ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಗುರುತತ್ವವಾಹಿನಿ ಮಾಲಿಕೆ 61
ಕಲ್ಲಡ್ಕ : ಬ್ರಹ್ಮಶ್ರೀ ನಾರಾಯಣಗುರುಗಳು ಮಾನವತೆಯ ಜ್ಯೋತಿ. ಅಂಧಕಾರ, ಅಸಮಾನತೆ, ಅಹಂಕಾರ ಮತ್ತು ಅಜ್ಞಾನ ರಾತ್ರಿಗಳಲ್ಲಿ ಅವರು ಬಂದು “ಒಂದು ಜಾತಿ, ಒಂದು ಧರ್ಮ, ಒಂದು ದೇವರು ” ಎನ್ನುವ ಬೆಳಕಿನ ದೀಪ ಹಚ್ಚಿದರು.ಜ್ಞಾನದ ಬೆಳಕು, ಸಮಾನತೆಯ ಬೆಳಕು, ಪ್ರೀತಿಯ ಬೆಳಕು ನೀಡಿದ ಗುರುಗಳು ಮನುಕುಲದ ದಾರಿದೀಪದ ಬೆಳಕು ನೀಡಿದರು ಎಂದು ಯುವವಾಹಿನಿ ಬಂಟ್ವಾಳ ಘಟಕದ ನಿಕಟಪೂರ್ವ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ತಿಳಿಸಿದರು ಅವರು ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ನವೆಂಬರ್ 27 ಗುರುವಾರ ವೀರಕಂಭ ಜಯಪ್ರಕಾಶ್ ತೆಕ್ಕಿಪಾಪು ಇವರ ಮನೆಯಲ್ಲಿ ನಡೆದ
ಗುರುತತ್ವವಾಹಿನಿ ಮಾಲಿಕೆ 61 ರಲ್ಲಿ ಗುರುಸಂದೇಶ ನೀಡಿದರು .
ಯುವವಾಹಿನಿ ಬಂಟ್ವಾಳ ಘಟಕದ ಉಪಾಧ್ಯಕ್ಷ ಕಿರಣ್‌ರಾಜ್ ಪೂಂಜರೆಕೋಡಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.ಆರೋಗ್ಯ ನಿಧಿ ಹಸ್ತಾಂತರ : ವೇಣುಗೋಪಾಲ್ ಪೂಜಾರಿ ವೀರಕಂಭ, ರಕ್ಷಿತ್ ಪೂಜಾರಿ ಗಣೇಶ್‌ನಗರ, ಹಾಗೂ ತಿಮ್ಮಪ್ಪ ಪೂಜಾರಿ ಪುಳಿತ್ತಡಿ ಇವರುಗಳ ಚಿಕಿತ್ಸಾ ವೆಚ್ಚಕ್ಕಾಗಿ ವೀರಕಂಭ ಬಿಲ್ಲವ ಗ್ರಾಮ ಸಮಿತಿಯ ವತಿಯಿಂದ ರೂ 30,000/- ಆರೋಗ್ಯ ನಿಧಿ ಹಸ್ತಾಂತರ ಮಾಡಲಾಯಿತು.ಕಲ್ಲಡ್ಕ ವಲಯ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ನಿಯೋಜಿತ ಅಧ್ಯಕ್ಷ ಚಂದ್ರಶೇಖರ್ ಸಾಲಿಯನ್, ವೀರಕಂಭ ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷ ಪ್ರಶಾಂತ್ ತೆಕ್ಕಿಪಾಪು ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ದನ ಪೂಜಾರಿ ಗೊಳಿಮಾರ್, ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷ ಶಿವರಾಜ್ ಪಿ.ಆರ್, ಮಾಜಿ ಅಧ್ಯಕ್ಷ ಹರೀಶ್ ಪೂಜಾರಿ ಬಾಕಿಲ, ನಿವೃತ್ತ ಸೈನಿಕ ಚಂದ್ರಶೇಖರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷರುಗಳು, ಸದಸ್ಯರುಗಳು, ವೀರಕಂಭ ಬಿಲ್ಲವ ಗ್ರಾಮ ಸಮಿತಿಯ ಪದಾಧಿಕಾರಿಗಳು ಸದಸ್ಯರುಗಳು, ತೆಕ್ಕಿ ಪಾಪ್ ಜಯಪ್ರಕಾಶ್ ರವರ ಹಿತೈಷಿಗಳು ಭಾಗವಹಿಸಿದ್ದರು. ಯುವವಾಹಿನಿ ಬಂಟ್ವಾಳ ಘಟಕದ ಸಮಾಜ ಸೇವಾ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ, ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಹರೀಶ್ ಸಾಲ್ಯಾನ್ ಅಜೆಕಲ ವಂದಿಸಿದರು.

