ಸಂಗೀತ ಮಾಂತ್ರಿಕ ಇಳಯರಾಜರಿಂದ ಮೂಕಾಂಬಿಕೆಗೆ ವಜ್ರದ ಕಿರೀಟ ಸಮರ್ಪಣೆ

0
185


ಉಡುಪಿ: ದೇಶದ ಪ್ರಸಿದ್ಧ ಸಂಗೀತ ನಿರ್ದೇಶಕ, ಸ್ವರ ಮಾಂತ್ರಿಕ ಇಳಯರಾಜ ಬುಧವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ಸುಮಾರು 4 ಕೋಟಿ ರೂ. ಮೌಲ್ಯದ ವಜ್ರ ಖಚಿತ ಕಿರೀಟ, ವೀರಭದ್ರ ದೇವರಿಗೆ ರಜತ ಕಿರೀಟ ಮತ್ತು ಖಡ್ಗ ಸಮರ್ಪಣೆ ಮಾಡಿದರು.
ಶ್ರೀದೇವಿ ಸನ್ನಿಧಿಗೆ ವಜ್ರ ಖಚಿತ ಕಿರೀಟವನ್ನು ಓಲಗ ಮಂಟಪದಿಂದ ಪುರಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಯಿತು.


ಕೋಟ್ಯಂತರ ಮೌಲ್ಯದ ಆಭರಣ ಅರ್ಪಿಸಿ ಇಳೆಯರಾಜ ಭಾವುಕರಾದರು. ದೇಗುಲದ ವ್ಯವಸ್ಥಾಪನಾ ಸಮಿತಿ ವತಿಯಿಂದ ಮಹಾದಾನಿಗೆ ಗೌರವಾರ್ಪಣೆ ಮಾಡಲಾಯಿತು.
ಮೂಕಾಂಬಿಕೆಯಿಂದಾಗಿ ತನ್ನ ಜೀವನದಲ್ಲಿ ಪವಾಡ ನಡೆದಿದೆ ಎಂದು ಇಳಯರಾಜ ತಿಳಿಸಿದ್ದು, ಪ್ರತೀ ವರ್ಷ ಹುಟ್ಟುಹಬ್ಬವನ್ನು ದೇವಸ್ಥಾದಲ್ಲೇ ಆಚರಣೆ ಮಾಡುತ್ತಾರೆ. ಸಂಗೀತ ಸೇವೆಯನ್ನೂ ನೀಡುತ್ತಿದ್ದಾರೆ. ಈ ಹಿಂದೆಯೂ ಅನೇಕ ಬರಿ ದೇವಿಗೆ ಆಭರಣಗಳನ್ನು ಅರ್ಪಿಸಿದ್ದಾರೆ.

LEAVE A REPLY

Please enter your comment!
Please enter your name here