ಮೈಸೂರು ವಿಭಾಗ ಮಟ್ಟದ ವಾಲಿಬಾಲ್‌ : ಪಡುಕುಡೂರು ಶಾಲಾ ಉಡುಪಿ ತಂಡಕ್ಕೆ ತೃತೀಯ ಪ್ರಶಸ್ತಿ.

0
14

ಪಡುಕುಡೂರು : ಬೆಳ್ತಂಗಡಿಯ ಮುಂಡಾಜೆ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ನಡೆದ ೧೪ ಮತ್ತು ೧೭ರ ವಯೋಮಾನದ ಮೈಸೂರು ವಿಭಾಗ ಮಟ್ಟದ ಬಾಲಕಿಯರ ವಾಲಿಬಾಲ್‌ ಪಂದ್ಯಾಟದಲ್ಲಿ ಪಡುಕುಡೂರು ಸರ್ಕಾರಿ ಪ್ರಾಥಮಿಕ ಶಾಲಾ ನೇತೃತ್ವದ ಉಡುಪಿ ಜಿಲ್ಲಾ ತಂಡಕ್ಕೆ ತೃತೀಯ ಸ್ಥಾನದ ಪ್ರಶಸ್ತಿ ಲಭಿಸಿದೆ. ಪಡುಕುಡೂರು ಶಾಲಾ ವಾಲಿಬಾಲ್ ತಾರೆಯರಾದ ದೀಕ್ಷಾ (ಕಪ್ತಾನೆ), ಸುಚಿತಾ (ಉಪ ಕಪ್ತಾನೆ) ,ಪ್ರಣೀತಾ, ಸಾನ್ವಿಕಾ ಹಾಗೂ ಸೈಂಟ್ ಜೋನ್ಸ್ ವಿದ್ಯಾಸಂಸ್ಥೆಯ ಅನುಷಾ, ಮುಸ್ಕಾನು ಬಾನು ಹಾಗೂ ಕ್ರೈಸ್ಟ್ ಕಿಂಗ್ ಕಾರ್ಕಳ ವಿದ್ಯಾ ಸಂಸ್ಥೆಯ ಟ್ರೀಷ್ಮಾ, ಕ್ಯಾಟ್ಲೀನ್ & ಎಲ್ಸಾ ಹಾಗೂ ಮಹಾಲಕ್ಷ್ಮೀ ಉಚ್ಚಿಲ ವಿದ್ಯಾಸಂಸ್ಥೆಯ ಅನೀನಾ ಪ್ರಥಮ ಬಾರಿಗೆ ವಿಭಾಗ ಮಟ್ಟದಲ್ಲಿ ಭಾಗವಹಿಸಿ ನಿರಂತರ ಪರಿಶ್ರಮದ ಸಾಧನೆ ಮಾಡಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯ ಹರೀಶ್ ಪೂಜಾರಿ, ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಶೆಟ್ಟಿ, ಉಪಾಧ್ಯಕ್ಷ ಹರೀಶ್ ಪೂಜಾರಿ, ಸಮಿತಿಯ ಸದಸ್ಯರು, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಜಯಲೀಲಾ, ಗೌರವಾಧ್ಯಕ್ಷ ಪಡುಕುಡೂರು ಪಡುಪರ್ಕಳ ಹರೀಶ್ ಶೆಟ್ಟಿ ಮುಂಬೈ, ಪದಾಧಿಕಾರಿಗಳು, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಭಾರವಿ ಶೆಟ್ಟಿ ಮತ್ತು ಪದಾಧಿಕಾರಿಗಳು ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here