ಶ್ರೀ ಮಹಾಲಿಂಗೇಶ್ವರ ಎಜ್ಯುಕೇಷನಲ್ ಟ್ರಸ್ಟ್ (ರಿ ) ನಕ್ರೆ ಇದರ ಸಹಯೋಗದಲ್ಲಿ ಶ್ರೀ ಮಹಾಲಿಂಗೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ನಕ್ರೆ, ಚೇತನ್ ಪ್ರೆಂಡ್ಸ್ ಕ್ಲಬ್ (ರಿ) ನಕ್ರೆ ಇದರ ಸಹಯೋಗದಲ್ಲಿ ಚಿಣ್ಣರ ಕಲರವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀಯುತ ಕಮಲಾಕ್ಷ ಕಾಮತ್ ಅಧ್ಯಕ್ಷತೆಯನ್ನು ವಹಿಸಿದ್ದರು, ಶ್ರೀಯುತ ಅವಿನಾಶ್ ಶೆಟ್ಟಿ ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ (ರಿ ) ಕಾರ್ಕಳ, ಶ್ರೀ ವಿಜಯರಾಜ್ ಶೆಟ್ಟಿ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್, ಅಂತೋನಿ ಡಿಸೋಜ ಗ್ರಾಂ ಪಂಚಾಯತ್ ಸದಸ್ಯರು ಕುಕ್ಕುಂದೂರು, ಕ್ಯಾತರೀನಾ ಫೆರ್ನಾಂಡಿಸ್ ಗ್ರಾಂ. ಪಂಚಾಯತ್ ಸದಸ್ಯರು ಕುಕ್ಕುಂದೂರು, ಸುನೀತಾ ಎಸ್. ಡಿ. ಎಂ. ಸಿ ಅಧ್ಯಕ್ಷರು, ಸಂತೋಷ್ ಕುಮಾರ್ ಶೆಟ್ಟಿ ಶಿಕ್ಷಕರು ಪ್ರೌಢ ಶಾಲೆ ನಕ್ರೆ, ರಮೇಶ್ ನಾಯಕ್ ಶಿಕ್ಷಕರು ದುರ್ಗಾದೇವಿ ಅನುದಾನಿತ ಶಾಲೆ ಕುಕ್ಕುಂದೂರು, ಕುಮುದಾ ಆರೋಗ್ಯ ಸಹಾಯಕಿ, ಅರುಣ್ ಕುಮಾರ್ ಶೆಟ್ಟಿ ಗುರು ವೈನ್ಸ್ ನಕ್ರೆ, ಎನ್ ಪ್ರಕಾಶ್ ಹೆಗ್ಡೆ ಸಂಚಾಲಕರು ಶ್ರೀ ಮಹಾಲಿಂಗೇಶ್ವರ ಎಜ್ಯುಕೇಷನಲ್ ಟ್ರಸ್ಟ್, ಸಂಪತ್ ಸುವರ್ಣ ಚೇತನ್ ಪ್ರೆಂಡ್ಸ್ ಕ್ಲಬ್ ನಕ್ರೆ ಪ್ರೀತಿ ವಾತ್ಸಲ್ಯ ಮುಖ್ಯಶಿಕ್ಷಕಿ ಮಹಾಲಿಂಗೇಶ್ವರ ಅ. ಹಿ. ಪ್ರಾ. ಶಾಲೆ ನಕ್ರೆ ಉಪಸ್ಥಿತರಿದ್ದರು. ಶಂಕರ್ ಪೂಜಾರಿ ಸ್ವಾಗತಿಸಿ,ವರ್ಷಿಣಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಾ ಮಕ್ಕಳ “ವಿಕಟಕವಿ ” ಮತ್ತು “ಆತ್ಮಾ ರ್ಪಣೆ ” ಕಿರು ನಾಟಕವನ್ನು ಪ್ರದರ್ಶಿಸಿದರು, ಅಂಗನವಾಡಿ ಮತ್ತು ಮಹಾಲಿಂಗೇಶ್ವರ ಶಾಲೆಯ ಮಕ್ಕಳು ಸಮೂಹ ನೃತ್ಯಗಳಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.

