ನಾಸ್ ಕಾಂ ಫೌಂಡೇಷನ್ ಮತ್ತು ಅಪ್ಲೈಡ್ ಮೆಟೀರಿಯಲ್ಸ್ ಇಂಡಿಯಾ ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಸ್ಟೆಮ್ ಶಿಕ್ಷಣದ ಪ್ರಾಯೋಗಿಕ ತರಬೇತಿಗೆ ಸಹಯೋಗ

0
65

ಈ ಉಪಕ್ರಮವು ಪ್ರಾಯೋಗಿಕ ಸ್ಟೆಮ್ ಕಲಿಕೆ ಮತ್ತು ಡಿಜಿಟಲ್ ಲಭ್ಯತೆಯನ್ನು ಏಳು ಶಾಲೆಗಳಲ್ಲಿ ತಂದಿದ್ದು ಶೈಕ್ಷಣಿಕ ಸಮಾನತೆ ಮತ್ತು ಟೈಯರ್ 2 ಮತ್ತು ಟೈಯರ್ 3 ನಗರಗಳ ಭವಿಷ್ಯದ ಅನ್ವೇಷಕರ ಸಬಲೀಕರಣ ಕರ್ನಾಟಕ, ಭಾರತ, ಡಿಸೆಂಬರ್ 10, 2025 : ಸಮಾನ ಶಿಕ್ಷಣ ನೀಡುವ ಮತ್ತು ಆವಿಷ್ಕಾರ ಉತ್ತೇಜನ ಮಾಡುವ ಕಾರ್ಯತಂತ್ರೀಯ ಉಪಕ್ರಮದಲ್ಲಿ ನಾಸ್ ಕಾಂ ಫೌಂಡೇಷನ್, ಅಪ್ಲೈಡ್ ಮೆಟೀರಿಯಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ಏಳು ಅತ್ಯಾಧುನಿಕ ಸ್ಟೆಮ್ (STEM)ಪ್ರಯೋಗಾಲಯಗಳನ್ನು ಕೋಲಾರ ಜಿಲ್ಲೆಯ ಮಾಲೂರಿನ ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭಿಸಿದೆ. ಈ ಉಪಕ್ರಮವು ತನ್ನ ಉದ್ಯಮ ಕಾರ್ಯತಂತ್ರದ ಉದ್ದೇಶಕ್ಕೆ ಬದ್ಧವಾಗಿದ್ದು ತಂತ್ರಜ್ಞಾನ ನಾಯಕತ್ವವನ್ನು ಸ್ಥಳೀಯ ಸಮುದಾಯಗಳ ಮೇಲೆ ಅರ್ಥಪೂರ್ಣ ಪರಿಣಾಮ ಬೀರಲು ಒಗ್ಗೂಡಿಸುತ್ತದೆ. 8 ರಿಂದ 12ನೇ ತರಗತಿಗಳ ವಿದ್ಯಾರ್ಥಿಗಳಿಗೆ ಡಿಜಿಟಲ್ ಲಭ್ಯತೆ ಮತ್ತು ಅನುಭವಪೂರ್ವಕ ಕಲಿಕೆಯ ಸದೃಢಗೊಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ವಿಜ್ಞಾನ, ತಂತ್ರಜ್ಞಾನ ಮತ್ತು ಗಣಿತಗಳ ಪ್ರಾಯೋಗಿಕ ಅರಿವು ನೀಡುತ್ತದೆ. ಶಿಕ್ಷಕರು ಆಧುನಿಕ ಸ್ಟೆಮ್ ಬೋಧನಾ ವಿಧಾನ, ಲ್ಯಾಬ್ ನಿರ್ವಹಣೆ ಮತ್ತು ಡಿಜಿಟಲ್ ಸಾಧನಗಳಲ್ಲಿ ವಿಶೇಷ ತರಬೇತಿ ಪಡೆಯಲಿದ್ದು ಬೋಧನೆಯ ಗುಣಮಟ್ಟ ಮತ್ತು ವಿದ್ಯಾರ್ಥಿ ಫಲಿತಾಂಶಗಳಲ್ಲಿ ಸುಧಾರಣೆ ತರುತ್ತದೆ.
ನಾಸ್ ಕಾಂ ಫೌಂಡೇಷನ್ ಸಿಇಒ ಜ್ಯೋತಿ ಶರ್ಮಾ, “ಭಾರತದ ತೀವ್ರವಾಗಿ ವಿಕಾಸಗೊಳ್ಳುತ್ತಿರುವ ಡಿಜಿಟಲ್ ಕ್ಷೇತ್ರದಲ್ಲಿ ತಂತ್ರಜ್ಞಾನ ಕೌಶಲ್ಯಗಳು ಅವಕಾಶಕ್ಕೆ ಹೆಬ್ಬಾಗಿಲಾಗಿವೆ. ಆದರೂ ದುರ್ಬಲ ಸಮುದಾಯದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಸ್ಟೆಮ್ ಕಲಿಕೆಯ ಲಭ್ಯತೆ ಕೊರತೆಯಿದೆ. ಅಪ್ಲೈಡ್ ಮೆಟೀರಿಯಲ್ಸ್ ಇಂಡಿಯಾ ಜೊತೆಯಲ್ಲಿ ನಮ್ಮ ಸಹಯೋಗವು ಸ್ಟೆಮ್ ಕಲಿಕೆಯನ್ನು ನೇರವಾಗಿ ಸರ್ಕಾರಿ ಶಾಲೆಯ ತರಗತಿಗಳಿಗೆ ತರುತ್ತಿದ್ದು ವಿದ್ಯಾರ್ಥಿಗಳಿಗೆ ಪ್ರಯೋಗ, ಸೃಜನಶೀಲತೆ ಮತ್ತು ಅನ್ವೇಷಣೆಯ ಮೂಲ ಕಲಿಯಲು ಅವಕಾಶ ನೀಡುತ್ತದೆ. ವಿದ್ಯಾರ್ಥಿ ಕಲಿಕೆ ಮತ್ತು ಶಿಕ್ಷಕರ ಸಾಮರ್ಥ್ಯ ಸದೃಢಗೊಳಿಸಿ ನಾವು ವಿಶ್ವಾಸದ ಕಲಿಕಾರ್ಥಿಗಳ ತಲೆಮಾರನ್ನು ಪೋಷಿಸುತ್ತಿದ್ದೇವೆ ಮತ್ತು ಗುಣಮಟ್ಟದ ಶಿಕ್ಷಣ ಹಾಗೂ ತಂತ್ರಜ್ಞಾನದ ವಿಶ್ವವನ್ನು ಯುವಜನರು ಆವಿಷ್ಕರಿಸಲು ಅವಕಾಶ ಸೃಷ್ಟಿಸುತ್ತಿದ್ದೇವೆ” ಎಂದರು.
ಈ ಉಪಕ್ರಮದ ಮೂಲಕ ಹೊಸದಾಗಿ ಅಭಿವೃದ್ಧಿಪಡಿಸಲಾದ ಸ್ಟೆಮ್ ಪ್ರಯೋಗಾಲಯಗಳು ವಿದ್ಯಾರ್ಥಿಗಳಿಗೆ ಭೌತಶಾಸ್ತ್ರದ ಪರಿಕಲ್ಪನೆಗಳು, ಎಂಜಿನಿಯರಿಂಗ್ ಸಿದ್ಧಾಂತಗಳು, ಆವಿಷ್ಕಾರ ಮತ್ತು ಡಿಸೈನ್ ಥಿಂಕಿಂಗ್, ರೊಬೊಟಿಕ್ಸ್, ಪ್ರೋಗ್ರಾಮಿಂಗ್ ಮತ್ತು ಗಣಿತಶಾಸ್ತ್ರವನ್ನು ಪ್ರಾಯೋಗಿಕ ಮತ್ತು ಸಕ್ರಿಯ ವಿಧಾನದಲ್ಲಿ ಅರಿಯಲು ಅವಕಾಶ ನೀಡುತ್ತವೆ. ಪ್ರತಿ ಪ್ರಯೋಗಾಲಯವೂ ರೊಬೊಟಿಕ್ಸ್ ಕಿಟ್ ಗಳು, ಡಿಐವೈ ಪ್ರಯೋಗದ ಕಿಟ್ ಗಳು. ಟೇಬಲ್-ಟಾಪ್ ಮಾದರಿಗಳು, ವಿಜ್ಞಾನ ಮತ್ತು ಗಣಿತಶಾಸ್ತ್ರದ ಸಾಧನಗಳು ಮತ್ತಿತರೆ ಕಲಿಕಾ ವಸ್ತುಗಳೊಂದಿಗೆ ಸಜ್ಜಾಗಿದ್ದು ವಿದ್ಯಾರ್ಥಿಗಳಿಗೆ ಸೈದ್ಧಾಂತಿಕ ಪಾಠಗಳನ್ನು ನಿಜ ವಿಶ್ವದ ಬಳಕೆಯಲ್ಲಿ ಕಲಿಯಲು ನೆರವಾಗುತ್ತದೆ.
ಜಿಐಸಿ ಬಾಲಕಿಯರ ಶಾಲೆಯಲ್ಲಿ ಸ್ಟೆಮ್ ಲ್ಯಾಬ್ ಉದ್ಘಾಟಿಸಿದ ಅಪ್ಲೈಡ್ ಮೆಟೀರಿಯಲ್ಸ್ ಇಂಡಿಯಾ ಅಧ್ಯಕ್ಷ ಅವಿ ಅವುಲಾ, “ಭಾರತದ ಮುಂದಿನ ಆವಿಷ್ಕಾರದ ದಶಕವನ್ನು ಸ್ಟೆಮ್ ನಲ್ಲಿ ಸದೃಢ ತಳಹದಿಯೊಂದಿಗೆ ನಿರ್ಮಿಸಲಾಗಿದೆ. ಅಪ್ಲೈಡ್ ಮೆಟೀರಿಯಲ್ಸ್ ನಲ್ಲಿ ನಾವು ತಂತ್ರಜ್ಞಾನ ನಾಯಕತ್ವವನ್ನು ಅರ್ಥಪೂರ್ಣ ಸಮುದಾಯದ ಪರಿಣಾಮದೊಂದಿಗೆ ಹೊಂದಿಸಲು ಶ್ರಮಿಸುತ್ತಿದ್ದೇವೆ. ಸಮಾನ, ಪ್ರಾಯೋಗಿಕ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಸ್ತರಣೆ ಮತ್ತು ಬೋಧನೆಯ ಸಾಮರ್ಥ್ಯಗಳನ್ನು ಸದೃಢಗೊಳಿಸುವ ಮೂಲಕ ನಾವು ಟೈಯರ್-2 ಮತ್ತು ಟೈಯರ್ 3 ಸಮುದಾಯಗಳ ವಿದ್ಯಾರ್ಥಿಗಳಿಗೆ ಭವಿಷ್ಯದ ಚಿಪ್ ಡಿಸೈನರ್ ಗಳು, ಮೆಟೀರಿಯಲ್ ಸೈಂಟಿಸ್ಟ್ ಗಳು ಮತ್ತು ಸಮಸ್ಯೆ ಪರಿಹರಿಸುವವರಾಗಿ ಕಾಣುವಂತೆ ಮಾಡುತ್ತಿದ್ದೇವೆ. ಹೀಗೆ ನಾವು ಲಭ್ಯತೆ ವಿಸ್ತರಿಸುವ, ವಿಶ್ವಾಸ ನಿರ್ಮಿಸುವ ಮತ್ತು ಭಾರತ ಅನ್ವೇಷಿಸಬಹುದಾದ ಪ್ರತಿಭೆಯನ್ನು ಭಾರತಕ್ಕೆ ಮಾತ್ರವಲ್ಲದೆ ವಿಶ್ವಕ್ಕೆ ರೂಪಿಸುತ್ತಿದ್ದೇವೆ” ಎಂದರು.
ಈ ಪ್ರಯೋಗಾಲಯಗಳ ಅನುಷ್ಠಾನ ರಚನಾತ್ಮಕ ವಿಧಾನ ಅನುಸರಿಸುತ್ತಿದ್ದು ಪ್ರತಿ ಶಾಲೆಯ ಮೂಲಸೌಕರ್ಯವನ್ನು ಮೌಲ್ಯಮಾಪನ ಮಾಡಿ ಸ್ಟೆಮ್ ಸಾಧನ ಮತ್ತು ಪೀಠೋಪಕರಣ ಅನುಷ್ಠಾನಗೊಳಿಸುತ್ತದೆ. ಶಿಕ್ಷಕರಿಗೆ ವಿಸ್ತಾರ ಸಾಮರ್ಥ್ಯವೃದ್ಧಿ ತರಬೇತಿ ಪಡೆಯುತ್ತಾರೆ ಮತ್ತು ವಿದ್ಯಾರ್ಥಿಗಳು ಆವಿಷ್ಕಾರ ಮತ್ತು ಡಿಸೈನ್ ಥಿಂಕಿಂಗ್ ನಲ್ಲಿ ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತಾರೆ. ಈ ಕಾರ್ಯಕ್ರಮವು ಸತತ ಮೇಲ್ವಿಚಾರಣೆ ಮತ್ತು ಸ್ಥಳದಲ್ಲಿನ ಬೆಂಬಲ ಹೊಂದಿದ್ದು ಆನ್ಲೈನ್ ಸಿಸ್ಟಂ ಮೂಲಕ ಪ್ರಯೋಗಾಲಯ ಚಟುವಟಿಕೆಗಳು, ಪ್ರಗತಿ ಮತ್ತು ಕಲಿಕಾ ಫಲಿತಾಂಶಗಳನ್ನು ಗಮನಿಸುತ್ತದೆ.
ಈ ಉಪಕ್ರಮವನ್ನು ಸ್ಟೆಮ್ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಹೆಚ್ಚಿಸಲು ಮತ್ತು ಸ್ಟೆಮ್ ಉದ್ಯೋಗಗಳಲ್ಲಿ ಸದೃಢ ಅರಿವು ಮೂಡಿಸಲು ವಿನ್ಯಾಸಗೊಳಿಸಲಾಗಿದೆ. ಇದು ಸ್ಟೆಮ್ ಪಠ್ಯಕ್ರಮ ಪೂರೈಕೆಯಲ್ಲಿ ಶಿಕ್ಷಕರ ವಿಶ್ವಾಸ ಹೆಚ್ಚಿಸುವ, ವಿದ್ಯಾರ್ಥಿಗಳಲ್ಲಿ ಸಮಸ್ಯೆ ಪರಿಹರಿಸುವ ಸಾಮರ್ಥ್ಯವೃದ್ಧಿ ಮತ್ತು ಅವರಿಗೆ ಅವರ ಉತ್ತಮ ಯೋಜನೆಗಳ ಮೂಲಕ ಅವರ ಸೃಜನಶೀಲತೆ ಪ್ರದರ್ಶಿಸಲು ಅವಕಾಶ ನೀಡುತ್ತದೆ. ರೊಬೊಟಿಕ್ಸ್ ಕಿಟ್ಸ್ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಂತಹ ಸಾಧನಗಳ ಲಭ್ಯತೆಯು ಅವರಿಗೆ ವಿಮರ್ಶಾತ್ಮಕ ಚಿಂತನೆ, ಮುಕ್ತ ಆವಿಷ್ಕಾರ ಮತ್ತು ನೈಜ ವಿಶ್ವದ ಸವಾಲುಗಳಿಗೆ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಉತ್ತೇಜಿಸಲಾಗುತ್ತದೆ.

LEAVE A REPLY

Please enter your comment!
Please enter your name here