ನಾರಾಯಣಗುರುಗಳ ಸಂದೇಶ ಮೌಲ್ಯಾಧಾರಿತ ಬದುಕಿಗೆ ದಾರಿದೀಪವಾಗಿವೆ : ನವೀನ್ ಶಾಂತಿ

0
23

ಅಜಿಲಮೊಗರು : ನಾರಾಯಣ ಗುರುಗಳು ಸದಾ ಶಾಂತಿ, ಮಾನವತೆಯುಳ್ಳ ಸಮಾಜ ನಿರ್ಮಾಣಕ್ಕೆ ಒತ್ತಾಯಿಸಿದರು. ಅವರು ಶಿಕ್ಷಣದ ಮಹತ್ವವನ್ನು ಒತ್ತಿಹೇಳುತ್ತಾ, ಸಂಸ್ಕಾರಯುತ ಜೀವನವೈಖರಿಯನ್ನು ಬೆಳೆಸುವ ಅಗತ್ಯವಿದೆ ಎಂದು ಹೇಳಿದರು. ಅವರ ತತ್ವಗಳು ಮಾತ್ರವಲ್ಲ, ಅವರು ನಡೆಸಿದ ಸಾಮಾಜಿಕ ಚಟುವಟಿಕೆಗಳು ಕೂಡ ಹಸಿವಿಲ್ಲದ ಸಮಾಜ, ಜಾತಿಹೀನ ಸಮಾಜ, ಮೌಲ್ಯಾಧಾರಿತ ಬದುಕಿಗೆ ದಾರಿದೀಪವಾಗಿವೆ.
ಹೀಗಾಗಿ, ಮಕ್ಕಳನ್ನು ಚಿಕ್ಕಂದಿನಲ್ಲಿಯೇ ಸಂಸ್ಕಾರಯುತ ಕಾರ್ಯಕ್ರಮಗಳಲ್ಲಿ ತೊಡಗಿಸುವುದು ಮುಖ್ಯವಾಗಿದೆ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅರ್ಚಕರಾದ ನವೀನ್ ಶಾಂತಿ ತಿಳಿಸಿದರು

ಅವರು ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ, ಅಜಿಲಮೊಗರು ಯಕ್ಷಚಿಗುರು ಕಲಾ ತಂಡದ ಆತಿಥ್ಯದಲ್ಲಿ
ಅಜಿಲಮೊಗರು ಅಡ್ಯಾಲ್ ನಾರಾಯಣ ಗುರು ವೇದಿಕೆಯಲ್ಲಿ ನಡೆದ ಗುರುತತ್ವವಾಹಿನಿ ಭಜನಾ ಸಂಕೀರ್ತನೆ 54ರಲ್ಲಿ ಗುರು ಸಂದೇಶ ನೀಡಿದರು

ಈ ಸಂದರ್ಭದಲ್ಲಿ
ಅಕ್ಷತಾ ನವೀನ್ ಶಾಂತಿ ಯಕ್ಷ ಚಿಗುರು ಕಲಾ ತಂಡ ಆಡ್ಯಾಲ್ ಸಂಚಾಲಕರು ಹಾಗೂ ಯಕ್ಷಗಾನ ತರಬೇತುದಾರರು ಶಶಿಧರ ಬಾಚಕೆರೆ
ಯುವವಾಹಿನಿ ಬಂಟ್ವಾಳ ಘಟಕದ ಕಾರ್ಯದರ್ಶಿ ಮಧುಸೂದನ್ ಮದ್ವ, ನಿರ್ದೇಶಕರಾದ ಪ್ರಜಿತ್ ಅಮೀನ್ ಏರಮಲೆ, ಮಹೇಶ್ ಬೊಳ್ಳಾಯಿ, ಉದಯ ಮೇನಾಡು ಯಶೋಧರ ಕಡಬಳಿಕೆ ಸದಸ್ಯರಾದ ಪ್ರಶಾಂತ್ ಅಮೀನ್, ಹರಿಣಾಕ್ಷಿ ನಾವೂರು ನಾಗೇಶ್ ಪೂಜಾರಿ ಏಲಾಬೆ ವಿಘ್ನೇಶ್ ಬೊಳ್ಳಾಯಿ ಯತೀಶ್ ಬೊಳ್ಳಾಯಿ, ಸುದೀಪ್ ಸಾಲ್ಯಾನ್ ರಾಯಿ ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕೆ, ನಾಗೇಶ್ ಪೊನ್ನೋಡಿ, ಶಿವಾನಂದ ಎo ,ಅರುಣ್ ಕುಮಾರ್, ಹರೀಶ್ ಕೋಟ್ಯಾನ್ ಕುದನೆ, ಉಪಸ್ಥಿತರಿದ್ದರು

ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು ಸ್ವಾಗತಿಸಿದರು. ಭಜನಾ ಸಂಕೀರ್ತನೆಯ ಸಂಗೀತದಲ್ಲಿ ರಾಜೇಶ್ ಅಮ್ಟೂರು, ಕೌಶಿಕ್ ಮಂಚನಾಡಿ, ಸಾತ್ವಿಕ್ ದೇರಾಜೆ , ವಿನಯ್ ಆಚಾರ್ಯ, ಶ್ರೇಯಸ್ ಆಚಾರ್ಯ ಸಹಕರಿಸಿದರು ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಹರೀಶ್ ಸಾಲ್ಯಾನ್ ಅಜೆಕಲ ಧನ್ಯವಾದ ನೀಡಿದರು.

LEAVE A REPLY

Please enter your comment!
Please enter your name here