ಮಂಗಳೂರಿನ ನಂತೂರು ಕ್ರಾಸ್ ನಲ್ಲಿ ಟ್ರಾಫಿಕ್ ಅವ್ಯವಸ್ಥೆ ಇತ್ತೀಚೆಗೆ ಮರಣ ಹೊಂದಿದ ಕು| ದೀಫ್ತಿ ಅವರ ಮರಣದ ನಂತರ ಉಂಟಾದ ವಿದ್ಯಾಮಾನಗಳನ್ನು ಅರಿತು ವಿಧಾನ ಪರಿಷತ್ ಶಾಸಕ ರಾದ
ಐವನ್ ಡಿʼಸೋಜಾ ಸ್ಥಳಕ್ಕೆ ಭೇಟಿ
ಕು| ದೀಪ್ತಿಯವರು ಮರಣ ಹೊಂದಲು ಕಾರಣವಾದ ಸಂದರ್ಭ ತದನಂತರ ಉಂಟಾದ ಬೆಳವಣಿಗೆಗಳು ಮತ್ತು ನಗರದಲ್ಲಿ ಟ್ರಾಫಿಕ್ ನಲ್ಲಿ ಉಂಟಾದ ತೊಂದರೆಗಳನ್ನು ಗಮನಿಸಿ, ನಂತೂರು ಕ್ರಾಸ್ನಲ್ಲಿ ಉಂಟಾಗಿರುವ ಅವ್ಯವಸ್ಥೆಯ ಬಗ್ಗೆ ಪರಿಶೀಲಿಸಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಶಾಸಕ ಐವನ್ ಡಿʼಸೋಜಾರವರು ಪ್ರದೇಶಕ್ಕೆ ಭೇಟಿ ನೀಡಿ ಪೋಲಿಸ್ ಅಧಿಕಾರಿಗಳು ನಗರ ಪಾಲಿಕೆ ಅಧಿಕಾರಿಗಳೊಂದಿಗೆ ಸದ್ರಿ ಪ್ರದೇಶಕ್ಕೆ ಭೇಟಿ ನೀಡಿ ತರ‍್ತಾಗಿ ತೆಗೆದುಕೊಳ್ಳುವ ಕ್ರಮದ ಬಗ್ಗೆ ಚರ್ಚಿಸಿದರು.
ಫರ್ನಾಲ್ ಅಪರ್ಟ್ಮೆಟ್ನ ಮುಂದೆ ಇರುವ ಜಾಗದಲ್ಲಿ ಕಂಟೈನಿಂಗ್ ಹಾಲ್ ಅರ್ಧದಲ್ಲಿಯೇ ನಿಲ್ಲಿಸಲಾಗಿದ್ದು, ಇದನ್ನು ಎತ್ತರಕ್ಕೆ ಏರಿಸುವ ಮೂಲಕ ಅಲ್ಲಿ ಸುಮಾರು ಅನೇಕ ವಾಹನಗಳು ಪರ‍್ಕ್ ಮಾಡುವಂತಹದ್ದು ಮತ್ತು ಅಲ್ಲಿ ಬಸ್ಸು-ವೇಗಳನ್ನು ಮಾಡುವುದರ ಮೂಲಕ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ರಸ್ತೆಗಳಲ್ಲಿ ರಿಪ್ಲೆಕ್ಟ ರ್ ಗಳನ್ನು ಹಾಕದೇ ಅನೇಕ ಸಮಯದಿಂದ ಈ ಒಂದು ಸಮಸ್ಯೆಯಾಗಿದ್ದು ರಿಪ್ಲೆಕ್ಟ ರ್ ಕೂಡಲೇ ಹಾಕಬೇಕೆಂದು, ರೋಡ್ ಪೈಂಟಿಂಗ್ ಹಾಕಬೇಕು, ರೋಡ್ ಸಿಗ್ನಲ್ಗಳನ್ನು ಹಾಕಬೇಕು ಎಂದು ಹೇಳುವುದರ ಬಗ್ಗೆ ಚರ್ಚಿಸಿದರು.
ನಾಳೆ 11:00 ಗಂಟೆಗೆ ಶಾಸಕರ ಕಛೇರಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಭೆಯನ್ನು ನಡೆಸಲು ತಿರ‍್ಮಾನಿಸಲಾಯಿತು. ಅದೇ ರೀತಿ ರಸ್ತೆಯ ಬದಿಯಲ್ಲಿ ಇರುವಂತಹ ಜಲ್ಲಿಕಲ್ಲುಗಳು ಮಣ್ಣು ರಸ್ತೆಗೆ ಬಂದು ಅನೇಕ ದ್ವಿಚಕ್ರ ವಾಹನಗಳು ರಸ್ತೆಯ ಬದಿಯಿಂದ ತಿರುಗಿ ಹೋಗುವಾಗ ದ್ವಿಚಕ್ರ ವಾಹನಗಳಿಗೆ ಸಹಾಯವಾಗಲು ಇಕ್ಕೆಲಗಳಲ್ಲಿ ಮಣ್ಣು ಮತ್ತು ಕಲ್ಲುಗಳು ಇಲ್ಲದಂತೆ ಸ್ವಚ್ಛಗೊಳಿಸಿ ನೋಡಿಕೊಂಡರೆ ಅನೇಕ ವಾಹನಗಳ ದಟ್ಟಣೆ ಕಡಿಮೆಯಾಗುವುದು ಮತ್ತು ರಸ್ತೆಗೆ ವಾಹನದ ಉಪಯೋಗಕ್ಕೆ ರಸ್ತೆಯನ್ನು ಒದಗಿಸಿಕೊಡಬೇಕೆಂದು ಐವನ್ ಡಿʼಸೋಜಾರವರು ಸೂಚಿಸಿದರು.
ಈ ಸಂದರ್ಭದಲ್ಲಿ ಡಿಸಿಪಿ ಟ್ರಾಫಿಕ್ ಇನ್ಸ್ಪೆಕ್ಟರ್ ನಜಮಾ ಪಾರೂಕಿ ಇನ್ಸ್ಪೆಕ್ಟರ್ ಭಟ್ ರವರು, ನಗರಪಾಲಿಕೆಯ ಅಧಿಕಾರಿಗಳು, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಭಾಸ್ಕರ್ ಮೊಯಿಲಿ ಮಾಜಿ ಕಾರ್ಪೋರೇಟರ್ ಗಳಾದ ಪ್ರವೀಣ್ ಚಂದ್ರ ಅಳ್ವ, ಕೇಶವ ಮರೋಳಿ, ನವೀನ್ ಡಿʼಸೋಜಾ, ಅಶೋಕ್ ಡಿ.ಕೆ. ಸತೀಶ್ ಪೇಂಗಲ್, ಪಕ್ಷದ ನಾಯಕರುಗಳಾದ ಜೇಮ್ಸ್ ಪ್ರವೀಣ್, ಗೀರಿಶ್ ಶೆಟ್ಟಿ, ಅರುಣ್ ಕ್ರಾಸ್ತಾ, ಅನಿಲ್ ಕುದ್ಕೋರಿಗುಡ್ಡೆ, ದಿನೇಶ್ ಮೂಳೂರು, ಸ್ಟ್ಯಾನ್ಲಿ ಬಿರ‍್ನಕಟ್ಟೆ, ನೌಷದ್ ಬಿರ‍್ನಕಟ್ಟೆ, ಮುಂತಾದವರು ಜೊತೆಗಿದ್ದರು.

