ಉಡುಪಿ : ಜಿಲ್ಲೆಯ ದೇವಸ್ಥಾನಗಳು, ಮನೆಗಳಲ್ಲಿ ಸೋಮವಾರ ನರಕ ಚತುದರ್ಶಿ ಪ್ರಯುಕ್ತ ಪ್ರಾತಕಾಲದಲ್ಲಿ ಎಣ್ಣೆಶಾಸ್ತ್ರ ತೈಲಾಭ್ಯಂಗ ಸ್ನಾನ ನಡೆಯಿತು.
ಕೃಷ್ಣಮಠದ ಚಂದ್ರಶಾಲೆಯಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಪರ್ಯಾಯ ಮಠದ ಪಾರುಪತ್ಯಗಾರರು ಎಣ್ಣೆಶಾಸ್ತ್ರ ಮಾಡಿದರು. ನಂತರ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಗಳಿಗೆ ಹಿರಿಯ ಶ್ರೀಗಳು ತೈಲಾಭ್ಯಂಗ ನೆರವೇರಿಸಿದರು.

