ಹೊಸದಿಲ್ಲಿ: ವಿದೇಶಾಂಗ ಸೇವೆಗಳ ಅಧಿಕಾರಿ ನದ್ಮಾ ಮುಹಮ್ಮದ್ ಮಲಿಕ್ ಅವರು ಸಿಬಿ ಜಾರ್ಜ್ ಬದಲಿಗೆ ಜಪಾನಿಗೆ ಭಾರತದ ರಾಯಭಾರಿಯಾಗಿ ನೇಮಕಗೊಳ್ಳುವ ಸಾಧ್ಯತೆಯಿದೆ. ಅವರ ನೇಮಕಾತಿಯು ದೃಢಪಟ್ಟರೆ ಅವರು ದೀಪಾ ಗೋಪಾಲನ್ ವಾದ್ವಾರ ಬಳಿಕ ಜಪಾನಿಗೆ ಭಾರತದ ಎರಡನೇ ಮಹಿಳಾ ರಾಯಭಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ ಎಂದು newindianexpress.com ವರದಿ ಮಾಡಿದೆ.
ತನ್ನ ವೃತ್ತಿಜೀವನದಲ್ಲಿ ಫ್ರಾನ್ಸ್, ನೇಪಾಳ, ಶ್ರೀಲಂಕಾ, ಥೈಲಂಡ್, ಟ್ಯುನಿಷಿಯಾ, ಬ್ರುನೈನಲ್ಲಿ ಸೇವೆ ಸಲ್ಲಿಸಿರುವ ಮಲಿಕ್ ಪ್ರಸ್ತುತ ಪೋಲಂಡ್‌ನಲ್ಲಿ ಭಾರತೀಯ ರಾಯಭಾರಿಯಾಗಿದ್ದಾರೆ.