ಚಂದನ ಸಾಹಿತ್ಯ ವೇದಿಕೆ, ಗಾಯಕರು, ನಿರ್ದೇಶಕರು, ಬಹುಮಾನ ವಿತರಣೆಯನ್ನು ಮೋಹನ್‌ ನಂಗಾರು, ನಿವೃತ ತಾಂತ್ರಿಕ ಕೃಷಿ ಅಧಿಕಾರಿಗಳು ಮಾಡಲಿರುವರು. ಶಿವರಾಮ ನೆಕ್ರಪಾಡಿ, ಆಡಳಿತ ಸಮಿತಿ ಪಂಚಲಿಂಗೇಶ್ವರ ದೇವಸ್ಥಾನ ಐವರ್ನಾಡು ಸನ್ಮಾನ ಕಾರ್ಯಕ್ರಮ ನೇರವೇರಿಸಲಿರುವರು.


ಮುಖ್ಯ ಅತಿಥಿಗಳಾಗಿ ವಿಜಯ್‌ ಕುಮಾರ್‌ ಸುಳ್ಯ ಗಾಯಕರು, ಅರುಣ್‌ ರಾವ್‌ ಜಾಧವ್‌ ಸುಳ್ಯ ಸಪ್ತಸ್ವರ ಸಂಗೀತಾ ಕಲಾ ವೇದಿಕೆ ಇವರು ಉಪಸ್ಥಿತರಿರಲಿರುವರು. ಪ್ರಮೀಳಾ ರಾಜ್‌ ಧನ್ಯವಾದ ಸಲ್ಲಿಸಲಿರುವರು. ಪ್ರಾರ್ಥನ ಗೀತೆ ಧೃತಿ ಲಾವಂತಡ್ಕ, ಸ್ವಾತಿ ಪಾಲೆಪ್ಪಾಡಿ ಹಾಡಲಿರುವರು. ಸನ್ಮಾನ ಪತ್ರ ವಾಚನ ರೋಹಿತ್‌ ಬಾಂಜಿಕೋಡಿ, ಪುಷ್ಪಾವತಿ ಡಿ. ಗಾಯಕಿ ಹಾಗೂ ನವೀನ್‌ ಬಾಂಜಿಕೋಡಿ ಮತ್ತು ಅಮಿತಾ ಲಾವಂತಡ್ಕ ಕಾರ್ಯಕ್ರಮ ನಿರೂಪಿಸಲಿರುವರು. ಕಾರ್ಯಕ್ರಮ ಪ್ರಯೋಜಕರಾದ ಪೆರುಮಾಳ್‌ ಲಕ್ಷ್ಮಣ್‌ ಐವರ್ನಾಡು ಅವರು ಎಲ್ಲರನ್ನು ಈ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಮಂತ್ರಿಸಿದ್ದಾರೆ.


ನಿಬಂಧನೆಗಳು

  • ಸ್ಪರ್ಧೆಯನ್ನು ಸರಿಯಾದ ಸಮಯಕ್ಕೆ ಪ್ರಾರಂಭಿಸಲಾಗುವುದು
  • ಕೆಲವೇ ಗಾಯಕರಿಗೆ ಮಾತ್ರ ಅವಕಾಶ ಆದಷ್ಟು ಬೇಗನೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. ನುರಿತ ಸಂಗೀತಗಾರರಿಂದ ಆಯ್ಕೆ.
    ಸ್ಪರ್ಧೆಯಲ್ಲಿ ಭಾಗವಹಿಸುವವರು ದಿನಾಂಕ 15-10-2025 ರ ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳತಕ್ಕದ್ದು.
  • ಹಿರಿಯರ ವಿಭಾಗ ಮತ್ತು ಕಿರಿಯರ ವಿಭಾಗದ ಸ್ಪರ್ಧೆ ಇರುತ್ತದೆ
  • ಸ್ಪರ್ದೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಚತುರ್ಥ ಶ್ರೇಣಿಗಳಿರುತ್ತವೆ
  • ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರ ನೀಡಲಾಗುವುದು.
  • ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಕರೋಕೆಯನ್ನು ತಾವೇ ತರತಕ್ಕದ್ದು.
    ವಿ.ಸೂ: ಕಾರ್ಯಕ್ರಮದಲ್ಲಿ ಮಧ್ಯಾಹ್ನದ ಭೋಜನದ ವ್ಯವಸ್ಥೆ ಇರುತ್ತದೆ.

LEAVE A REPLY

Please enter your comment!
Please enter your name here