ಪೆರ್ನಾಜೆ: ವಿಶಿಷ್ಟ ಕಂಠದ ಸಂಗೀತಗಾರ್ತಿ ಸವಿತಾ ಕೋಡಂದೂರು ಅವರು ಹಲವಾರು ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಅಪಾರ ಸಾಧನೆಗಾಗಿ ಚಂದನ ಸಾಹಿತ್ಯ ಸಂಗೀತ ಸಂಭ್ರಮೋತ್ಸವದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಹಿರಿಯ ಸಾಹಿತಿಗಳಾದ ನಾರಾಯಣ್ ರೈ ಕುಕ್ಕುವಳ್ಳಿ ಮತ್ತು ಚಂದನ ಸಾಹಿತ್ಯ ವೇದಿಕೆ ಸುಳ್ಯ ಅಧ್ಯಕ್ಷರಾದ ಎಚ್
ಭೀಮ್ರಾವ್ ವಾಶ್ಟರ್ ಕೋಡಿಪಾಳ, ಸುಳ್ಯ ಪ್ರಶಸ್ತಿ ಪ್ರಧಾನ ಮಾಡಿದರು ಶಾಲು ಮಾಲೆ ಸ್ಮರಣಿಕೆ ಅಭಿನಂದನ ಪತ್ರಗಳನ್ನು ಸನ್ಮಾನಿಸಿ ಗಣ್ಯರ ಸಮ್ಮುಖದಲ್ಲಿ ಆ 3ರಂದು ಸುಳ್ಯ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯಿತು .
ಇದೀಗಾಗಲೇ ದಾವಣಗೆರೆಯಲ್ಲಿ ನಡೆದ ಸಾಲಿಗ್ರಾಮ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆಯ ಸಯೋಗದಲ್ಲಿ 70ನೇ ಕನ್ನಡ ನಿತ್ಯೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾರದ ಸರಸ್ವತಿ ಸಾಧಕ ಸಿರಿ 2025 ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪುತ್ತೂರು ಲಯನ್ಸ್ ಸೇವಾ ಸದನದಲ್ಲಿ ಆರ್‌ಪಿ ಕಲಾ ಸಂಸ್ಥೆಯು ಸಂಸ್ಥೆ ವತಿಯಿಂದ ಗಾನಶಾರದೆ ಗ್ರಾಂಡ್ ಫಿನಾಲೆಯಲ್ಲಿ ಅಂತರಾಜ್ಯ ಇದರಲ್ಲಿ ಉತ್ತಮ ತೀರ್ಪುಗಾರರಾಗಿದ್ದು ಸಂಘಟಕರ ಕಲಾವಿದರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ, ಇವರು ವಿಟ್ಲ ಮೈತ್ರಿ ಗುರುಕುಲದಲ್ಲಿ ಅಲ್ಲಿನ ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಕಿಯಾಗಿದ್ದಾರೆ.
ಇವರು ಕುಮಾರ್ ಪೆರ್ನಾಜೆ ಯವರ ಸ್ವರ ಸಿಂಚನ ಕಲಾತಂಡದ ಸಂಗೀತಗಾರ್ತಿಯಾಗಿದ್ದು ವಿಟ್ಲದಲ್ಲಿ ಸಂಗೀತ ಶಾಲೆ ನಡೆಸುತ್ತಿದ್ದು ನೂರಾರು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ ಅಲ್ಲದೆ ಸತತ 10 ವರ್ಷಗಳಿಂದ ಶೇಕಡ 100 ಫಲಿತಾಂಶವನ್ನು ಪಡೆದಿರುತ್ತದೆ. ಸೆಕ್ಸ್ಫೋನ್ ಜೊತೆ ಗಾನ ವೈಭವ ನವ ಮಾತ್ರಿಕೆಯರ ಗೀತ ಗಾಯನ ಸಪ್ತಮಾತ್ರಿಕೆಯರ ಗೀತ ಗಾಯನ ರಸಮಂಜರಿ ಶಾಸ್ತ್ರೀಯ ಗಾಯನ ಹೀಗೆ ಭಕ್ತಿ ಗೀತೆ, ಭಾವಗೀತೆ ಜಾನಪದ ಗೀತೆ ಸಂಗೀತ ಗುಚ್ಚದ ವಿಶೇಷ ಸ್ವರ ಸಿಂಚನವಾಗಿದೆ.
ಸಭಾಧ್ಯಕ್ಷತೆಯನ್ನು ಎಚ್ ಭಿಮ್ರಾವ್ ವಾಸ್ಟರ್ ಕೊಡಿಪಾಳ ಅಧ್ಯಕ್ಷರು ಚಂದನ ಸಾಹಿತ್ಯ ವೇದಿಕೆ ಸುಳ್ಯ, ಕಾರ್ಯಕ್ರಮದ ಉದ್ಘಾಟನೆಯನ್ನು ಮೋಹನ್ ನಂಗಾರ್ ನಿವೃತ್ತ ತಾಂತ್ರಿಕ ಕೃಷಿ ಅಧಿಕಾರಿಗಳು ಸುಳ್ಯ, ಕವಿಗೋಷ್ಠಿಯ ಅಧ್ಯಕ್ಷತೆ ಪ್ರಭಾಕರ್ ಶಿಶಿಲ ಹಿರಿಯ ಸಾಹಿತಿಗಳು, ಸಂಚಾಲಕರು ಜೈನ ಸೇವಾಶ್ರಮ ಅಜ್ಜಾವರ ದೇವರ ಕಳೆಯ ಸುಳ್ಯ , ಶ್ರೀ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿಯವರ ಘನ ಉಪಸ್ಥಿತಿಯಲ್ಲಿ,
ಹಾ.ಮ ಸತೀಶ್ ಬೆಂಗಳೂರು ಸಾಹಿತಿಗಳು ಕೃತಿ ಬಿಡುಗಡೆ ಮಾಡಿದರು.ಮುಖ್ಯ ಅತಿಥಿಗಳು ಶ್ರೀಮತಿ ಸಾವಿತ್ರಿ ದೊಡ್ಡ ಮನೆ ಐವರ್ನಾಡು, ಪೆರುಮಾಳ್ ಲಕ್ಷ್ಮಣ್, ಕುಮಾರ್ ಪೆರ್ನಾಜೆ ಸೌಮ್ಯ ದಂಪತಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.