ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ನಾಗರಾಜ ನಾಗರಾಣಿಯರ ಸನ್ನಿಧಾನವಾದ ನಾಗಾಲಯದಲ್ಲಿ ನಾಗರ ಪಂಚಮಿ ಆಚರಣೆ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರಿತು..
ಆ ಪ್ರಯುಕ್ತ ಕ್ಷೇತ್ರದಲ್ಲಿ ನಾಗ ತನು ತಂಬಿಲ ಸೇವೆ ಪಂಚಾಮೃತ ಅಭಿಷೇಕದಿಗಳು, ಪ್ರಸನ್ನ ಪೂಜೆ ಮಹಾ ಅನ್ನಸಂತರ್ಪಣೆ ನೆರವೇರಿತು…
ಕಾರಣಿಕ ಮೆರೆವ ವಲ್ಲಿ ದೇವಯಾನಿ ಸಹಿತವಾಗಿ ಷಟ್ಶಿರಾ ಸುಬ್ರಹ್ಮಣ್ಯ ಸ್ವಾಮಿಯ ಸನ್ನಿಧಾನವನ್ನು ಹೊಂದಿರುವ ಶ್ರೀ ಕ್ಷೇತ್ರದ ನಾಗಾಲಯದಲ್ಲಿ
ಪ್ರಾತಃಕಾಲದಿo ದಲೇ ಊರ ಹಾಗು ಪರಊರ ಭಕ್ತರುಗಳು ನಾಗತನು ತಂಬಿಲ ಸೇವೆ ಹಾಗೂ ಪಂಚಾಮೃತ ಸೇವೆಗಾಗಿ ಕಿಕ್ಕಿರಿದು ತುಂಬಿದ್ದರು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿದ್ದಾರೆ