ನಾರಾವಿ : ಭಾರತೀಯ ಜನತಾ ಪಾರ್ಟಿ ದ.ಕ ಜಿಲ್ಲೆ ಮತ್ತು ಬೆಳ್ತಂಗಡಿ ಮಂಡಲದ ವತಿಯಿಂದ ಆಗಸ್ಟ್ 24 ರಂದು ನಾರಾವಿ ಕಾಶಿಮಠ ಸಭಾಂಗಣದಲ್ಲಿ ನಾರಾವಿ ಮತ್ತು ಕುತ್ಲೂರು ಬಿಜೆಪಿ ಶಕ್ತಿಕೇಂದ್ರ ಅಭ್ಯಾಸವರ್ಗ ಕಾರ್ಯಕ್ರಮ ನಡೆಯಿತು.
ಬಿಜೆಪಿ ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಮಂಡಲದ ಉಪಾಧ್ಯಕ್ಷರಾದ ಮೋಹನ್ ಅಂಡಿಂಜೆ, ಹಿರಿಯ ಕಾರ್ಯಕರ್ತರಾದ ರತ್ನಾಕರ ಭಟ್,ಚೆಲುವಯ್ಯ ಪೂಜಾರಿ ಮತ್ತು ಕಾಂತಪ್ಪ ಮೂಲ್ಯರವರು ದೀಪ ಬೆಳಗಿಸಿ,ಭಾರತ ಮಾತೆಗೆ ಪುಷ್ಪಾರ್ಚನೆಗೈದು ಕಾರ್ಯಕ್ರಮ ಉದ್ಘಾಟಿಸಿದರು. ಸಂಘಟನಾ ಅವಧಿಯಲ್ಲಿ ದ.ಕ ಜಿಲ್ಲಾ ಉಪಾಧ್ಯಕ್ಷರಾದ ಜಯಂತ್ ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿ ಸೀತಾರಾಮ್ ಬೆಳಾಲ್ ಮತ್ತು ವೇಣೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಉಮೇಶ್ ನಡ್ತಿಕಲ್ಲು ಸಮಯೋಚಿತವಾಗಿ ಬೈಠಕ್ ನೀಡಿದರು.
ಅಭ್ಯಾಸವರ್ಗದ ಸಮಾರೋಪ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜರವರು ಭಾಗವಹಿಸಿ ಕಾರ್ಯಕರ್ತ ಬಂಧುಗಳಿಗೆ ರಾಷ್ಟ್ರೀಯತೆ,ಹಿಂದುತ್ವ ಮತ್ತು ಪಕ್ಷ ಸಂಘಟನೆಯ ಬಗ್ಗೆ ವಿಶೇಷ ಮಾರ್ಗದರ್ಶನ ನೀಡಿದರು. ಈ ಸಂದರ್ಭ ವೇದಿಕೆಯಲ್ಲಿ ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜವರ್ಮ ಜೈನ್, ಉಪಾಧ್ಯಕ್ಷೆ ಸುಮಿತ್ರಾ ಮತ್ತು ಕೃಷಿ ಪತ್ತಿನ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷರಾದ ಸುಧಾಕರ ಭಂಡಾರಿ ಉಪಸ್ಥಿತರಿದ್ದರು.
ಅಭ್ಯಾಸವರ್ಗದಲ್ಲಿ ನಾರಾವಿ ಮತ್ತು ಕುತ್ಲೂರು ಶಕ್ತಿಕೇಂದ್ರ ಪ್ರಮುಖರಾದ ಪ್ರಕಾಶ್ ಆಚಾರ್ಯ, ರತ್ನಾಕರ ಬಡೆಕ್ಕಿಲ,ಮಂಡಲ ಸಾಮಾಜಿಕ ಜಾಲತಾಣ ಸಹ ಸಂಚಾಲಕ ರಂಜಿತ್ ಮರೋಡಿ,ನಾರಾವಿ ಮತ್ತು ಕುತ್ಲೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕರುಗಳು,ನಾರಾವಿ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರುಗಳು,ನಾರಾವಿ ಗ್ರಾಮ ಪಂಚಾಯತ್ ಸದಸ್ಯರುಗಳು,ಮಂಡಲ ಮತ್ತು ಮೋರ್ಚಾದ ಪದಾಧಿಕಾರಿಗಳು,ಬೂತ್ ಸಮಿತಿಯ ಪದಾಧಿಕಾರಿಗಳು,ಪ್ರಮುಖರು,ಹಿರಿಯರು ಮತ್ತು ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.ಮುರಾರಿ ರಾವ್ ಹೊಳೆಹೊದ್ದು ಬಿಜೆಪಿ ಗೀತೆ ಹಾಡಿದರು. ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಉದಯ್ ಹೆಗ್ಡೆ ಸ್ವಾಗತಿಸಿದರು. ಬಿಜೆಪಿ ಮಹಾಶಕ್ತಿ ಕೇಂದ್ರ ನಾರಾವಿಯ ಪ್ರಧಾನ ಕಾರ್ಯದರ್ಶಿ ಅಭಿಜಿತ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

