ಬಂಟ್ವಾಳ: ಧರ್ಮಸಭೆ ಮೂರು ವರ್ಷಗಳಿಗೊಮ್ಮೆ ಜರಗುವ ಜುಮಾದಿ ಬಂಟ ಅಣ್ಣಪ್ಪ ಪಂಜುರ್ಲಿ ಕಲ್ಲುರ್ಟಿ ದೈವದ ನೇಮೋತ್ಸವ ಅಂಗವಾಗಿ ಜರಗಿದ ಧರ್ಮಸಭೆಯನ್ನು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಜ್ಯೋತಿ ಬೆಳಗಿ ತುಳುನಾಡಿನ ಕಟ್ಟು ಪ್ರಕಾರ ಕುಟುಂಬದ ದೈವ ದೇವರನ್ನು ಆರಾಧಿಸಿಕೊಂಡು ಬಂದರೆ ಆ ಕುಟುಂಬ ಏಳಿಗೆ ಆಗುತ್ತದೆ ಎಂಬುದಾಗಿ ಶುಭ ಹಾರೈಸಿದರು.
ಒಡಿಯೋರು ಶ್ರೀ ಗುರುದೇವಾನಂದ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ತುಳುನಾಡಿನ ಮಣ್ಣಿಗೆ ಒಂದು ಕಲೆ ಇದ್ದು ಅದನ್ನು ಗೌರವಿಸಿ ನಮ್ಮ ಸಂಸ್ಕೃತಿಯನ್ನು ಉಳಿಸುವ ಕೆಲಸ ನಾವು ಮಾಡಬೇಕಾಗಿದೆ ಎಂದರು ಮಂಗಳೂರು ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳ್ಳಿಪಾಡಿಗುತ್ತು ಮುಂಬೈ ಉದ್ಯಮ್ ಸಂತೋಷ್ ಕುಮಾರ್ ಜಿ. ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವಿಟ್ಲ ಮಾಜಿ ಶಾಸಕ ಕೆ ಪದ್ಮನಾಭ ಕೊಟ್ಟಾರಿ, ಪಣೋಲಿ ಬೈಲು ಕ್ಷೇತ್ರದ ಆಡಳಿತ ಅಧಿಕಾರಿ ದಿವಾಕರ ಸ ಜೀಪ ಗುತ್ತು ಗಡಿಪ್ರದಾನ ರಾಧ ಮುತ್ತಣ್ಣ ಶೆಟ್ಟಿಯಾನೆ ಕಾಳಪ್ಪ ಶೆಟ್ಟಿ ಬಿಜಂದಾರು ಗುತ್ತು ಶಿವರಾಮ ಬಂಡಾರಿ ಮಾಡದಾರು ಗುತ್ತು ಗಡಿಪ್ರದಾನ ರಾಧ ಶಶಿಧರ ರೈ ಯಾನೆ ನಾರಣ ಆಳ್ವ, ರೋಹಿತ್ ಶೆಟ್ಟಿ ನಗ್ರಿ ಗುತ್ತು, ದೇವಿ ಪ್ರಸಾದ್ ಪೂoಜ, ದಾಮೋದರ ಬಿ ಎಂ.ಕೃಷ್ಣಶೆಟ್ಟಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನಗ್ರಿ ಗುತ್ತು ವಿವೇಕ್ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.