
ಉತ್ತರಾಕಂಡ್ ನಲ್ಲಿ ನಡೆದ ಎಶಿಯನ್ ಪವರ್ ಲಿಫ್ಟಿಂಗ್ನಲ್ಲಿ ಭಾರತವನ್ನು ಪ್ರತಿನಿಧಿಸುವುದರೊಂದಿಗೆ ವಿಜಯಿಯಾಗಿ ನ್ಯೂ ಎಶಿಯನ್ ರೆಕಾರ್ಡ್ ಮಾಡಿರುವ ಕುಮಾರಿ ನಾಗಶ್ರೀ ಗಣೇಶ್ ಉಪ್ಪಿನ ಕುದ್ರು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯಾವರಾಗಿದ್ದಾರೆ. ಇವರ ವಿಶ್ವ ಮಟ್ಟದ ಪ್ರತಿಭಾ ಪ್ರದರ್ಶನಕ್ಕೆ ಕಾಸರಗೋಡು ಕನ್ನಡ ಭವನವು, ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಉದ್ಘಾಟನಾ ಕಾರ್ಯಕ್ರಮ, ಮಂಗಳೂರಿನ ಮಹಿಳಾ ಒಕ್ಕೂಟ ಸಭಾ ಭವನದಲ್ಲಿ 25.5.2025.ರಂದು ಡಾ. ವಾಮನ್ ರಾವ್ ಬೇಕಲ್ ಅದ್ಯಕ್ಷತೆಯಲ್ಲಿ ನಡೆದಾಗ ಕುಮಾರಿ ನಾಗಶ್ರೀ ಗಣೇಶ್ ಉಪ್ಪಿನಕುದ್ರು ಇವರೀಗೆ ಕನ್ನಡ ಭವನದ ಯುವ ಪ್ರತಿಭಾ ಪ್ರಶಸ್ತಿ ಯಾದ “ಭರವಸೆಯ ಬೆಳಕು Light of Hopes Achievement Award. 2025.ವಿಶೇಷ ಸನ್ಮಾನ ದೊಂದಿಗೆ ನೀಡಲಾಯಿತು. ಕಾರ್ಯಕ್ರಮ ದಲ್ಲಿ ಕರ್ನಾಟಕ ಸರಕಾರದ ವಿಧಾನ ಪರಿಷತ್ ಮಾಜಿ ಸಚೇತಕರಾದ ಕ್ಯಾ. ಗಣೇಶ್ ಕಾರ್ಣಿಕ್, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ, ನಾಡೋಜ ಡಾ. ಕೃಷ್ಣ ಪ್ರಸಾದ್ ನೇತ್ರಾಲಯ, ಸಾಹಿತಿ ಡಾ. ಶಿವಾನಂದ ಬೇಕಲ್, ಲಯನ್ಸ್ ಇಂಟರ್ನ್ಯಾಷನಲ್ ಡಿಸ್ಟ್ರಿಕ್ ಗವರ್ನರ್ ಜೆ ಕೆ ರಾವ್ ಮಂಗಳೂರು, ಲಯನ್ಸ್ ಮ್ಯಾಂಗಲೋರ್ ಮಾಜಿ ಅಧ್ಯಕ್ಷರಾದ ಯೋಗೀಶ್ ಕುಮಾರ್ ಜೆಪ್ಪು, ಕನ್ನಡ ಭವನ ಪ್ರಕಾಶನ ರೂವಾರಿ ಸಂದ್ಯಾ ರಾಣಿ, ಡಾ. ರವೀಂದ್ರ ಜೆಪ್ಪು, ಡಾ. ಉದಯಕುಮಾರ್ ಮಂಗಳೂರು, ಕನ್ನಡ ಭವನ ದ. ಕ. ಜಿಲ್ಲಾಧ್ಯಕ್ಷೆ ರೇಖಾ ಸುದೇಶ್ ರಾವ್, ಕಾರ್ಯಧ್ಯಕ್ಷ ಉಮೇಶ್ ರಾವ್ ಕುಂಬ್ಳೆ, ಕನ್ನಡ ಭವನ ಗೌರವ ಅಧ್ಯಕ್ಷರಾದ ಪತ್ರಕರ್ತ ಪ್ರದೀಪ್ ಬೇಕಲ್ ಮುಂತಾದವರಿದ್ದರು