ನಾರಾಯಣ ಗುರುಗಳು ಸರ್ವರನ್ನೂ ಒಳಗೊಂಡ ವಿಶ್ವಮಾನವ ಧರ್ಮವನ್ನು ಸ್ಥಾಪಿಸಿದರು : ರಾಧಾಕೃಷ್ಣ ಕುಲಾಲ್ ಬಂಟ್ವಾಳ

0
108

ಬಂಟ್ವಾಳ: ನಾರಾಯಣ ಗುರುಗಳು ಸರ್ವರನ್ನೂ ಒಳಗೊಂಡ ವಿಶ್ವಮಾನವ ಧರ್ಮವನ್ನು ಸ್ಥಾಪಿಸಿದರು. ಧರ್ಮಕೇಂದ್ರಗಳು ಅಶಕ್ತರ ಬದುಕಿಗೆ ದಾರಿದೀಪವಾಗಬೇಕು ಎಂಬ ನಾರಾಯಣಗುರುಗಳ ಸಂದೇಶ ಪ್ರಸ್ತುತ ಯುವ ಸಮಾಜದ ವ್ಯವಸ್ಥೆಯಲ್ಲಿ ಮೈದಳೆಯುವುದನ್ನು ನಿರೀಕ್ಷಿಸಬೇಕಾಗಿದೆ. ಯುವವಾಹಿನಿ ಸಂಘಟನೆಯ ಯಶಸ್ವಿ ಕಾರ್ಯಕ್ರಮ ಗುರುತತ್ವವಾಹಿನಿ ಸಾಮಾಜಿಕ ಸುಧಾರಣೆಯ ಕೈಂಕರ್ಯಕ್ಕೆ ಮುನ್ನುಡಿ ಬರೆದಿದೆ
ಎಂದು ಬಂಟ್ವಾಳ ಲಯನ್ಸ್ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಕುಲಾಲ್ ಬಂಟ್ವಾಳ ತಿಳಿಸಿದರು.

ಅವರು ಗುರುವಾರ ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಬಂಟ್ವಾಳ ಕಿನ್ನಿಬೆಟ್ಟು ತುಳಿಸಿ ಸುರೇಂದ್ರ ಪೂಜಾರಿಯವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಭಜನಾ ಸಂಕೀರ್ತನೆ 52 ರಲ್ಲಿ ಗುರುಸಂದೇಶ ನೀಡಿದರು.

ಈ ಸಂದರ್ಭದಲ್ಲಿ ವಸಂತ ಪೂಜಾರಿ ಮಂಗಳೂರು, ಬಂಟ್ವಾಳ ಜೇಸೀ ಮಾಜಿ ಅಧ್ಯಕ್ಷ ಲೋಕೇಶ್ ಸುವರ್ಣ ಕಿನ್ನಿಬೆಟ್ಟು ಯುವವಾಹಿನಿ ಬಂಟ್ವಾಳ ಘಟಕದ ಕಾರ್ಯದರ್ಶಿ ಮಧುಸೂದನ್ ಮದ್ವ, ಕೋಶಾಧಿಕಾರಿ ನವೀನ್ ಪೂಜಾರಿ, ನಿರ್ದೇಶಕರಾದ ಚಿನ್ನಾ ಕಲ್ಲಡ್ಕ, ಪ್ರಜಿತ್ ಅಮೀನ್ ಏರಮಲೆ, ಮಹೇಶ್ ಬೊಳ್ಳಾಯಿ, ಸುನಿತಾ ನಿತಿನ್ ಮಾರ್ನಬೈಲ್, ಯಶೋಧರ ಕಡಂಬಳಿಕೆ, ಸದಸ್ಯರಾದ ಪ್ರಶಾಂತ್ ಅಮೀನ್, ನಾಗೇಶ್ ಪೂಜಾರಿ ಏಲಬೆ ಯತೀಶ್ ಬೊಳ್ಳಾಯಿ, ವಿಘ್ನೇಶ್ ಬೊಳ್ಳಾಯಿ, ಸುದೀಪ್ ಸಾಲ್ಯಾನ್ ರಾಯಿ ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕೆ, ನಾಗೇಶ್ ಪೊನ್ನೋಡಿ, ಶಿವಾನಂದ ಎo ,ಅರುಣ್ ಕುಮಾರ್, ಗಣೇಶ್ ಪೂಂಜರೆಕೋಡಿ, ಹರೀಶ್ ಕೋಟ್ಯಾನ್ ಕುದನೆ, ರಾಜೇಶ್ ಸುವರ್ಣ ಉಪಸ್ಥಿತರಿದ್ದರು.

ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು ಸ್ವಾಗತಿಸಿದರು. ಭಜನಾ ಸಂಕೀರ್ತನೆಯ ಸಂಗೀತದಲ್ಲಿ ರಾಜೇಶ್ ಅಮ್ಟೂರು, ಸಾತ್ವಿಕ್ ದೇರಾಜೆ , ವಿನಯ ಆಚಾರ್ಯ ಸಹಕರಿಸಿದರು. ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಹರೀಶ್ ಸಾಲ್ಯಾನ್ ಅಜೆಕಲ ಧನ್ಯವಾದ ನೀಡಿದರು.

LEAVE A REPLY

Please enter your comment!
Please enter your name here