ಇರಾನ್-ಅಮೆರಿಕ-ಇಸ್ರೇಲ್ ಯುದ್ಧದಿಂದ ಉಂಟಾದ ಇಂಧನ ಬಿಕ್ಕಟ್ಟು ಭಾರತದಲ್ಲಿ ತೀವ್ರ ಆತಂಕವನ್ನು ಉಂಟುಮಾಡಿತ್ತು. ವಿಶೇಷವಾಗಿ LPG (ಎಲ್‌ಪಿಜಿ) ಅನಿಲದ ಕೊರತೆಯಿಂದ ಜನರು ಆತಂಕಗೊಂಡಿದ್ದರು. ಆದರೆ ಈ ಬಿಕ್ಕಟ್ಟು ಈಗ ಕೊನೆಗೊಳ್ಳುವ ಹಂತಕ್ಕೆ ತಲಿಪಿದೆ.
ಕತಾರ್‌ನಿಂದ LPG ಮತ್ತು ತೈಲವನ್ನು ಸಾಗಿಸುತ್ತಿದ್ದ ಎರಡು ಭಾರತೀಯ ಹಡಗುಗಳು ಈಗ ಭಾರತದ ಕರಾವಳಿಯನ್ನು ತಲುಪಿವೆ. ಭಾರತೀಯ ಹಡಗುಗಳಾದ ‘ನಂದಾ ದೇವಿ’ ಮತ್ತು ‘ಜಗ್ ಲಡ್ಕಿ’ ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿ ಭಾರತದ ಪಶ್ಚಿಮ ಕರಾವಳಿಯನ್ನು ತಲುಪಿವೆ. ಇದು ದೇಶದಲ್ಲಿ ಇಂಧನ ಪೂರೈಕೆಗೆ ದೊಡ್ಡ ನಿರಾಳತೆಯನ್ನು ನೀಡಿದೆ.
46,000 ಟನ್ ಎಲ್‌ಪಿಜಿ ಹೊತ್ತ ಭಾರತೀಯ ಹಡಗು ನಂದಾ ದೇವಿ ಕಾಂಡ್ಲಾ ಬಂದರಿಗೆ ಆಗಮಿಸಿದೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದು ತೈಲ ಟ್ಯಾಂಕರ್ ಜಗ್ ಲಡ್ಕಿ ಕೂಡ 81,000 ಟನ್ ಕಚ್ಚಾ ತೈಲವನ್ನು ಹೊತ್ತು ಗುಜರಾತ್‌ನ ಮುದ್ರಾ ಬಂದರಿಗೆ ಶೀಘ್ರದಲ್ಲೇ ಆಗಮಿಸಲಿದೆ. ಒಂದು ದಿನ ಮೊದಲು, ‘ಶಿವಾಲಿಕ್’ ಹಡಗು ಸುಮಾರು 45,000-46,000 ಟನ್ ಎಲ್‌ಪಿಜಿ ಹೊತ್ತು ಮುಂದ್ರಾ ಬಂದರಿಗೆ ಆಗಮಿಸಿತು. ಹಡಗಿನ ಸುರಕ್ಷಿತ ಆಗಮನವು ಸೂಕ್ಷ್ಮ ಸಮುದ್ರ ಮಾರ್ಗದ ಮೂಲಕ ಇಂಧನ ಸಾಗಣೆಯ ಸುತ್ತಲಿನ ಕಳವಳಗಳಿಗೆ ಪರಿಹಾರವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ನಂದಾ ದೇವಿ : 46,000 ಟನ್ LPG ಹೊತ್ತು ಕತಾರ್‌ನ ರಾಸ್ ಲಫಾನ್ ಬಂದರಿನಿಂದ ಹೊರಟಿತ್ತು. ಮಂಗಳವಾರ ಗುಜರಾತ್‌ನ ಕಾಂಡ್ಲಾ ಬಂದರನ್ನು ತಲುಪಿದೆ.
ಜಗ್ ಲಡ್ಕಿ : 81,000 ಟನ್ ಕಚ್ಚಾ ತೈಲ ಹೊತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಬಂದು ಗುಜರಾತ್‌ನ ಮುಂದ್ರಾ ಬಂದರನ್ನು ತಲುಪಲಿದೆ.
ಒಂದು ದಿನ ಮುಂಚೆಯೇ ‘ಶಿವಾಲಿಕ್’ ಹಡಗು ಸುಮಾರು 45,000-46,000 ಟನ್ LPG ಹೊತ್ತು ಮುಂದ್ರಾ ಬಂದರನ್ನು ತಲುಪಿತ್ತು. ಈ ಮೂರು ಹಡಗುಗಳು ಒಟ್ಟು ಸುಮಾರು 1,72,000 ಟನ್ ಇಂಧನವನ್ನು ಭಾರತಕ್ಕೆ ತಂದಿವೆ. ಎಲ್ಲಾ ಹಡಗುಗಳು ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾಗೆ ಸೇರಿವೆ.
ಹಾರ್ಮುಜ್ ಜಲಸಂಧಿಯು ವಿಶ್ವದ ಅತಿ ಮುಖ್ಯ ಸಮುದ್ರ ಮಾರ್ಗವಾಗಿದೆ. ಜಗತ್ತಿನ ಒಟ್ಟು ತೈಲ ಮತ್ತು ಅನಿಲ ಸಾಗಣೆಯ ಸುಮಾರು 20% ಇಲ್ಲಿಂದಲೇ ನಡೆಯುತ್ತದೆ. ಯುದ್ಧದಿಂದಾಗಿ ಈ ಮಾರ್ಗದಲ್ಲಿ ತೊಂದರೆ ಉಂಟಾಗಿ, ಹಡಗುಗಳು ಸಿಲುಕಿಕೊಂಡಿದ್ದವು. ಭಾರತ ಮತ್ತು ಇರಾನ್ ನಡುವಿನ ಮಾತುಕತೆಯ ನಂತರ ಈ ಎರಡು ಹಡಗುಗಳು ಸುರಕ್ಷಿತವಾಗಿ ಹಾರ್ಮುಜ್ ಜಲಸಂಧಿಯನ್ನು ದಾಟಿ ಭಾರತಕ್ಕೆ ಮರಳಿವೆ.
ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ, ಎರಡು ಭಾರತೀಯ LPG ಹಡಗುಗಳು (ಶಿವಾಲಿಕ್ ಮತ್ತು ನಂದಾ ದೇವಿ) ಒಟ್ಟು 92,700 ಮೆಟ್ರಿಕ್ ಟನ್ LPG ಅನ್ನು ಭಾರತಕ್ಕೆ ಸಾಗಿಸುತ್ತಿವೆ. ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ. ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ ಎಂದಿ ತಿಳಿಸಿದ್ದಾರೆ. ಪ್ರಸ್ತುತ ಸ್ಥಿತಿಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿ ಈಗ 22 ಭಾರತೀಯ ಹಡಗುಗಳು ಇದ್ದು, ಅವುಗಳಲ್ಲಿ ಒಟ್ಟು 611 ನಾವಿಕರು ಇದ್ದಾರೆ. ಸರ್ಕಾರ ಎಲ್ಲಾ ಹಡಗುಗಳ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಬಂದರುಗಳಲ್ಲಿ ಲಂಗರು ಹಾಕುವಿಕೆ, ಸರಕು ನಿರ್ವಹಣೆಗೆ ರಿಯಾಯಿತಿ ನೀಡುವಂತೆ ಸೂಚನೆ ನೀಡಲಾಗಿದೆ.
ಈ ಹಡಗುಗಳ ಸುರಕ್ಷಿತ ಆಗಮನದಿಂದ ಭಾರತದಲ್ಲಿ LPG ಮತ್ತು ತೈಲದ ಕೊರತೆಯ ಆತಂಕ ಗಣನೀಯವಾಗಿ ಕಡಿಮೆಯಾಗಿದೆ. ಜನರಲ್ಲಿ ಉಂಟಾಗಿದ್ದ ಆತಂಕಕ್ಕೆ ಸ್ವಲ್ಪ ನಿರಾಳತೆ ಬಂದಿದೆ. ಆದರೆ ಯುದ್ಧ ಇನ್ನೂ ಮುಂದುವರಿದಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಇನ್ನೂ ಇದೆ. ಭಾರತ ಸರ್ಕಾರ ಎಲ್ಲಾ ಭಾರತೀಯ ಹಡಗುಗಳು ಮತ್ತು ನಾವಿಕರ ಸುರಕ್ಷತೆಗೆ ತುಂಬಾ ಎಚ್ಚರಿಕೆ ವಹಿಸುತ್ತಿದೆ. ಈ ಬೆಳವಣಿಗೆಯು ಯುದ್ಧದ ಸಂದರ್ಭದಲ್ಲೂ ಭಾರತ ತನ್ನ ಇಂಧನ ಪೂರೈಕೆಯನ್ನು ಸುರಕ್ಷಿತವಾಗಿ ನಿರ್ವಹಿಸುತ್ತಿದೆ ಎಂಬುದನ್ನು ತೋರಿಸುತ್ತಿದೆ.

