ಲೇಖಕಿ, ರಾಜಕೀಯದ ಮೂಲಕ ಸಮಾಜ ಸೇವೆ, ಕನ್ನಡ ಹೋರಾಟಗಾರ್ತಿ, ಸಂಘಟಕಿ ಆಯಿಷಾ ಪೆರ್ಲ ರವರಿಗೆ ಕನ್ನಡ ಭವನದ ಪ್ರತಿಷ್ಠಿತ “ನಾಡೋಜ ಡಾ. ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ 2026 ಕ್ಕೆ ಆಯ್ಕೆ
ಕಾಸರಗೋಡು ಜಿಲ್ಲೆಯ ಜನ ಮೆಚ್ಚಿದ ಕನ್ನಡ ಮುಂದಾಳು, ವಾಗ್ಮಿ, ಕನ್ನಡ ಹೋರಾಟಗಾರ್ತಿ, ಸಮಾಜ ಸೇವಕಿ ಆಯಿಷಾ ಪೆರ್ಲ ಇವರೀಗೆ ಕಾಸರಗೋಡು ಕನ್ನಡ ಭವನದ ರಜತ ಸಂಭ್ರಮ 18-01-2026 ರಂದು ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಸಂಕೀರ್ಣದ “ಶ್ರೀ ಕೃಷ್ಣ ದೇವರಾಯ “ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ “ನಾಡೋಜ ಡಾ. ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ 2026 ನೀಡಿ ಗೌರವಿಸಲಾಗುವುದು ಎಂದು ಕನ್ನಡ ಭವನ ಗ್ರಂಥಾಲಯ ಹಾಗೂ ಸಹ ಸಂಸ್ಥೆಗಳ ರೂವಾರಿ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

