ಮುನಿಯಾಲು : ಪ್ರತಿಭಾವಂತ ಯುವ ಕಲಾವಿದ ಮುನಿಯಾಲಿನ ನಾಗರಾಜ್ ಕಾಡುಹೊಳೆ ಅವರಿಗೆ ಉಡುಪಿ ಯಕ್ಷಗಾನ ಕಲಾರಂಗದಲ್ಲಿ ಡಿಸೆಂಬರ್ ೧ ರಂದು ಉಡುಪಿ ಜಿಲ್ಲಾ ನಾಟಕ ಕಲಾವಿದರ ಒಕ್ಕೂಟ ( ರಿ ) ಅರ್ಪಿಸಿದ ಕೋಸ್ಟಲ್ ಕಾಮಿಡಿ ಸ್ಟಾರ್ ತುಳು ಸ್ಟ್ಯಾಂಡ್ ಅಫ್ ಕಾಮಿಡಿ ಸ್ಪರ್ಧೆಯಲ್ಲಿ ೨ನೇ ರನ್ನರ್ ಆಪ್ ಪ್ರಶಸ್ತಿಯು ದೊರೆತಿದೆ. ಬದುಕಿನ ನಾಳೆಗಾಗಿ ಕಠಿಣ ಶ್ರಮವಹಿಸುವ ಕಾಯಕಜೀವಿ ನಾಗರಾಜ್ ಕಾಡುಹೊಳೆ ಎಳವೆಯಿಂದಲೇ ಪ್ರತಿಭಾವಂತ. ಕಲಾ ಕ್ಷೇತ್ರದತ್ತ ಆಕರ್ಷಿತರಾದ ಕಾರ್ಕಳ ತಾಲೂಕಿನ ಅಜೆಕಾರು ಸಮೀಪದ ನಾಗರಾಜ್ ಕಾಡುಹೊಳೆ ಹಾಸ್ಯಮಯ ಸಾಮಾಜಿಕ ನಾಟಕ ” ಕಾಲ ಬದಲಾತುಂಡು ” ನ್ನು ರಚನೆ ಮಾಡಿ ನಿರ್ದೇಶಿಸಿ ಅಭಿನಯಿಸಿ ನಾಟಕ ಕಲಾರಂಗಕ್ಕೆ ಪ್ರಥಮ ಕಾಣಿಕೆ ನೀಡಿದ್ದಾರೆ. ಮುನಿಯಾಲಿನಲ್ಲಿ ಪ್ರಥಮ ಪ್ರದರ್ಶನ ಕೂಡ ಕಂಡಿದೆ. ದೈಜಿವಲ್ಡ್ ಮಾಧ್ಯಮ ಸಂಸ್ಥೆಯ ಕಾಮಿಡಿ ರಾಜರಾಣಿ ಸ್ಪರ್ಧೆಯಲ್ಲಿ ಭಾಗವಹಿಸಿ ಮನ್ನಣೆಗಳಿಸಿದ್ದಾರೆ. ಪ್ರಸ್ತುತ ಅಭಿಷೇಕ್ ಬಜಗೋಳಿ ಸಾರಥ್ಯದ ಬೊಳ್ಳಿ ಕಲಾವಿದೆರ್ ಬಜಗೋಳಿ ತಂಡದಲ್ಲಿ ಅಭಿನಯಿಸುತ್ತಿದ್ದಾರೆ.

